ಕಾಫಿ ಜೊತೆ ಕೋಡುಬಳೆ, ಮಾಡುವ ವಿಧಾನ
ಹುಬ್ಬಳ್ಳಿ, 06 ಮಾರ್ಚ್ (ಹಿ.ಸ.) : ಆ್ಯಂಕರ್ : ಪ್ರತಿದಿನ ಸಂಜೆ ದಿನನಿತ್ಯದ ಆಯಾಸ ಕಡಿಮೆ ಮಾಡಿಕೊಳ್ಳಲು ಕಾಫಿ ಕುಡಿಯುವುದು ಸಾಮಾನ್ಯ, ಕಾಫಿ ಜೊತೆ ಕೋಡುಬಳೆ ಇದ್ದರೆ ಇನ್ನೂ ಉತ್ಸಾಹ. ತ್ವರಿತವಾಗಿ ಕೋಡುಬಳೆ ಮಾಡುವ ವಿಧಾನದ ಪರಿಚಯಿಸುವುದು ಇಂದಿನ ಲೇಖನ : ಮಾಡುವ ವಿಧಾನ ಮೊದಲಿಗೆ ಅಗತ್ಯಕ್ಕೆ ತಕ್ಕಂತೆ
Kodubale


ಹುಬ್ಬಳ್ಳಿ, 06 ಮಾರ್ಚ್ (ಹಿ.ಸ.) :

ಆ್ಯಂಕರ್ : ಪ್ರತಿದಿನ ಸಂಜೆ ದಿನನಿತ್ಯದ ಆಯಾಸ ಕಡಿಮೆ ಮಾಡಿಕೊಳ್ಳಲು ಕಾಫಿ ಕುಡಿಯುವುದು ಸಾಮಾನ್ಯ, ಕಾಫಿ ಜೊತೆ ಕೋಡುಬಳೆ ಇದ್ದರೆ ಇನ್ನೂ ಉತ್ಸಾಹ. ತ್ವರಿತವಾಗಿ ಕೋಡುಬಳೆ ಮಾಡುವ ವಿಧಾನದ ಪರಿಚಯಿಸುವುದು ಇಂದಿನ ಲೇಖನ :

ಮಾಡುವ ವಿಧಾನ

ಮೊದಲಿಗೆ ಅಗತ್ಯಕ್ಕೆ ತಕ್ಕಂತೆ ಹುರಿಗಡಲೆ, ಮೆಣಸಿನಕಾಯಿಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು.

ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ ಅದಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಚಿರೋಟಿ ರವೆ ಹಾಕಿ ಸಣ್ಣ ಪ್ರಮಾಣದ ಉರಿಯಲ್ಲಿ ಘಮಘಮ ಪರಿಮಳ ಬರುವವರೆಗೂ ಹುರಿದುಕೊಳ್ಳಬೇಕು. ನಂತರ ಮೈದಾಹಿಟ್ಟು ಹಾಕಿ ಎರಡು ನಿಮಿಷ ಸಣ್ಣ ಪ್ರಮಾಣದ ಉರಿಯಲ್ಲಿ ಹುರಿದುಕೊಳ್ಳಬೇಕು. ಅದಾದ ನಂತರ ಒಂದು ಲೋಟ ಅಕ್ಕಿ ಹಿಟ್ಟು ಹಾಕಿ ಅದು ಬಿಸಿಯಾಗುವವರೆಗೂ ಒಂದು ನಿಮಿಷ ಹುರಿದುಕೊಳ್ಳಬೇಕು.

ಒಂದು ಬಾಣಲೆಯಲ್ಲಿ ಹುರಿದುಕೊಂಡ ಎಲ್ಲಾ ಹಿಟ್ಟುಗಳು ಅದರ ಜೊತೆಗೆ ಮಿಕ್ಸಿ ಮಾಡಿಕೊಂಡ ಹುರಿಗಡಲೆ ಮತ್ತು ಒಣಮೆಣಸಿನಕಾಯಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಒಂದು ಚಮಚ ಜೀರಿಗೆ, ಸ್ವಲ್ಪ ಇಂಗು, ಉಪ್ಪು ಹಾಕಿ ಮಿಶ್ರಣ ಮಾಡಿಕೊಂಡು ಒಂದು ಸೌಟು ಬಿಸಿ ಎಣ್ಣೆ, ಸ್ವಲ್ಪ ನೀರನ್ನು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ಈ ಹಿಟ್ಟನ್ನು 10 ನಿಮಿಷಗಳ ಕಾಲ ಮುಚ್ಚಿಡಬೇಕು.

10 ನಿಮಿಷಗಳ ನಂತರ ಸಿದ್ಧಪಡಿಸಿಕೊಂಡ ಈ ಹಿಟ್ಟಿನಿಂದ ಬಳೆಗಳ ಆಕಾರದಲ್ಲಿ ಮಾಡಿ ಕೋಡುಬಳೆಗಳನ್ನು ತಯಾರಿಸಿಕೊಳ್ಳಬೇಕು.

ತಯಾರಿಸಿಕೊಂಡ ಕೋಡುಬಳೆಗಳನ್ನು ಬಾಣಲೆಯಲ್ಲಿರುವ ಕಾದ ಎಣ್ಣೆಗೆ ಬಿಡಬೇಕು. ಸಣ್ಣ ಉರಿಯಲ್ಲಿ ಅರಿಶಿನ ಬಣ್ಣ ಬರುವವರೆಗೂ ಚೆನ್ನಾಗಿ ಬೇಯಿಸಿಕೊಂಡರೆ, ಕಾಫಿ ಟೀ ಜೊತೆ ಸವಿಯಲು ಕೋಡುಬಳೆ ಸಿದ್ಧವಾಗಿರುತ್ತವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande