ತುಂಗಭದ್ರ ಮಡಿಲಿನ ಹಚ್ಚಹಸಿರಿನ ವನ ಈ ಪಂಪಾವನ
ಮುನಿರಾಬಾದ್, 05 ಮಾರ್ಚ್ (ಹಿ.ಸ.) : ಆ್ಯಂಕರ್ : ತುಂಗಭದ್ರ ಮಡಿಲಿನ ಹಚ್ಚಹಸಿರಿನ ವನ ಈ ಪಂಪಾವನ....ಉದ್ಯಾನಗಳೆಂದರೆ ಅಲ್ಲಿ ಶಾಂತಿಯು ಉಸಿರಾಡಬೇಕು. ಮನಸ್ಸು ಮತ್ತು ಬುದ್ಧಿ ನೆಮ್ಮದಿಯಿಂದ ವಿರಮಿಸುತ್ತಾ, ಉಲ್ಲಾಸಭರಿತವಾಗಿರಬೇಕು ಎಂಬುದು ಜಪಾನಿಯರ ಮೂಲ ಉದ್ದೇಶ. ಇವರು ವಿನ್ಯಾಸ ಮಾಡುವ ಉದ್ಯಾನಗಳ ಕಲ
ತುಂಗಭದ್ರ ಮಡಿಲಿನ ಹಚ್ಚಹಸಿರಿನ ವನ ಈ ಪಂಪಾವನ


ತುಂಗಭದ್ರ ಮಡಿಲಿನ ಹಚ್ಚಹಸಿರಿನ ವನ ಈ ಪಂಪಾವನ


ತುಂಗಭದ್ರ ಮಡಿಲಿನ ಹಚ್ಚಹಸಿರಿನ ವನ ಈ ಪಂಪಾವನ


ತುಂಗಭದ್ರ ಮಡಿಲಿನ ಹಚ್ಚಹಸಿರಿನ ವನ ಈ ಪಂಪಾವನ


ತುಂಗಭದ್ರ ಮಡಿಲಿನ ಹಚ್ಚಹಸಿರಿನ ವನ ಈ ಪಂಪಾವನ


ತುಂಗಭದ್ರ ಮಡಿಲಿನ ಹಚ್ಚಹಸಿರಿನ ವನ ಈ ಪಂಪಾವನ


ಮುನಿರಾಬಾದ್, 05 ಮಾರ್ಚ್ (ಹಿ.ಸ.) :

ಆ್ಯಂಕರ್ : ತುಂಗಭದ್ರ ಮಡಿಲಿನ ಹಚ್ಚಹಸಿರಿನ ವನ ಈ ಪಂಪಾವನ....ಉದ್ಯಾನಗಳೆಂದರೆ ಅಲ್ಲಿ ಶಾಂತಿಯು ಉಸಿರಾಡಬೇಕು. ಮನಸ್ಸು ಮತ್ತು ಬುದ್ಧಿ ನೆಮ್ಮದಿಯಿಂದ ವಿರಮಿಸುತ್ತಾ, ಉಲ್ಲಾಸಭರಿತವಾಗಿರಬೇಕು ಎಂಬುದು ಜಪಾನಿಯರ ಮೂಲ ಉದ್ದೇಶ. ಇವರು ವಿನ್ಯಾಸ ಮಾಡುವ ಉದ್ಯಾನಗಳ ಕಲೆ ಮನುಷ್ಯನಲ್ಲಡಗಿರುವ ಶಕ್ತಿ-ಚೈತನ್ಯಗಳು ಸದಾಕಾಲ ಅರಳುವುದಕ್ಕೆ ಎಡೆ ಮಾಡಿಕೊಡುತ್ತವೆ.

ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿದ್ದ ನಮ್ಮ ಕನ್ನಡ ನಾಡು ವೈವಿಧ್ಯಮಯ ನಿಸರ್ಗ ತಾಣಗಳಿಂದ ಕಂಗೊಳಿಸುತ್ತಿದ್ದ ಸಮೃದ್ಧ ನಾಡಾಗಿತ್ತೆಂದು ಇತಿಹಾಸ ಹೇಳುತ್ತದೆ.

ಇಲ್ಲಿನ ಪ್ರಕೃತಿ- ಪರಿಸರ, ಚೆಲುವಿನ ಗಿರಿಧಾಮಗಳಿಂದ ಪ್ರಭಾವಿತನಾಗಿ ಆದಿಕವಿ ಪಂಪನು.. 'ಮರಿ ದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೂಳ್ ವನವಾಸಿ ದೇಶದೊಳ್ ಎಂದು ಬಣ್ಣಿಸಿದ್ದಾನೆ. ಇಂತಹ ನೋಡುಗರ ಕಣ್ ಮನಸೆಳೆಯುವ ಪಂಪವನವೂ ಒಂದು.

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನ ತುಂಗಭದ್ರ ಯೋಜನಾ ಡ್ಯಾಮ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಪಂಪಾವನ, ತುಂಗಭದ್ರೆಯ ಮಡಿಲಿನಲ್ಲಿ ಅತ್ಯಂತ ಆಕರ್ಷಿತವಾಗಿ ಸಿಂಗರಿಸಿಕೊಂಡು ಕಂಗೊಳಿಸುತ್ತಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ 8 ಕಿ.ಮೀ, ವಿಶ್ವವಿಖ್ಯಾತ ಹಂಪಿಯಿಂದ 21ಕಿ.ಮಿ, ಜಿಲ್ಲೆಯ ಕೇಂದ್ರ ಸ್ಥಳದಿಂದ 20 ಕಿಲೋ ಮೀಟರ್ ದೂರದಲ್ಲಿದೆ. ಕರ್ನಾಟಕ ರಾಜ್ಯದ ಆರು ವಿಸ್ತಾರವಾದ ಸಾರ್ವಜನಿಕ ಉದ್ಯಾನವನಗಳಲ್ಲಿ ಪಂಪಾವನವೂ ಸಹ ಒಂದಾಗಿದೆ.

ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಏಕೈಕ ಬೃಹತ್ ಉದ್ಯಾನವನವಾಗಿದೆ. ನೈಸರ್ಗಿಕವಾಗಿ ಕಲ್ಲು ಗುಡ್ಡೆಗಳಿಂದ, ತಗ್ಗು ದಿನ್ನೆಗಳಿಂದ ಹರಡಿಕೊಂಡಿರುವ 66 ಎಕರೆ ಪ್ರದೇಶವನ್ನು 1971 ರಲ್ಲಿ ಉದ್ಯಾನವನ್ನಾಗಿ ನಿರ್ಮಿಸಲಾಗಿದ್ದು, ಜಪಾನ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹಲವು ವಿನ್ಯಾಸದ ಸೇತುವೆಗಳು, ಲಾಂದ್ರಗಳು, ನೀರಿನ ಕೊಳಗಳು ಎರಡು ಭವ್ಯವಾದ ಪ್ರವೇಶ ದ್ವಾರಗಳನ್ನು ಹೊಂದಿದೆ. ವಿವಿಧ ಜಾತಿಯ ಅಲಂಕಾರಿಕ ಗಿಡಗಳು, ಪೆÇದೆಗಳು, ಬಳ್ಳಿಗಳು, ಮರಗಳನ್ನು ಬೆಳೆಸಲಾಗಿದ್ದು, ತುಂತರು ನೀರಾವರಿ, ಹನಿ ನೀರಾವರಿ ಮೂಲಕ ನೀರನ್ನು ಉಣಿಸಲಾಗುತ್ತಿದೆ.

ಅಲಂಕಾರಿಕ ಸಸ್ಯಗಳನ್ನು ಅಭಿವೃದ್ಧಿಗೊಳಿಸಿ ಇಲಾಖೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಡೀ ಉದ್ಯಾನವನವನ್ನು ಅನೇಕ ಭಾಗಗಳನ್ನಾಗಿ ಮಾಡಲಾಗಿದ್ದು, ಲಿಲ್ಲಿ ಕೊಳ ,ವೃತ್ತಾಕಾರ ಕೊಳ, ಸಂಗ್ರಹಣ ಕೊಳ, ಮೀನಿನ ಆಕಾರದ ಕೊಳ, ಪಾಮ್ ಗ್ರೂಪ್ ಪ್ರದೇಶ, ಸರೋವರ ಪ್ರದೇಶ ಮತ್ತು ಮಕ್ಕಳ ಉದ್ಯಾನವನಗಳೆಂದು ಹೆಸರಿಡಲಾಗಿದೆ.

ಅಪರೂಪವಾಗಿ ಅನೇಕ ವೃಕ್ಷ ಪ್ರಭೇದಗಳು ಸಮೃದ್ಧವಾಗಿ ಬೆಳದು ನಿಂತಿವೆ. ಉದ್ಯಾನವನದಲ್ಲಿ ಸುಂದರವೂ ಹಾಗೂ ಹಚ್ಚಹಸುರಿನ ಗಮನ ಸೆಳೆಯುವ ಹುಲ್ಲು ಹಾಸುಗಳನ್ನು ನಿರ್ಮಿಸಲಾಗಿದೆ.

ಅಲಂಕಾರದ ಹೂವಿನ ಮರಗಳಾದ ನೀಲಿ ತುರಾಯಿ ಮರ, ನಾಗಲಿಂಗ ಪುಷ್ಪ ,ಮುತ್ತುಗ, ಬೂರುಗ, ಮರಸೌತೆ, ಸುರಹೊನ್ನೆ, ಬಿಳಿ ಬೀಟೆ ಮರ, ಶ್ರೀಗಂಧ, ರಕ್ತ ಚಂದನ, ಭಿಕ್ಷೆ ಪಾತ್ರೆ ಮರ, ಕೆಂಡಸಂಪಿಗೆ, ಬಗನಿಮರ ,ಕಂಬದ ಮರ, ಕಕ್ಕೆ ನೀರು ಕಾಯಿ ಮರ, ಸೀತಾ ಅಶೋಕ ಮರ ಇತ್ಯಾದಿಗಳು ದಟ್ಟವಾಗಿ ಹೆಮ್ಮೆರಗಳಾಗಿ ಬೆಳೆದಿವೆ. 'ಮೋರೆಸೆ' ಕುಟುಂಬಕ್ಕೆ ಸೇರಿದ ಆಲ, ಗೋಣಿ, ಬಸರಿ, ಅರಳಿ ಮತ್ತು ಅತ್ತಿಮರಗಳು ವಿಶಾಲವಾಗಿ ಹರಡಿ, ಗಗನಚುಂಬಿ ಮರಗಳಾಗಿ ಬೆಳೆದಿವೆ. ಅನೇಕ ಅಲಂಕಾರಿಕ ಪೆÇದೆಗಳು ,ಸುಗಂಧ ಹೂ ಬಿಡುವ ಮರಗಳು, ಬಣ್ಣ ಬದಲಾಯಿಸುವ ಮರಗಳು, ಹೂವಿನ ಮರಗಳು ಇತ್ಯಾದಿಗಳು ದಟ್ಟವಾಗಿ ಬೆಳೆದು ಬೇರೂರಿವೆ. ಕುಬ್ಜ(ಬೋನ್ ಸಾಯಿ) ಗಿಡಗಳ ನರ್ಸರಿ ಇದ್ದು ವಿಶೇಷವಾಗಿ ಬೆಳೆಸಲಾಗುತ್ತಿದೆ. ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಜಕರಂಡಾ, ಫಿಲ್ಟೋ ಫಾರ್ಮ್, ಮಳೆ ಮರ, ಹೊಳೆ ದಾಸವಾಳ, ಕಕ್ಕೆ ಮರಗಳ ಪುμÉ್ಪೂೀತ್ಸವ ವು ಸಿಂಗಾರ ಮಾಡಿಕೊಂಡು ಉದ್ಯಾನವನಕ್ಕೆ ಸೌಂದರ್ಯವನ್ನು ಹೆಚ್ಚಿಸುತ್ತದೆ . ನಿಸರ್ಗ ಆರಾಧಕರಲ್ಲಿ ಮೈ ಮನಗಳನ್ನು ತಣಿಸಿ ಪುಳಕಿತವನ್ನುಂಟು ಮಾಡುತ್ತದೆ.

ಜಪಾನ್ ಮಾದರಿಯ ಪಗೋಡಗಳು ಈ ಪಾರ್ಕಿನಲ್ಲಿ ನಿರ್ಮಿಸಿರುವುದು ಮೆರಗನ್ನು ತಂದಿದೆ. ಕ್ರಿಸ್ತಶಕ 6ನೇ ಶತಮಾನದಲ್ಲಿ ಜಪಾನ್ ರಾಜವಂಶಸ್ಥರು ಅಪಾರ ನಿಸರ್ಗ ಪ್ರೇಮದಿಂದ, ಉದ್ಯಾನಗಳ ನಿರ್ಮಾಣಕ್ಕೆ ಹಾಗೂ ಸೌಂದರ್ಯಕ್ಕೆ ವಿಶೇಷ ಒತ್ತು ಕೊಟ್ಟರು.

ಇದರ ಪರಿಣಾಮವಾಗಿ ಇಂದು 'ಜಪಾನಿ ಉದ್ಯಾನ ಕಲೆ' ಜಾಗತಿಕವಾಗಿ ಗಮನ ಸೆಳೆದಿದೆ. ವಿಶಾಲ ಹಸಿರಿನಿಂದ ಆಕಾಶವನ್ನು ಮುಟ್ಟಲು ಮೇಲೇರುವ ಪಗೋಡಗಳು, ಹೊರಗಡೆ ಸುಡು ಬಿಸಿಲಿದ್ದರೂ ಒಳಗಡೆ ತಂಪಾದ ಅನುಭವವನ್ನು ನೀಡುತ್ತವೆ. ವಿವಿಧ ಅಂತಸ್ತುಗಳಿಂದ ನಿರ್ಮಾಣವಾಗಿದ್ದು ತಮ್ಮ ಸೌಂದರ್ಯವನ್ನು ಉಳಿಸಿಕೊಳ್ಳುತ್ತಾ ಜಪಾನಿನ ರಾಯಭಾರಿಗಳಂತೆ ಕಂಗೊಳಿಸುತ್ತಿವೆ. ಚಿತ್ತಾಕರ್ಷಕ 'ಜಪಾನಿ ಲಾಂದ್ರ'ಗಳ ವಿನ್ಯಾಸಗಳನ್ನು ಈ ಉದ್ಯಾನವನದಲ್ಲಿ ಜೋಡಿಸಿರುವುದು ಮತ್ತೊಂದು ವಿಶೇಷ. ನಾಲ್ಕು ಬಗೆಯ ಉದ್ಯಾನ ಲಾಂದ್ರಗಳಿದ್ದು, ಸ್ತಂಭಲಾಂದ್ರ, ಮುಸುಕುಲಾಂದ್ರ, ಕ್ರಿಸ್ತರ ಮಾದರಿಲಾಂದ್ರ, ಶಿಲಾಲಾಂದ್ರಗಳು ಚಂದವಾಗಿ ಅಲಂಕಾರಗೊಂಡು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ.

ಮಕ್ಕಳ ಉದ್ಯಾನವನ, ಡೈನೋಸಾರ್ ಉದ್ಯಾನವೆಂದು ಪಾರ್ಕ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ. 1989ರಲ್ಲಿ ಈ ಪಾರ್ಕ್ ನಲ್ಲಿ ಮೊದಲ ಬಾರಿಗೆ ನಡೆದ ಫಲಪುಷ್ಪ ಪ್ರದರ್ಶನಕ್ಕೆ, ಉದ್ಘಾಟನಾ ಮುಖ್ಯ ಅತಿಥಿಯಾಗಿ ತೋಟಗಾರಿಕಾ ಪಿತಾಮಹ, ಭಾರತದ ಮೂಲೆ ಮೂಲೆಗೂ ರೈತರ, ಜನಸಾಮಾನ್ಯರ ಕಸುಬಾಗಿ ತೋಟಗಾರಿಕೆಯನ್ನು ಮಾಡಿದ, ದಕ್ಷ , ಪ್ರಾಮಾಣಿಕ ಅಧಿಕಾರಿ ಡಾ. ಎಮ್. ಹೆಚ್. ಮರಿಗೌಡರು ಆಗಮಿಸಿದ್ದರು. ಮುನಿರಾಬಾದಿನ ಕೂಗಳತೆಯ ದೂರದಲ್ಲಿರುವ ಹುಲಿಗಿ ಎಂಬಾ ಗ್ರಾಮವಿದೆ ಇದೊಂದು ಪ್ರಖ್ಯಾತ ಕ್ಷೇತ್ರವಾಗಿದ್ದು ತುಂಗಭದ್ರದಡದಲ್ಲಿ 14-15 ಶತಮಾನದಿಂದಲು ವಿರಾಜಿಸಲ್ಪಡುತ್ತಿದೆ, ಇದು ಶ್ರೀ ಹುಲಿಗಮ್ಮದೇವಿಯವರ ದೇವಸ್ತಾನವಿದ್ದು, ಶಕ್ತಿಪೀಠವಾಗಿದೆ. ಸುಮಾರು 800 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ್ದು ಉತ್ತರ ಕರ್ನಾಟಕದ ಭಕ್ತರನ್ನು ಸದಾ ಆಕರ್ಷಿಸುತ್ತಿದೆ.

ಪ್ರತಿ ಮಂಗಳವಾರ, ಶುಕ್ರವಾರ ಹುಣಿಮ್ಮೆಯ ದಿನಗಳಂದು ವಿಶೇಷವಾಗಿ ಭಕ್ತರ ಸ್ತೋಮವಿರುತ್ತದೆ. ಈ ಪವಿತ್ರ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಮುನಿರಾಬಾದಿನ ಈ ಪಂಪಾವನಕ್ಕೆ ಭೇಟಿ ನೀಡುತ್ತಾರೆ. ಆನೆಗುಂದಿ-ಮುನಿರಾಬಾದ್ ರಸ್ತೆಯಲ್ಲಿರುವ ಆನೆಗುಂದಿ ಇಂದ ಸುಮಾರು 3 ಕಿ.ಮೀ ದೂರದಲ್ಲಿ ಅಂಜನಾದ್ರಿ ಪರ್ವತವಿದೆ. ಈ ದೇವಾಲಯಕ್ಕೆ ಭೇಟಿನೀಡುವ ಉತ್ತರ ಭಾರತೀಯರು ಹಾಗೂ ವಿದೇಶಿಯರು ಈ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ. ಇಡೀ ಉದ್ಯಾನವನದ ಪರಿಸರವನ್ನು ನೋಡುತ್ತಾ ಆನಂದವನ್ನು ಸವಿಯುತ್ತಾರೆ.

ಉದ್ಯಾನವನದ ಎದುರಿಗೆ ಜಿಲ್ಲಾ ಶಿಕ್ಷಣಾ ಮತ್ತು ತರಬೇತಿ ಸಂಸ್ಥೆ ಇದ್ದು ಇಲ್ಲಿ ನಡೆಯುವ ತರಬೇತಿಗಳನ್ನು ಪಡೆಯಲು ಆಗಮಿಸುವ ಶಿಕ್ಷಕರು ಈ ಉದ್ಯಾನವನದ ಜೀವ ವೈವಿಧ್ಯತೆಯನ್ನು ನೋಡಿ ಆನಂದಿಸುತ್ತಾರೆ. ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಕ್ಷೇತ್ರ ಅಧ್ಯಯನ ಮಾಡಲು ಇಲ್ಲಿಗೆ ಆಗಮಿಸುತ್ತಾರೆ.

ಇದೊಂದು ಜೀವಂತ ಪ್ರಯೋಗಶಾಲೆ ಹಾಗೂ ಅನೇಕರ ಕಣ್ಮನ ಸೆಳೆಯುವ ಆಕರ್ಷಕ ಮತ್ತು ಅಪರೂಪದ ಉದ್ಯಾನವಾಗಿದೆ. ನೂತನ ವಧು-ವರರು ಆಗಮಿಸಿ ಪ್ರಿ-ವೆಡ್ಡಿಂಗ್ ಫೆÇೀಟೋ ಶೂಟಿಂಗ್ನಲ್ಲಿ ಭಾಗವಹಿಸುತ್ತಾರೆ. ಕನ್ನಡ ಮತ್ತು ತೆಲುಗು ಚಲನ ಚಿತ್ರಗಳ ಚಿತ್ರೀಕರಣ ಈ ಪಾಕ್ರ್ನಲ್ಲಿ ನಡೆದಿರುವುದು ಮತ್ತೊಂದು ವಿಶೇಷ. ಪಂಪಾವನ ತನ್ನ ಚೆಲುವು ಚಿತ್ತಾರಗಳಿಂದ ನಿಸರ್ಗ ದೇವಿಯ ಕಣ್ಮನ ಸೆಳೆಯುವ ರಮ್ಯನೆಲೆಯಾಗಿ ಸದಾ ಕಂಗೊಳಿಸುತ್ತದೆ.

- ಹೆಚ್.ಆರ್.ಪನಮೇಶಲು

ಹಿರಿಯ ಉಪನ್ಯಾಸಕರು,

ಡಯಟ್ ಮುನಿರಾಬಾದ್, ಕೊಪ್ಪಳ ಜಿಲ್ಲೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande