ಏಪ್ರಿಲ್ ನಲ್ಲಿ ದಾಖಲೆ ಜಿಎಸ್ಟಿ ಸಂಗ್ರಹ
ನವದೆಹಲಿ, 2 ಮೇ (ಹಿ.ಸ):ಆ್ಯಂಕರ್: ಏಪ್ರಿಲ್ ತಿಂಗಳಲ್ಲಿ 2.10 ಲಕ್ಷ ಕೋಟಿ ರೂನಷ್ಟು ಜಿಎಸ್ಟಿ ತೆರಿಗೆ ಸಂಗ್ರಹ
ುಿ


ನವದೆಹಲಿ, 2 ಮೇ (ಹಿ.ಸ):ಆ್ಯಂಕರ್: ಏಪ್ರಿಲ್ ತಿಂಗಳಲ್ಲಿ 2.10 ಲಕ್ಷ ಕೋಟಿ ರೂನಷ್ಟು ಜಿಎಸ್ಟಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು ಬುಧವಾರ ಮಾಹಿತಿ ಬಿಡುಗಡೆ ಮಾಡಿದೆ. ಜಿ ಎಸ್ ಟಿ ಸಂಗ್ರಹ ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ಆರ್ಥಿಕ ಬೆಳವಣಿಗೆ ಮತ್ತು ಆಡಳಿತ ಕ್ಷಮತೆ ಹೆಚ್ಚಾಗಿರುವುದಕ್ಕೆ ಇಷ್ಟೊಂದು ತೆರಿಗೆ ಸಂಗ್ರಹ ಏರಿಕೆಯು ಕನ್ನಡಿ ಹಿಡಿದಿದೆ. ಹರ್ಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳು ಮೊದಲ ಬಾರಿಗೆ ಒಂದು ತಿಂಗಳ ತೆರಿಗೆ ಸಂಗ್ರಹ 12,000 ಕೋಟಿ ರೂ ಮೈಲಿಗಲ್ಲು ಮುಟ್ಟಿವೆ. ಕರ್ನಾಟಕದ ತೆರಿಗೆ ಸಂಗ್ರಹ 15,000 ಕೋಟಿ ರೂ ಗಡಿ ದಾಟಿ ಹೋಗಿದೆ. ಆರು ರಾಜ್ಯಗಳು ತಲಾ 12,000 ಕೋಟಿ ರೂ ತೆರಿಗೆ ಸಂಗ್ರಹ ಮಾಡಿರುವುದು ಇದೇ ಮೊದಲಾಗಿದೆ. ಉತ್ತರಪ್ರದೇಶದ ಜಿಎಸ್ಟಿ ಸಂಗ್ರಹ ತಮಿಳುನಾಡಿಗಿಂತಲೂ ಹೆಚ್ಚಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande