ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ; ಅಪರೂಪದಲ್ಲಿ ಅಪರೂಪ ಮಾತ್ರ
ನವದೆಹಲಿ, 1 ಮೇ (ಹಿ.ಸ):ಆ್ಯಂಕರ್: ಕೋವಿಶೀಲ್ಡ್ ಲಸಿಕೆ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದೆ. ಕೋವಿಶೀಲ್ಡ್
Clotting Side Effect Risk Very Rare Say


ನವದೆಹಲಿ, 1 ಮೇ (ಹಿ.ಸ):ಆ್ಯಂಕರ್: ಕೋವಿಶೀಲ್ಡ್ ಲಸಿಕೆ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದೆ. ಕೋವಿಶೀಲ್ಡ್ ಲಸಿಕೆ ಅಭಿವೃದ್ದಿಪಡಿಸಿದ ಬ್ರಿಟನ್ ಮೂಲದ ಅಸ್ಟ್ರಾಜೆನೆಕಾ ಸಂಸ್ಥೆಈ ಲಸಿಕೆ ಅಪರೂಪದ ಪ್ರಕರಣದಲ್ಲಿ ನಿರ್ದಿಷ್ಟ ಅಡ್ಡಪರಿಣಾಮ ಮಾಡಬಹುದು ಎಂದು ಕೋರ್ಟ್ ವಿಚಾರಣೆಯೊಂದರಲ್ಲಿ ಹೇಳಿದೆ. ಬ್ಲಡ್ ಕ್ಲಾಟಿಂಗ್ ಅಥವಾ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್ಲೆಟ್ ಕುಸಿತದ ಸಮಸ್ಯೆ ಕಾಣಬಹುದು ಎಂದು ಮಾಹಿತಿ ನೀಡಿದೆ. ಅಸ್ಟ್ರಾಜೆನಿಕಾ ತಯಾರಿಸಿದ AZ Vaxzevria ಎಂಬ ಲಸಿಕೆಯನ್ನು ಸೀರಂ ಇನ್ಸ್ಟಿಟ್ಯೂಟ್ ಭಾರತದಲ್ಲಿ ತಯಾರಿಸಿ ಕೋವಿಶೀಲ್ಡ್ ಬ್ರ್ಯಾಂಡ್ ನಲ್ಲಿ ಬಿಡುಗಡೆ ಮಾಡಿತ್ತು. ಶೇ. 90ರಷ್ಟು ಭಾರತೀಯರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅಸ್ಟ್ರಾಜೆನೆಕಾ ತಿಳಿಸಿರುವ ಅಡ್ಡಪರಿಣಾಮ ಸಾಧ್ಯತೆಯ ವಿಚಾರ ಬಹಳ ಮಂದಿಗೆ ಆತಂಕಕ್ಕೆ ಕಾರಣವಾಗಿದೆ. ಆದರೆ, ಈ ಬಗ್ಗೆ ಐಸಿಎಂಆರ್ನ ಮಾಜಿ ವಿಜ್ಞಾನಿ ಡಾ. ರಮಣ್ ಗಂಗಾಖೇಡ್ಕರ್ ಪ್ರತಿಕ್ರಿಯಿಸಿದ್ದು, ಕೋವಿಶೀಲ್ಡ್ ಲಸಿಕೆಯಿಂದ ಯಾವ ಅಪಾಯವೂ ಇಲ್ಲ ಎಂದು ಭಯ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande