ಕರ್ನಾಟಕದ ಮೊದಲ ಅತೀ ಎತ್ತರದ ಗಾಜಿನ ಸೇತುವೆ
ಕೊಡಗು, 2 ಮೇ (ಹಿ.ಸ):ಆ್ಯಂಕರ್: ಪ್ರವಾಸಿಗರನ್ನು ಸೆಳೆಯಲು ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಅತೀ ಉದ್ದದ ಗಾಜಿ
-tallest-glass-bridge-build-in-kodagu-grg


ಕೊಡಗು, 2 ಮೇ (ಹಿ.ಸ):ಆ್ಯಂಕರ್: ಪ್ರವಾಸಿಗರನ್ನು ಸೆಳೆಯಲು ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಅತೀ ಉದ್ದದ ಗಾಜಿನ ಸೇತುವೆ ಸಿದ್ಧಗೊಂಡಿದೆ. ಕರ್ನಾಟಕದಲ್ಲಿಯೇ ಇದೇ ಮೊದಲ ಬಾರಿಗೆ ಅತೀ ಉದ್ದದ ಹಾಗೂ ಅತೀ ಎತ್ತರದ ಗ್ಲಾಸ್ ಬ್ರಿಡ್ಜ್ ಇದಾಗಿದ್ದು, ಮಡಿಕೇರಿ ತಾಲ್ಲೂಕಿನ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬಿಫಾಲ್ಸ್ ಜಂಕ್ಷನ್ ಬಳಿಯೇ ಈ ಗಾಜಿನ ಸೇತುವೆ ಸಿದ್ಧಗೊಂಡಿದೆ.

ತಳಮಟ್ಟದಿಂದ ಬರೋಬ್ಬರಿ 250 ಅಡಿ ಎತ್ತರದಲ್ಲಿ ಗಾಜಿನ ಸೇತುವೆ ನಿರ್ಮಾಣಗೊಂಡಿದೆ. ಹಾಗೆ ಅತೀ ಉದ್ದದ ಸೇತುವೆಯೂ ಇದಾಗಿದ್ದು, 80 ಅಡಿಗೂ ಹೆಚ್ಚು ಉದ್ದವಿದೆ. ಭೂಮಿಯ ಮಟ್ಟದಿಂದ 250 ಅಡಿ ಎತ್ತರವಿರುವುದರಿಂದ ಎಂತಹವರಿಗಾದರೂ ಈ ಗಾಜಿನ ಸೇತುವೆ ಮೇಲೆ ನಡೆಯುವುದಕ್ಕೆ ಒಂದಿಷ್ಟಾದರೂ ಭಯವಾಗದೆ ಇರದು.

ಪ್ರಯತ್ನಪಟ್ಟು ನೀವು ಗಾಜಿನ ಸೇತುವೆ ಮೇಲೆ ಹೆಜ್ಜೆ ಇಟ್ಟಿರೆಂದರೆ ಎತ್ತರದಿಂದ ಭೂಮಿಯ ಮೇಲೆ ಬಿದ್ದುಬಿಡುತ್ತೇವೆಯೇನೋ ಎಂದು ಭಯ ಆವರಿಸಿಯೇ ಬಿಡುತ್ತದೆ. ಹಾಗೆಯೇ ಮುಂದೆ ನಡೆದು ಹೋಗುತ್ತಿದ್ದರೆ, ಸುತ್ತಮುತ್ತಲೂ ಇರುವ ಹಸಿರ ಕಾನನ, ಬೆಟ್ಟಗುಡ್ಡಗಳ ರಾಶಿ ನಿಮ್ಮ ಕಣ್ಮನಗಳನ್ನು ಕೋರೈಸುತ್ತದೆ. ಸುಮಾರು 80 ಅಡಿಯಷ್ಟು ಗಾಜಿನ ಸೇತುವೆ ಮೇಲೆ ನಡೆದು ಸೇತುವೆಯ ತುದಿ ತಲುಪಿದಿರೆಂದರೆ ಆಳವಾದ ಜಾಗದಲ್ಲಿ ಇರುವ ಹಸಿರ ಕಾಡು ಎಂತಹವರನ್ನಾದರೂ ಮಂತ್ರಮುಗ್ಧರನ್ನಾಗಿಸುತ್ತದೆ. ಇವಿಷ್ಟೇ ಅಲ್ಲ, ಸೇತುವೆ ತುದಿಯಲ್ಲಿ ಗೋಪುರವೂ ಇದ್ದು, ಅಲ್ಲಿ ಇನ್ನಷ್ಟು ಎತ್ತರದ ಗಾಜಿನ ಗೋಪುರದ ಮೇಲೆ ಕುಳಿತು ನೀವು ಕೇಕ್ ಕತ್ತರಿಸಿ ಪರಿಸರದ ಒಡಲಿನಲ್ಲಿ ಅನಂತತೆಯಿಂದ ವಿವಿಧ ಸೆಲೆಬ್ರೇಷನ್ ಗಳನ್ನು ಮಾಡಿಕೊಳ್ಳಬಹುದು.

ಅಬ್ಬಿ ಜಲಪಾತ ಹಾಗೂ ಮಾಂದಲಪಟ್ಟಿಗಳನ್ನು ವೀಕ್ಷಿಸಲು ಹೋಗುವ ಪ್ರವಾಸಿಗರಿಗೆ ಎರಡು ಪ್ರವಾಸಿ ತಾಣಗಳ ವೃತ್ತದಲ್ಲಿಯೇ ಈ ಗಾಜಿನ ಸೇತುವೆ ನಿಮ್ಮ ವೀಕ್ಷಣೆಗೆ ಸಿದ್ಧವಿದೆ. ಅಷ್ಟಕ್ಕೂ ಈ ಸೇತುವೆಯನ್ನು ಟಫನ್ ಗ್ಲಾಸ್ ಬಳಸಿ ಮಾಡಲಾಗಿದ್ದು, 40 ಎಂಎಂ ಗಾತ್ರದ ಗಾಜು ಬಳಸಿ ಸೇತುವೆಯನ್ನು ಮಾಡಲಾಗಿದೆ. ಹೀಗಾಗಿ ಒಂದೇ ಸಮಯದಲ್ಲಿ 35 ಜನರು ನಿಂತು ಇದನ್ನು ವೀಕ್ಷಿಸಬಹುದು.

ಹಿಂದೂಸ್ತಾನ್ ಸಮಾಚಾರ್


 rajesh pande