ದಲಿತ ಸಂಘಟನೆಗಳು ಎನ್.ಡಿ.ಎ ಅಭ್ಯರ್ಥಿಯನ್ನು ಬೆಂಬಲಿಸಲು ಕರೆ
ಕೋಲಾರ, ೨೫ ಏಪ್ರಿಲ್ (ಹಿ.ಸ) : ಆ್ಯಂಕರ್ : ಭಾರತ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿ
ಕೆಂಬೋಡಿ ನಾರಾಯಣಸ್ವಾಮಿ ಬಿಜೆಪಿ ಮಾದ್ಯಮ ಸಹ ಸಂಚಾಲಕ


ಕೋಲಾರ, ೨೫ ಏಪ್ರಿಲ್ (ಹಿ.ಸ) :

ಆ್ಯಂಕರ್ : ಭಾರತ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿ ಚುನಾವಣೆಯಲ್ಲಿ ಸೋಲಿಸಿ ಅವರು ಮರಣ ಹೊಂದಿದಾಗ ಮಣ್ಣು ಮಾಡಲು ಜಾಗ ನೀಡದಂತ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲವು ದಲಿತ ಸಂಘಟನೆಯ ಮುಖಂಡರು ಮತಯಾಚನೆ ಮಾಡುತ್ತಿರುವುದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎಂದು ಮಾಧ್ಯಮ ಸಹ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ ಹೇಳಿದರು.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸತತವಾಗಿ ೬೦ ವರ್ಷಗಳ ದೇಶವನ್ನು ಆಳಿದಂತ ಕಾಂಗ್ರೆಸ್ ಪಕ್ಷವು ದಲಿತರಿಗೆ ಆಶ್ವಾಸನೆಗಳನ್ನು ಕೊಡುತ್ತಾ ಮತ ಬ್ಯಾಂಕ್ ಆಗಿ ಮಾಡಿಕೊಂಡು ಬಂದು ಯಾಮಾರಿಸುತ್ತಾ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ದಲಿತರನ್ನು ತುಳಿಯುತ್ತಾ ಬಂದಿರುವ0ತ ಪಕ್ಷ ಕಾಂಗ್ರೆಸ್ ಆಗಿದೆ.

ಈ ದೇಶದ ಈ ದೇಶದ ದಲಿತ ಬಂಧುಗಳಿಗೆ ತಿಳಿದಿರುವ ವಿಷಯ ಆದರೂ ಸಹ ಕೆಲವು ಮುಂದುವರಿದಿರುವAತ ದಲಿತ ಬಂಧುಗಳು ಶೋಷಿತ ದಲಿತರನ್ನು ಬಡವರನ್ನಾಗಿ ಇಟ್ಟು ಅವರ ಮೇಲೆ ಕುಳಿತು ಇವರು ಸವಾರಿ ಮಾಡುತ್ತಿದ್ದಾರೆ ಸ್ವತಂತ್ರ ಪೂರ್ವದಲ್ಲಿ ಸ್ವತಂತ್ರ ಹೋರಾಟಕ್ಕಾಗಿ ರೂಪಗೊಂಡ ಕಾಂಗ್ರೆಸ್ ಪಕ್ಷ ಸ್ವತಂತ್ರ ನಂತರ ಪಕ್ಷವನ್ನು ಅಂತ್ಯಗೊಳಿಸಿ ಅಧಿಕಾರ ಆಸೆಗಾಗಿ ಜವಹರಲಾಲ್ ನೆಹರು ಬೆಟಾಲಿಯನ್ ನಕಲಿ ಕಾಂಗ್ರೆಸ್ ಪಕ್ಷವನ್ನು ಸೃಷ್ಟಿ ಮಾಡಿಕೊಂಡು ಅಧಿಕಾರ ಅನುಭವಿಸಿರುವುದು ಈ ದೇಶದ ಮತದಾರರಿಗೆ ತಿಳಿದಿರುವ ವಿಷಯ ಅಗಿದೆ.

ಇಷ್ಟಾದರೂ ಸಹ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಬರೆದಂತ ಡಾ.ಬಿ.ಆರ್ ಅಂಬೇಡ್ಕರ್ ಅವನ್ನು ಚುನಾವಣೆಯಲ್ಲಿ ನಿಲ್ಲಿಸಿ ಎರಡು ಬಾರಿ ಸೋಲಿಸಿ ಅವರು ಮರಣ ಹೊಂದಿದಾಗ ದೆಹಲಿಯಲ್ಲಿ ಅವರ ಮಣ್ಣು ಮಾಡಲು ಮೂರು ಆರು ಅಡಿ ಜಾಗ ಸಹ ನೀಡಲಿಲ್ಲ. ಅವರನ್ನು ಬಾಂಬೆಗೆ ತರಲು ಅಧಿಕಾರದಲ್ಲಿದ್ದಂತ ಕಾಂಗ್ರೆಸ್ ಪಕ್ಷ ವಾಹನ ವ್ಯವಸ್ಥೆಯನ್ನು ಸಹ ಮಾಡಲಿಲ್ಲ. ಅವರು ಬದುಕಿದ್ದಾಗ ಹೇಳಿದ್ದರು ಕಾಂಗ್ರೆಸ್ ಪಕ್ಷ ದಲಿತರನ್ನು ಸುಡುವ ಪಕ್ಷ ಆ ಪಕ್ಷವನ್ನು ಯಾರು ನಂಬಬೇಡಿಅAತ ಹೇಳಿದ್ದರು. ಅಂಬೇಡ್ಕರ್ ಅವರಿಗೆ ಇಷ್ಟೆಲ್ಲಾ ಅವಮಾನಗಳನ್ನು ಮಾಡಿದಂತ ಕಾಂಗ್ರೆಸ್ ಪಕ್ಷದ ಪರವಾಗಿ ಕೋಲಾರ ಜಿಲ್ಲಾ ಕೆಲವು ದಲಿತ ಸಂಘಟನೆಗಳು ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ. ಇವರಿಗೆ ಭಾರತದ ರತ್ನಪ್ರಶಸ್ತಿ ಕೊಡಲು ಎನ್ಡಿಎ ನೇತೃತ್ವದ ವಿಪಿ ಸಿಂಗ್ ಪ್ರಧಾನಿಯಾಗಿ ಬರಬೇಕಾಯಿತು.

ಕಾಂಗ್ರೆಸ್ ಪಕ್ಷಕ್ಕೆ ದಲಿತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಇವರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡು ಚುನಾವಣೆ ಟೈಮಲ್ಲಿ ಮಾತ್ರ ಇವರನ್ನು ಉಪಯೋಗಿಸಿಕೊಳ್ಳುತ್ತಾರೆ ಸುಮಾರು ೯೫ ಬಾರಿ ಕಾಂಗ್ರೆಸ್ಸಿಗರಿಗೆ ಅನುಕೂಲಕ್ಕೆ ತಕ್ಕಂತೆ ಸಂವಿಧಾನವನ್ನು ತಿದ್ದುಪಡಿ ಮಾಡಿರುತ್ತಾರೆ. ಆದರೆ ಕಾಂಗ್ರೆಸ್ ಅವರು ಗೂಬೆಕೂರಿಸುವುದು ಬಿಜೆಪಿಯ ಮೇಲೆ ಬಿಜೆಪಿಯವರು ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಅಂತ ಸುಳ್ಳು ಹೇಳಿ ಚುನಾವಣೆಯಲ್ಲಿ ಮತ ಕೇಳುತ್ತಿದ್ದಾರೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ನರೇಂದ್ರ ಮೋದಿಜಿ ಅವರ ಸರ್ಕಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹುಟ್ಟಿ ಬೆಳೆದಂತ ಪಂಚಕ್ಷೇತ್ರಗಳನ್ನು ಸಾವಿರಾರು ಕೋಟಿ ರೂ ಅನುದಾನ ನೀಡಿ ಪ್ರವಾಸಿ ತಾಣಗಳನ್ನಾಗಿ ಮಾಡಿದ್ದಾರೆ ಹಾಗೂ ಬಜೆಟ್ ನಲ್ಲಿ ಅತಿ ಹೆಚ್ಚು ಅನುದಾನವನ್ನು ನೀಡಿದರು ಸಹ ಈ ಈ ಜಿಲ್ಲೆಯ ಕೆಲವು ದಲಿತ ಸಂಘಟನೆಗಳು ಬಿಜೆಪಿ ಮೇಲೆ ಆರೋಪ ಮಾಡುವುದು ದೇಶದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.

ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಹೇಳಿಕೊಂಡು ಮೇಲೆ ಬಂದ0ತ ಕೆಲವು ಸಂಘಟನೆಗಳು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತ ಕಾಂಗ್ರೆಸ್ ಪಕ್ಷದ ಜೊತೆ ನಿಂತು ಮತಯಾಚನೆ ಮಾಡುತ್ತಿರುವುದು ಅವರನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರು ಇದ್ದಿದ್ದರೆ ಕ್ಷಮೆಯೇ ಇರುತ್ತಿರಲಿಲ್ಲ ಕೆಲವು ದಲಿತ ಸಂಘಟನೆಗಳ ಅರ್ಥಮಾಡಿಕೊಳ್ಳಬೇಕು ಈ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್ಟಿಪಿ ಟಿಎಸ್ಪಿ ಮೀಸಲಿಟ್ಟಿದ ಅನುದಾನದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಮಾರು ೧೨ ಸಾವಿರ ಕೋಟಿ ರೂಗಳನ್ನು ವಾಪಸ್ ಪಡೆದು ಪುಕ್ಕಟೆ ಗ್ಯಾರಂಟಿಗಳಿಗೆ ನೀಡಿದರು.

ಇದರ ಬಗ್ಗೆ ಧ್ವನಿ ಎತ್ತದ ಸಂಘಟನೆಗಳು ಕಾಂಗ್ರೆಸ್ ಅನ್ಯಾಯದ ವಿರುದ್ಧ ಹೋರಾಡಬೇಕಾಗಿದ್ದ ಇವರು ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡುತ್ತಿರುವುದು ಈ ಜಿಲ್ಲೆಯ ದಲಿತ ಮತದಾರರಿಗೆ ಮಾಡಿರುವ ದ್ರೋಹ. ದಲಿತ ಬಲಗೈ ಜನಾಂಗಕ್ಕೆ ಈ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಅವಕಾಶ ಕಲ್ಪಿಸಿದ್ದು ಬಿಜೆಪಿ ಪಕ್ಷ ಎನ್ನುವುದು ಮರೆಯಬಾರದು. ಇನ್ನಾದರೂ ಕಾಂಗ್ರೆಸ್ ಪಕ್ಷ ಜೊತೆಯಲ್ಲಿರುವ ದಲಿತ ಸಂಘಟನೆಗಳು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಕೊಡುವುದಾದರೆ ಕಾಂಗ್ರೆಸ್ ವಿರುದ್ಧವಾಗಿ ಮತ ಚಲಾಯಿಸಿ ನಿಮ್ಮ ಆತ್ಮ ಗೌರವವನ್ನು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲಿಸಬೇಕೆಂದು ಈ ಮೂಲಕ ತಮ್ಮಲ್ಲಿ ಆಗ್ರಹಿಸುತ್ತೇನೆ.

ಚಿತ್ರ : ಕೆಂಬೋಡಿ ನಾರಾಯಣಸ್ವಾಮಿ ಬಿಜೆಪಿ ಮಾದ್ಯಮ ಸಹ ಸಂಚಾಲಕ


 rajesh pande