ಕೋಲಾರ ಗೌರಿಪೇಟೆಯಲ್ಲಿ ರಸ್ತೆ ಒತ್ತುವರಿ ತೆರವು ಗೊಳಿಸಿದ ಪೌರಾಯುಕ್ತರು
ಕೋಲಾರ, ೦೪ ಮೇ (ಹಿ.ಸ) : ಆ್ಯಂಕರ್ : ಕೋಲಾರ ನಗರದ ಗೌರಿಪೇಟೆಯ ಮೂರನೇ ಕ್ರಾಸ್ ಸಿ.ಎಂ.ಸಿ. ಕಾಂಪೌ0ಡ್ನಲ್ಲಿ ಸುಮಾರು ಇಪ
ಕೋಲಾರ ನಗರದ ಗೌರಿಪೇಟೆಯ ಸಿ.ಎಂ.ಸಿ. ಕಾಂಪೌ0ಡ್ ಬಳಿ ಒತ್ತುವರಿಯಾಗಿದ್ದ ರಸ್ತೆಯನ್ನು ಕೋಲಾರ ನಗರಸಭೆಯ ಪೌರಾಯುಕ್ತ ಶಿವಾನಂದ ತೆರವುಗೊಳಿಸಿದರು.


ಕೋಲಾರ, ೦೪ ಮೇ (ಹಿ.ಸ) :

ಆ್ಯಂಕರ್ : ಕೋಲಾರ ನಗರದ ಗೌರಿಪೇಟೆಯ ಮೂರನೇ ಕ್ರಾಸ್ ಸಿ.ಎಂ.ಸಿ. ಕಾಂಪೌ0ಡ್ನಲ್ಲಿ ಸುಮಾರು ಇಪ್ಪತ್ತು ಕುಟುಂಬಗಳು ವಾಸವಾಗಿದ್ದು, ಈ ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆರ್.ಮಂಜುನಾಥ್ ಮತ್ತು ಆರ್.ವೆಂಕಟಾಚಲಪತಿ ಎಂಬುವರು ದೌರ್ಜನ್ಯದಿಂದ ರಸ್ತೆ ಒತ್ತುವರಿ ಮಾಡಿದ್ದರು. ಇದರಿಂದಾಗಿ ಅಲ್ಲಿನ ಜನರ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಮನೆಗಳಿಗೆ ಹೋಗುವ ರಸ್ತೆಯನ್ನು ಮುಚ್ಚಿ ಗೋಡೆ ನಿರ್ಮಾಣ ಮಾಡಿದ್ದರು. ಇದರಿಂದಾಗಿ ಅಲ್ಲಿನ ಸಾರ್ವಜನಿಕರು ಸಂಚರಿಸಲು ಪರದಾಡಬೇಕಾಯಿತು.

ಒತ್ತುರಿಯ ಬಗ್ಗೆ ಸಿ.ಎಂ.ಸಿ. ಕಾಂಪೌ0ಡಿನ ವಾಸಿ ಕೆ.ಆರ್.ಶೋಭ ರವರು ಕೋಲಾರ ನಗರಸಭೆಯ ಪೌರಾಯುಕ್ತರಿಗೆ ದೂರು ಅರ್ಜಿ ನೀಡಿ ರಸ್ತೆ ಒತ್ತುವರಿ ಮಾಡಿಕೊಂಡಿರುವ ಮತ್ತು ಓಡಾಡಲು ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಗೋಡೆಯನ್ನು ತೆರವುಗೊಳಿಸಲು ಮನವಿ ಮಾಡಿದ್ದರು. ಪೌರಾಯುಕ್ತ ಶಿವಾನಂದ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಒತ್ತುವರಿಯನ್ನು ಖಚಿತಪಡಿಸಿಕೊಂಡು ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ, ಅವರು ನೀಡಿದ ಪತ್ರಗಳನ್ನು ಪರಿಶೀಲನೆ ಮಾಡಿ ನಂತರ ಒತ್ತುವರಿ ಸ್ಥಳವನ್ನು ಮೇ.೩ರಂದು ಜೆಸಿಬಿ ಮುಖಾಂತರ ತೆರವುಗೊಳಿಸಿ ಸಿ.ಎಂ.ಸಿ. ಕಾಂಪೌ0ಡ್ ನಿವಾಸಿಗಳಿಗೆ ಓಡಾಡಲು ರಸ್ತೆ ಅನುಕೂಲ ಮಾಡಿಕೊಟ್ಟರು.

ರಸ್ತೆಯ ಒತ್ತುವರಿಯನ್ನು ತೆರವು ಮಾಡಿದ ನಗರಸಭೆಯ ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗದವರಿಗೆ ಸಿ.ಎಂ.ಸಿ. ಕಾಂಪೌ0ಡ್ನ ನಿವಾಸಿಗಳು ಧನ್ಯವಾದಗಳನ್ನು ತಿಳಿಸಿದ್ದಾರೆ.

ಚಿತ್ರ : ಕೋಲಾರ ನಗರದ ಗೌರಿಪೇಟೆಯ ಸಿ.ಎಂ.ಸಿ. ಕಾಂಪೌ0ಡ್ ಬಳಿ ಒತ್ತುವರಿಯಾಗಿದ್ದ ರಸ್ತೆಯನ್ನು ಕೋಲಾರ ನಗರಸಭೆಯ ಪೌರಾಯುಕ್ತ ಶಿವಾನಂದ ತೆರವುಗೊಳಿಸಿದರು.


 rajesh pande