ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಕ್ಷಣಗಣನೆ
ಬೆಂಗಳೂರು, 23 ಏಪ್ರಿಲ್ (ಹಿ.ಸ):ಆ್ಯಂಕರ್:ವಿಶ್ವವಿಖ್ಯಾತ ಕರಗಕ್ಕೆ ಕ್ಷಣಗಣನೆ ಶುರುವಾಗಿದೆ. ಬಿಸಿಲ ಬೇಗೆಯ ನಡುವೆ ಮಲ
ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಕ್ಷಣಗಣನೆ


ಬೆಂಗಳೂರು, 23 ಏಪ್ರಿಲ್ (ಹಿ.ಸ):ಆ್ಯಂಕರ್:ವಿಶ್ವವಿಖ್ಯಾತ ಕರಗಕ್ಕೆ ಕ್ಷಣಗಣನೆ ಶುರುವಾಗಿದೆ. ಬಿಸಿಲ ಬೇಗೆಯ ನಡುವೆ ಮಲ್ಲಿಗೆ ಘಮದ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸಕ್ಕೆ ಸಕಲ ರೀತಿಯ ಸಿದ್ಧತೆ ನಡೆಯುತ್ತಿದೆ. ರಾಜಧಾನಿಗೆ ರಾಜಕಳೆ ಕೊಡುವ ಬೆಂಗಳೂರು ಕರಗ ಮಹೋತ್ಸವ ಇಂದು ರಂಗೇರಿದೆ. ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ಕಣ್ತುಂಬಿಕೊಳ್ಳಲು ಸಿಲಿಕಾನ್ ಸಿಟಿ ಮಂದಿ ಕೂಡ ಕಾತರರಾಗಿದ್ದಾರೆ. ನಿನ್ನೆ ಬೆಳಗ್ಗೆ 10 ಗಂಟೆಯಿಂದಲೇ ಹಸಿಕರಗದ ಶಾಸ್ತ್ರಗಳು ಆರಂಭಗೊಂಡಿದ್ದು, ಅದ್ಧೂರಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.

ಇಂದು ತಾಯಿಗೆ ವಿಶೇಷವಾಗಿ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರಗಳು ನೆರವೇರಲಿದ್ದು, ಮಧ್ಯರಾತ್ರಿ 2 ಗಂಟೆ ಕರಗ ಮೆರವಣಿಗೆ ಆರಂಭವಾಗಲಿದೆ. ಇನ್ನು, ರಾತ್ರಿ 2 ಗಂಟೆಗೆ ಧರ್ಮರಾಯ ದೇವಸ್ಥಾನದಿಂದ ಕರಗ ಮೆರಣಿಗೆ ಆರಂಭವಾಗಿ ರಾಜ ಮಾರ್ಕೆಟ್ ಸರ್ಕಲ್ನಿಂದ ಕೆ ಆರ್ ಮಾರ್ಕೆಟ್ ಮಾರ್ಗವಾಗಿ, ಆಂಜನೇಯ ದೇವಸ್ಥಾನ ಮೂಲಕ ಗಣೇಶ ದೇವಸ್ಥಾನ ತಲುಪಲಿದೆ. ನಂತರ ನಸುಕಿನ ಜಾವ 4 ಗಂಟೆಗೆ ಪೋಲೀಸ್ ರೋಡ್ ಮುಖಾಂತರ, ಮಸ್ತಾನ್ ಸಾಬ್ ದರ್ಗಾ ತಲುಪಲಿದೆ. ಬಳಿಕ ಮೆಜೆಸ್ಟಿಕ್ನ ಅಣ್ಣಮ್ಮ ದೇವಸ್ಥಾನ ರೂಟ್ನಲ್ಲಿ ಸಾಗಲಿದೆ.

ಅಲ್ಲಿಂದ ಮೈಸೂರ್ ಬ್ಯಾಂಕ್ ಸರ್ಕಲ್ ಮುಖಾಂತರ -ಕುಂಬಾರ ಪೇಟೆ, ತಿಗಳರ ಪೇಟೆ, ಎಸ್ ಪಿ ರೋಡ್ ದೇವಸ್ಥಾನ ಮುಖಾಂತರ ಮೇಲ್ಪೇಟೆಗೆ ಬಂದು ಬೆಳಗ್ಗೆ 7 ರಿಂದ 8 ಸುಮಾರಿಗೆ ಧರ್ಮರಾಯ ದೇವಸ್ಥಾನ ತಲುಪಲಿದೆ. ಒಟ್ಟಿನಲ್ಲಿ ವಿಶ್ವವಿಖ್ಯಾತ ಕರಗದಿಂದ ಇಂದು ರಾಜಧಾನಿಗೆ ರಾಜಕಳೆ ಸಿಗಲಿದ್ದು, ಕರಗ ಕಣ್ತುಂಬಿಕೊಳ್ಳಲು ಲಕ್ಷಾಂತರ ಕಣ್ಣುಗಳು ಕಾತರದಿಂದ ಕಾಯ್ತಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande