ಲೋನ್ ಆ್ಯಪ್ ವಂಚನೆಗೆ ಕಡಿವಾಣ ಹಾಕಲು ಮುಂದಾದ ಆರ್ ಬಿ ಐ
ನವದೆಹಲಿ, 23 ಏಪ್ರಿಲ್ (ಹಿ.ಸ):ಆ್ಯಂಕರ್:ಆನ್ ಲೈನ್ ನಲ್ಲಿ ಆ್ಯಪ್ ಮೂಲಕ ಸಾಲ ನೀಡಿ, ನಂತರ ವಂಚನೆ ನಡೆಸುವ ಮತ್ತು ಸಾಲ
Rbi-Digita-To Curb Loan App 


ನವದೆಹಲಿ, 23 ಏಪ್ರಿಲ್ (ಹಿ.ಸ):ಆ್ಯಂಕರ್:ಆನ್ ಲೈನ್ ನಲ್ಲಿ ಆ್ಯಪ್ ಮೂಲಕ ಸಾಲ ನೀಡಿ, ನಂತರ ವಂಚನೆ ನಡೆಸುವ ಮತ್ತು ಸಾಲ ಮರುಪಾವತಿಸಿದ ಬಳಿಕವೂ ಕಿರುಕುಳ ನೀಡುವ ವಿವಿಧ ಆ್ಯಪ್ ಗಳಿವೆ. ಈಗಾಗಲೇ ಚೀನಾ ಮೂಲಕ ವಂಚಕ ಸಾಲದ ಆ್ಯಪ್ ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಸಾಲ ನೀಡುತ್ತೇವೆಂದು ವಿವಿಧ ರೀತಿಯಲ್ಲಿ ದೌರ್ಜನ್ಯ ಮತ್ತು ವಂಚನೆ ಎಸಗುವ ಡಿಜಿಟಲ್ ಲೋನ್ ಆ್ಯಪ್ ಗಳಿಂದ ಸಾರ್ವಜನಿಕರು ದೂರವಾಗಲು ಆರ್ ಬಿ ಐ ಹೊಸ ಯೋಜನೆ ಹಾಕಿದೆ.

ಲೋನ್ ಆ್ಯಪ್ ಗಳನ್ನು ವೆರಿಫೈ ಮಾಡುವ ಮತ್ತು ತನಿಖೆ ನಡೆಸುವ ಡಿಜಿಟಾ ಏಜೆನ್ಸಿಯನ್ನು ಆರ್ ಬಿ ಐ ಆರಂಭಿಸುವ ಸಾಧ್ಯತೆ ಇದೆ. ಡಿಜಿಟಾದಿಂದ ಮಾನ್ಯತೆ ಪಡೆಯದ ಲೋನ್ ಆ್ಯಪ್ ಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್


 rajesh pande