ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆ ಆರಂಭಿಸಲು ಸಿದ್ಧತೆ
ನವದೆಹಲಿ, 22 ಏಪ್ರಿಲ್ (ಹಿ.ಸ):ಆ್ಯಂಕರ್: ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಫ್ಲೈಯಿಂಗ್ ಕಾರ್ ಅಥವಾ ಏರ್ ಟ್ಯಾಕ್ಸಿ
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಏರ್‌ಟ್ಯಾಕ್ಸಿ ಸೇವೆ ಆರಂಭಿಸಲು ಸಿದ್ಧತೆ


ನವದೆಹಲಿ, 22 ಏಪ್ರಿಲ್ (ಹಿ.ಸ):ಆ್ಯಂಕರ್: ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಫ್ಲೈಯಿಂಗ್ ಕಾರ್ ಅಥವಾ ಏರ್ ಟ್ಯಾಕ್ಸಿ ಸರ್ವಿಸ್ ಇನ್ನೆರಡು ವರ್ಷದಲ್ಲಿ ಬಳಕೆಗೆ ಬರುವ ಸಾಧ್ಯತೆ ಇದೆ. ವಿಶ್ವದ ಮೊದಲ ಏರ್ ಟ್ಯಾಕ್ಸಿ ಸೇವೆ ದುಬೈನಲ್ಲಿ 2026ರಲ್ಲಿ ಬರಲಿದೆ. ಅದೇ ಸಮಯದಲ್ಲಿ ಭಾರತದಲ್ಲೂ ಏರ್ ಟ್ಯಾಕ್ಸಿ ಸೇವೆ ಶುರುವಾಗುವ ಸಾಧ್ಯತೆ ಇದೆ. ಇಂಡಿಗೋ ಸಂಸ್ಥೆಯ ಇಂಟರ್ ಗ್ಲೋಬ್ ಎಂಟರ್ಪ್ರೈಸಸರ್ ಶೀಘ್ರದಲ್ಲಿ ಭಾರತದಲ್ಲಿ ಏರ್ ಟ್ಯಾಕ್ಸಿ ಸೇವೆ ಆರಂಭಿಸಬಹುದು ಎನ್ನಲಾಗಿದೆ. ವರದಿಗಳ ಪ್ರಕಾರ 2026ರಲ್ಲಿ ಇದು ಶುರುವಾಗಬಹುದು. ಆರಂಭದಲ್ಲಿ ದೆಹಲಿ ಎನ್ ಸಿ ಆರ್ ಪ್ರದೇಶದಲ್ಲಿ ಇದರ ಸೇವೆ ಬಳಕೆ ಆಗಲಿದೆ. ದೆಹಲಿಯ ಕನಾಟ್ ಪ್ಲೇಸ್ನಿಂದ ಹರ್ಯಾಣದ ಗುರುಗ್ರಾಮ್ ಮಾರ್ಗದಲ್ಲಿ ಫ್ಲೈಯಿಂಗ್ ಕಾರಿನ ಸೇವೆ ನಡೆಯಬಹುದು.

ಅಮೆರಿಕ ಮೂಲದ ಆರ್ಚರ್ ಏವಿಯೇಶನ್ ಸಂಸ್ಥೆ ಜೊತೆ ಇಂಟರ್ಗ್ಲೋಬ್ ಎಂಟರ್ಪ್ರೈಸಸ್ ಈ ಹೊಸ ಸಾಹಸಕ್ಕೆ ಕೈಜೋಡಿಸಿದೆ. ದೆಹಲಿ ಎನ್ ಸಿ ಆರ್ ನಲ್ಲಿ ಇದರ ಮೊದಲ ಸೇವೆ ಶುರುವಾಗಬಹುದಾದರೂ ಮುಂಬೈ ಮತ್ತು ಬೆಂಗಳೂರಿನಲ್ಲೂ ಇದೇ ಅವಧಿಯಲ್ಲಿ ಫ್ಲೈಯಿಂಗ್ ಟ್ಯಾಕ್ಸಿ ಹಾರಾಡಬಹುದು ಎನ್ನಲಾಗಿದೆ. ಆದರೆ ಕಂಪನಿ ಕಡೆಯಿಂದ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಹಿಂದೂಸ್ತಾನ್ ಸಮಾಚಾರ್


 rajesh pande