ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆ ಪತ್ತೆ.
ಕಚ್, 20 ಏಪ್ರಿಲ್ (ಹಿ.ಸ):ಆ್ಯಂಕರ್:ಪುರಾಣದಲ್ಲಿ ವಾಸುಕಿ ಸರ್ಪದ ಕಥೆಗಳನ್ನ ನೀವು ಕೇಳಿರ್ತೀರಾ. ಇಂಥ ಬೃಹತ್ ಸರ್ಪ ನಿಜವ
ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆ ಪತ್ತೆ.


ಕಚ್, 20 ಏಪ್ರಿಲ್ (ಹಿ.ಸ):ಆ್ಯಂಕರ್:ಪುರಾಣದಲ್ಲಿ ವಾಸುಕಿ ಸರ್ಪದ ಕಥೆಗಳನ್ನ ನೀವು ಕೇಳಿರ್ತೀರಾ. ಇಂಥ ಬೃಹತ್ ಸರ್ಪ ನಿಜವಾಗ್ಲೂ ಇತ್ತಾ? ಇತ್ತು ಅಂತಿದೆ ಹೊಸ ಅನ್ವೇಷಣೆ. ಹೌದು, ಭಾರತದಲ್ಲಿ ವಾಸವಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆಗಳು ಪತ್ತೆಯಾಗಿದೆ. ಅನಕೊಂಡಾಗಿಂತಲೂ ದೈತ್ಯದ್ದು ಎಂದು ಅಂದಾಜಿಸಲಾಗಿದೆ.

ವಾಸುಕಿ ನಾಗ.. ಹಿಂದೂಧರ್ಮದಲ್ಲಿ ಈ ಸರ್ಪ ವಿಶೇಷ ನಂಬಿಕೆ ಒಳಗೊಂಡಿದೆ. ಸಮುದ್ರ ಮಂಥನದ ಸಮಯದಲ್ಲಿ, ದೇವತೆಗಳು ಮತ್ತು ಅಸುರರು ಇದೇ ವಾಸುಕಿ ಸರ್ಪವನ್ನು ಹಗ್ಗವಾಗಿ ಬಳಸಿ ಮೇರು ಪರ್ವತವನ್ನು ಮಂಥನ ಮಾಡಿದ್ರು ಅಂತಾ ನಂಬಲಾಗಿದೆ. ಅಲ್ಲದೇ ಶ್ರೀಕೃಷ್ಣನನ್ನು ಕಂಸನಿಂದ ರಕ್ಷಿಸಲು ಅವರ ತಂದೆ ಮಳೆಯಲ್ಲಿ ಕರೆದೊಯ್ಯುವಾಗ ಆ ಮಳೆಹನಿ ಮಗುವಾಗಿದ್ದ ಶ್ರೀಕೃಷ್ಣನ ಮೇಲೆ ಬೀಳದಂತೆ ಕಾಪಾಡಿದ್ದು ಕೂಡ ಇದೇ ವಾಸುಕಿ ನಾಗ. ಇದು ಕೇವಲ ಪುರಣಾದ ಕಥೆಯಲ್ಲಿ ನಿಜಕ್ಕೂ ವಾಸುಕಿ ಸರ್ಪ ಇತ್ತು ಅನ್ನೋದಕ್ಕೆ ಸಂಬಂಧಿಸಿದಂತೆ ಪುರಾವೆ ಸಿಕ್ಕಿದೆ.

ಸುಮಾರು 4.7 ಕೋಟಿ ವರ್ಷಗಳ ಹಿಂದೆ ಭಾರತದಲ್ಲಿ ಸಂಚರಿಸಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆಗಳನ್ನ ಸಂಶೋಧಕರು ಕಂಡು ಹಿಡಿದಿದ್ದಾರೆ. ಇಂಥದ್ದೊಂದು ದೈತ್ಯ ಹಾವಿನ ಕುರುಹು ಕಂಡು ಇಡೀ ಜಗತ್ತು ಭಾರತದತ್ತ ತಿರುಗಿ ನೋಡ್ತಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande