ಇದು ಸಾಮಾನ್ಯ ಅಲ್ಲ, ಸಂವಿಧಾನ ಉಳಿಸುವ ಚುನಾವಣೆ - ಮಲ್ಲಿಕಾರ್ಜುನ ಖರ್ಗೆ
ನವದೆಹಲಿ, 19 ಏಪ್ರಿಲ್ (ಹಿ.ಸ):ಆ್ಯಂಕರ್: ಈ ಬಾರಿಯದ್ದು ಸಾಮಾನ್ಯ ಚುನಾವಣೆ ಅಲ್ಲ, ಸಂವಿಧಾನ ಉಳಿಸುವ ಚುನಾವಣೆ ಎಂದು
ಇದು ಸಾಮಾನ್ಯ ಅಲ್ಲ, ಸಂವಿಧಾನ ಉಳಿಸುವ ಚುನಾವಣೆ:


ನವದೆಹಲಿ, 19 ಏಪ್ರಿಲ್ (ಹಿ.ಸ):ಆ್ಯಂಕರ್: ಈ ಬಾರಿಯದ್ದು ಸಾಮಾನ್ಯ ಚುನಾವಣೆ ಅಲ್ಲ, ಸಂವಿಧಾನ ಉಳಿಸುವ ಚುನಾವಣೆ ಎಂದು ಬಣ್ಣಿಸಿರುವ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ದೇಶವನ್ನು ಕಾಪಾಡುವ ಹೊಣೆ ನಿಮ್ಮ ಮೇಲಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

ಮೊದಲ ಹಂತದ ಚುನಾವಣೆಗೂ ಮುನ್ನಾ ದಿನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಖರ್ಗೆ, ‘ಇದು ಚುನಾವಣೆಯ ಸಮಯವಾದ್ದರಿಂದ ನಾನು ನಿಮ್ಮ ಜೊತೆ ನೇರವಾಗಿ ಮಾತನಾಡಬೇಕು ಎಂದುಕೊಂಡಿದ್ದೇನೆ. ನೀವೆಲ್ಲಾ ನಮ್ಮ ಪಕ್ಷದ ಬೆನ್ನಲುಬು. ಈ ಬಾರಿಯದ್ದು ಸಾಮಾನ್ಯ ಚುನಾವಣೆ ಅಲ್ಲ, ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ಚುನಾವಣೆ. ಇದರಲ್ಲಿ ಬಬ್ಬರ್ ಶೇರ್ (ಸಿಂಹದ ಹೃದಯ) ಕಾರ್ಯಕರ್ತರಾದ ನಿಮ್ಮಂಥವರ ಹೊಣೆಗಾರಿಗೆ ಅತ್ಯಂತ ದೊಡ್ಡದಿದೆ’ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande