ಸಚಿವ ಆಪ್ತ ಎಂಸಿ ವೇಣುಗೋಪಾಲ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ
ಬೆಂಗಳೂರು, 2 ಮೇ (ಹಿ.ಸ):ಆ್ಯಂಕರ್: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತನ ನಿವಾಸದ ಮೇಲೆ ಆದಾಯ ತೆರಿಗ
ಬೆಂಗಳೂರು, 2 ಮೇ         (ಹಿ.ಸ):ಆ್ಯಂಕರ್:


ಬೆಂಗಳೂರು, 2 ಮೇ (ಹಿ.ಸ):ಆ್ಯಂಕರ್:

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತನ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು (ಐಟಿ) ದಾಳಿ ಮಾಡಿದ್ದಾರೆ.

ಜಮೀರ್ ಅಹ್ಮದ್ ಖಾನ್ ಆಪ್ತ ಹಾಗೂ ಮಾಜಿ ಎಂ ಎಲ್ ಸಿ ಎಂ.ಸಿ ವೇಣುಗೋಪಾಲ್ ಅವರ ಬೆಂಗಳೂರಿನ ಜೆಪಿ ನಗರದ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 4 ಇನ್ನೊವಾ ಕಾರುಗಳಲ್ಲಿ ಬಂದಿರುವ 15 ಅಧಿಕಾರಿಗಳು ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.ಇಂದು ಬೆಳಗ್ಗೆ 6:10 ನಿಮಿಷಕ್ಕೆ ಎಂ.ಸಿ ವೇಣುಗೋಪಾಲ್ ಅವರ ನಿವಾಸದ ಮುಖ್ಯದ್ವಾರದ ಮೂಲಕವೇ ಒಳಕ್ಕೆ ಅಧಿಕಾರಿಗಳು ಹೋಗಿದ್ದಾರೆ. ಈ ವೇಳೆ ಯಾವುದೇ ಸದ್ದು ಮಾಡದೇ ಅಧಿಕಾರಿಗಳು ಮನೆಗೆ ತೆರಳಿ ರೇಡ್ ಮಾಡಿದ್ದಾರೆ. ಸದ್ಯ ಇದುವರೆಗೂ ಮನೆಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande