ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕ್ಯಾಂಟೀನ್ ಆರಂಭಿಸಲು ಟೆಂಡರ್ ಆಹ್ವಾನ
ಕೊಪ್ಪಳ,, 2 ಮೇ (ಹಿ.ಸ): ಆ್ಯಂಕರ್: ಕೊಪ್ಪಳ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ 74.80 ಚದರ ಮೀಟರ್ ವಿಸ್ತೀರ
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕ್ಯಾಂಟೀನ್ ಆರಂಭಿಸಲು ಟೆಂಡರ್ ಆಹ್ವಾನ


ಕೊಪ್ಪಳ,, 2 ಮೇ (ಹಿ.ಸ):

ಆ್ಯಂಕರ್: ಕೊಪ್ಪಳ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ 74.80 ಚದರ ಮೀಟರ್ ವಿಸ್ತೀರ್ಣವುಳ್ಳ ಕಟ್ಟಡವನ್ನು ಮಾತ್ರ ಹೋಟೆಲ್(ಕ್ಯಾಂಟೀನ್) ನಡೆಸುವ ಉದ್ದೇಶಕ್ಕಾಗಿ ಷರತ್ತು ಹಾಗೂ ನಿಬಂಧನೆಗಳಿಗೆ ಒಳಪಟ್ಟು ಗುತ್ತಿಗೆ/ಲೈಸನ್ಸ್ ಆಧಾರದ ಮೇಲೆ ಕೊಡುವುದಿದ್ದು, ಆಸಕ್ತ ಅರ್ಜಿದಾರರಿಂದ ಮೊಹರಾದ ಟೆಂಡರ್ಗಳನ್ನು ಆಹ್ವಾನಿಸಲಾಗಿದೆ.

ನಿಗದಿತ ಟೆಂಡರ್ ನಮೂನೆ ಹಾಗೂ ಇತರೆ ವಿವರಗಳು ಕೊಪ್ಪಳ ಜಿಲ್ಲಾ ನ್ಯಾಯಾಲಯದ ಕಛೇರಿಯಲ್ಲಿ ಹಾಗೂ ವೆಬ್ಸೈಟ್: https://districts.ecourts.gov.in/koppal ನಲ್ಲಿ ಲಭ್ಯವಿರುತ್ತದೆ. ನಿಗದಿತ ಟೆಂಡರ್ ನಮೂನೆ (ಅನುಬಂಧ-1) ಯನ್ನು ಭರ್ತಿಮಾಡಿ ಮೇ 29 ರ ಸಂಜೆ 5.00 ಗಂಟೆಯ ಒಳಗಾಗಿ ಮೊಹರಾದ ಲಕೋಟೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳ ಇವರ ಕಛೇರಿಗೆ ಸಲ್ಲಿಸಬೇಕು.

ನೀಡಲಾದ ಕಟ್ಟಡದಲ್ಲಿ ಸಸ್ಯಾಹಾರಿ ಹೋಟೆಲ್(ಕ್ಯಾಂಟೀನ್) ನಡೆಸುವ ಉದ್ದೇಶಕ್ಕಾಗಿ ಲೋಕೋಪಯೋಗಿ ಇಲಾಖೆಯ ಅಭಿಯಂತರರು ನಿಗದಿಪಡಿಸಿದಂತೆ ಪ್ರತಿ ತಿಂಗಳ ಕನಿಷ್ಟ ಬಾಡಿಗೆ ದರ ರೂ. 11,000/- ಅಥವಾ ಮೇಲ್ಪಟ್ಟು, ಅತೀ ಹೆಚ್ಚು ಬಾಡಿಗೆ ಪ್ರಸ್ತ್ತಾವನೆ ಸಲ್ಲಿಸುವ ಟೆಂಡರ್ದಾರರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗುವುದು.

ಆಸಕ್ತ ಅರ್ಜಿದಾರರು ಟೆಂಡರ್ ದಸ್ತಾವೇಜಿನೊಂದಿಗೆ 10,000/- ರೂಪಾಯಿಗಳ ಇ.ಎಂ.ಡಿ ಮೊಬಲಗನ್ನು Prl. District and Sessions Judge, Koppal ಇವರ ಹೆಸರಿನಲ್ಲಿ ತೆಗೆದ ರಾಷ್ಟ್ರೀಕೃತ ಬ್ಯಾಂಕಿನ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಸಲ್ಲಿಸತಕ್ಕದ್ದು. ಇಎಂಡಿ ರಹಿತ ಟೆಂಡರ್ ದಸ್ತಾವೇಜುಗಳನ್ನು ಟೆಂಡರ್ ಪ್ರಕ್ರಿಯೆಗಾಗಿ ಪರಿಗಣಿಸಲಾಗುವುದಿಲ್ಲ. ಇಎಂಡಿ ಮೊಬಲಗನ್ನು ಟೆಂಡರ್ ಪ್ರಕ್ರಿಯೆಯು ಸಂಪೂರ್ಣವಾಗಿ ಮುಕ್ತಾಯಗೊಂಡ ಬಳಿಕ ಹಿಂದಿರುಗಿಸಲಾಗುವುದು.

ಅರ್ಜಿದಾರರು ಹೋಟೆಲ್ ಉದ್ಯಮ ನಡೆಸಲು ಸಂಬಂಧಪಟ್ಟ ಪ್ರಾಧಿಕಾರದವರಿಂದ ಪಡೆದ ಪ್ರಮಾಣ ಪತ್ರ (ಟ್ರೇಡ್ ಲೈಸನ್ಸ್) ಹಾಗೂ ಸಂಬಂಧಿತ ತೆರಿಗೆ ಇಲಾಖೆಯ ನೋಂದಣಿ ಪತ್ರವನ್ನು ಹೊಂದಿರತಕ್ಕದ್ದು ಹಾಗೂ ಟೆಂಡರ್ ದಸ್ತಾವೇಜಿನೊಂದಿಗೆ ಸಲ್ಲಿಸಬೇಕು ಮತ್ತು ಉದ್ಯಮ ಸ್ಥಳದಲ್ಲಿ ಕಾಣುವಂತೆ ಪ್ರದರ್ಶಿಸಬೇಕು.

ಗುತ್ತಿಗೆ ಪಡೆಯುವ ಅರ್ಜಿದಾರರ ಇತ್ತೀಚಿನ ಎರಡು ಭಾವಚಿತ್ರಗಳನ್ನು, ಗುರುತುಪತ್ರ ಮತ್ತು ವಿಳಾಸದ ದಾಖಲೆಯನ್ನು ಹಾಜರುಪಡಿಸಬೇಕು. ಇದೇ ರೀತಿ ಹೋಟೆಲ್ (ಕ್ಯಾಂಟೀನ್)ನಲ್ಲಿ ಕೆಲಸ ಮಾಡುವ ಕೆಲಸಗಾರರ ಗುರುತುಪತ್ರ ಹಾಗೂ ವಿಳಾಸದ ದಾಖಲೆಯನ್ನು ಕೂಡ ಹಾಜರುಪಡಿಸಬೇಕು.

ಹೋಟೆಲ್ (ಕ್ಯಾಂಟೀನ್) ನಲ್ಲಿ ತಯಾರಿಸುವ ಅಥವಾ ಮಾರಾಟ ಮಾಡುವ ಎಲ್ಲಾ ಆಹಾರ ಪದಾರ್ಥಗಳು ಸ್ವಚ್ಛ ಮತ್ತು ಆರೋಗ್ಯಪೂರ್ಣವಾಗಿರಬೇಕು ಹಾಗೂ ಆಹಾರ ಪದಾರ್ಥಗಳ ತಯಾರಿಕೆಗಾಗಿ ಉತ್ತಮ ಗುಣಮಟ್ಟದ ತರಕಾರಿ, ಧಾನ್ಯಗಳು ಹಾಗೂ ಖಾದ್ಯತೈಲವನ್ನು ಮಾತ್ರ ಉಪಯೋಗಿಸಬೇಕು. ಅಲ್ಲದೇ ಕೇವಲ ಸಸ್ಯಾಹಾರಿ ಆಹಾರ ಪದಾರ್ಥಗಳನ್ನು ಮಾತ್ರ ತಯಾರಿಸಿ ಅಥವಾ ಮಾರಾಟ ಮಾಡಬೇಕು. ತಪ್ಪಿದಲ್ಲಿ ಗುತ್ತಿಗೆಯನ್ನು ರದ್ದುಪಡಿಸಲಾಗುವುದು ಮತ್ತು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಲಾಗುವುದು.

ಆಸಕ್ತ ಅರ್ಜಿದಾರರು ಎಲ್ಲಾ ನಿಬಂಧನೆಗಳಿಗೆ ಒಳಪಟ್ಟು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳ ಇವರಿಗೆ ಟೆಂಡರ್ ಪ್ರಸ್ತಾವನೆಯನ್ನು ಮೊಹರಾದ ಲಕೋಟೆಯಲ್ಲಿ ಅನುಬಂಧ-1 ರಲ್ಲಿ ದಿನಾಂಕಃ 29-05-2024 ರ ಸಂಜೆ 5 ಗಂಟೆಯ ಒಳಗಾಗಿ ಸಲ್ಲಿಸಬೇಕು. ಲಕೋಟೆಯ ಮೇಲೆ for Running Hotel/Canteen at Koppal ಎಂದು ಸ್ಪಷ್ಟವಾಗಿ ನಮೂದಿಸಬೇಕು.

ಮೊಹರಾದ ಟೆಂಡರ್ಗಳನ್ನು ಮೇ 29 ರಂದು ಸಂಜೆ 5.30 ಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕೊಪ್ಪಳ ಇವರ ಚೇಂಬರ್ನಲ್ಲಿ ಹಾಜರಿರುವ ಟೆಂಡರ್ದಾರರ ಸಮಕ್ಷಮದಲ್ಲಿ ತೆರೆಯಲಾಗುವುದು ಮತ್ತು ಬಾಡಿಗೆಯ ಪ್ರಸ್ತಾವನೆ ಇರುವ ಟೆಂಡರ್ನ್ನು ಸ್ವೀಕರಿಸುವ ಅಧಿಕಾರ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹೊಂದಿರುತ್ತಾರೆ. ಯಾವುದೇ ಕಾರಣವನ್ನು ನೀಡದೇ ಟೆಂಡರ್ ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಾಗೂ ಟೆಂಡರ್ ಪ್ರಕ್ರಿಯೆಯನ್ನು ರದ್ದು ಪಡಿಸುವ ಅಧಿಕಾರವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹೊಂದಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಕೆಲಸದ ವೇಳೆಯಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಯವರನ್ನು ಸಂಪರ್ಕಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಸಿ. ಅವರು ತಿಳಿಸಿದ್ದಾರೆ.


 rajesh pande