ನೈತಿಕ ಮತ ಚಲಾಯಿಸಲು ಲೈಂಗಿಕ ಅಲ್ಪಸಂಖ್ಯಾತರಿಗೆ ಕರೆ
ಕೋಲಾರ, ೧೯ ಏಪ್ರಿಲ್ (ಹಿ.ಸ) : ಆ್ಯಂಕರ್ : ಲೈಂಗಿಕ ಅಲ್ಪಸಂಖ್ಯಾತರಾದ ಮಂಗಳ ಮುಖಿಯರು ನೈತಿಕ ಮತ ಚಲಾಯಿಸಿ ತಮ್ಮ ಜನ
ಕೋಲಾರದಲ್ಲಿ ಸ್ವೀಪ್ ಸಮಿತಿಯ ಆಶ್ರಯದಲ್ಲಿ ಲೈಂಗಿಕ ಅಲ್ಪ ಸಂಖ್ಯಾತರು ಜಾಥಾ ನಡೆಸಿದರು.


ಕೋಲಾರ, ೧೯ ಏಪ್ರಿಲ್ (ಹಿ.ಸ) :

ಆ್ಯಂಕರ್ : ಲೈಂಗಿಕ ಅಲ್ಪಸಂಖ್ಯಾತರಾದ ಮಂಗಳ ಮುಖಿಯರು ನೈತಿಕ ಮತ ಚಲಾಯಿಸಿ ತಮ್ಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಿಕ್ಕ ಸುಬ್ಬಯ್ಯ ಕರೆ ನೀಡಿದರು.

ಕೋಲಾರ ನಗರದಲ್ಲಿ ಗುರುವಾರ ಸ್ವೀಪ್ ಸಮಿತಿಯಿಂದ ಸ್ವೀಪ್ ಸಮಿತಿಯಿಂದ ಲೈಂಗಿಕ ಅಲ್ಪಸಂಖ್ಯಾತ ಮಂಗಳಮುಖಿಯವರಿಗೆ ಏರ್ಪಡಿಸಿದ್ದ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಲೈಂಗಿಕ ಅಲ್ಪಸಂಖ್ಯಾತರಲ್ಲಿ ಹಲವಾರು ಮಂದಿ ಸಮಾಜದ ಮುಖ್ಯ ವಾಹಿನಿಗೆ ಬಂದು ಸಾಧನೆ ಮಾಡಿದ್ದಾರೆ. ಹಲವಾರು ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬದಲಾವಣೆ ಎಂಬುದು ಜಗದ ನಿಯಮವಾಗಿದೆ. ಲೈಂಗಿಕ ಅಲ್ಪಸಂಖ್ಯಾತರು ಆರ್ಥಿಕವಾಗಿ ಸಬಲರಾಗಲು ಹಲವಾರು ಸರ್ಕಾರದ ಯೋಜನೆಗಳಿವೆ. ಅವರಲ್ಲೂ ಪ್ರತಿಭಾವಂತರಿದ್ದಾರೆ. ಯಶಸ್ವಿ ಉದ್ದಿಮೆಗಳಾಗಿ ಇತರರಿಗೆ ಉದ್ಯೋಗ ನೀಡಿದ್ದಾರೆ. ಆದ್ದರಿಂದ ಲೈಂಗಿಕ ಅಲ್ಪಸಂಖ್ಯಾತರು ಬದಲಾವಣೆಯಾಗಿ ಆರ್ಥಿಕವಾಗಿ ಸಬಲರಾಗುವಂತೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ ಮಾತನಾಡಿ ಚುನಾವಣಾ ಆಯೋಗ ಲೈಂಗಿಕ ಅಲ್ಪಸಂಖ್ಯಾತರನ್ನು ಗುರ್ತಿಸಿ ಮತದಾನದ ಹಕ್ಕು ನೀಡಿದೆ. ಜಿಲ್ಲೆಯಾದ್ಯಂತ ಎರಡು ಸಾವಿರಕ್ಕೂ ಹೆಚ್ಚು ಮಂದಿ ಲೈಂಗಿಕ ಅಲ್ಪಸಂಖ್ಯಾತರನ್ನು ಗುರ್ತಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಯಾವುದೇ ಆಮಿಷ ಮತ್ತು ಒತ್ತಡಗಳಿಗೆ ಮಣಿಯದೆ ನಿರ್ಭಿತಿಯಿಂದ ಮತ ಚಲಾಯಿಸಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಲೈಂಗಿಕ ಅಲ್ಪಸಂಖ್ಯಾತರು ಈ ಹಿಂದೆ ನಾವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದೆವು. ನಮಗೆ ನಿರ್ಧಿಷ್ಟವಾದ ವಿಳಾಸವಿರಲಿಲ್ಲ. ಸರ್ಕಾರ ನಮ್ಮನ್ನು ಗುರ್ತಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ನಮಗೂ ಆಧಾರ್ ಕಾರ್ಡ್ ನೀಡಲಾಗಿದೆ. ನಾವೆಲ್ಲ ಮತದಾನದಲ್ಲಿ ಪಾಲ್ಗೊಂಡು ನೈತಿಕ ಮತ ಚಲಾಯಿಸುತ್ತೇವೆ ಎಂದು ತಿಳಿಸಿದರು.

ಜಾಥಾದಲ್ಲಿ ಐಸಿಇ ಸಮಾಲೋಚಕರಾದ ಜಗದೀಶ್, ಲೈಂಗಿಕ ಅಲ್ಪಸಂಖ್ಯಾತರ ಚುನಾವಣಾ ಐಕಾನ್ ಕಾಂತಾದೇವಿ, ಜಿಲ್ಲಾ ಪಂಚಾಯಿತಿ ಸಹಾಯಕ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ, ಜಗದೀಶ್ ಮುಂತಾದವರು ಪಾಲ್ಗೊಂಡಿದ್ದರು.

ಚಿತ್ರ : ಕೋಲಾರದಲ್ಲಿ ಸ್ವೀಪ್ ಸಮಿತಿಯ ಆಶ್ರಯದಲ್ಲಿ ಲೈಂಗಿಕ ಅಲ್ಪ ಸಂಖ್ಯಾತರು ಜಾಥಾ ನಡೆಸಿದರು.


 rajesh pande