ಬೈಕ್ ಗೆ ಲಾರಿ ಡಿಕ್ಕಿ : ಇಬ್ಬರು ಸಾವು
ಮಸ್ಕಿ, 18 ಏಪ್ರಿಲ್ (ಹಿ.ಸ): ಆ್ಯಂಕರ್ : ಸಿಂಧನೂರಿನಿಂದ ಮುದಗಲ್ಗೆ ಮದುವೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿ
ಬೈಕ್ ಗೆ ಲಾರಿ ಡಿಕ್ಕಿ : ಇಬ್ಬರು ಸಾವು


ಮಸ್ಕಿ, 18 ಏಪ್ರಿಲ್ (ಹಿ.ಸ):

ಆ್ಯಂಕರ್ : ಸಿಂಧನೂರಿನಿಂದ ಮುದಗಲ್ಗೆ ಮದುವೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಸ್ಕಿ ಪಟ್ಟಣದ ಅಶೋಕ ಶಿಲಾ ಶಾಸನ ರಸ್ತೆ ಬಳಿ ಈ ಘಟನೆ ನಡೆದಿದೆ.

ಸಿಂಧನೂರು ಮೂಲದ ಸಮೀರ್ (22) ಸಲ್ಮಾ (10) ಮೃತ ದುರ್ದೈವಿಗಳು. ಸಿಂಧನೂರಿನಿಂದ ಸವಾರರು ಮದುವೆಗೆ ಮುದಗಲ್ ಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದ್ದು, ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


 rajesh pande