ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣ?
ಹೈದರಾಬಾದ್, 28 ಮಾರ್ಚ್ (ಹಿ.ಸ):ಆ್ಯಂಕರ್: ತೆಲುಗು ಚಿತ್ರರಂಗದ ಜನಪ್ರಿಯ ಜೋಡಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ
ಮಮಾಾ


ಹೈದರಾಬಾದ್, 28 ಮಾರ್ಚ್ (ಹಿ.ಸ):ಆ್ಯಂಕರ್:

ತೆಲುಗು ಚಿತ್ರರಂಗದ ಜನಪ್ರಿಯ ಜೋಡಿ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ದೊಡ್ಡದಾಗಿ ಸುದ್ದಿಯಾಗಿತ್ತು. ಹಲವು ವರ್ಷಗಳ ಕಾಲ ಪ್ರೀತಿ ಅದ್ಧೂರಿಯಾಗಿ ಈ ಜೋಡಿ ವಿವಾಹವಾಗಿತ್ತು. ದಕ್ಷಿಣ ಭಾರತದ ಟಾಪ್ ತಾರಾ ಜೋಡಿ ಎಂದು ಹೆಸರಾಗಿದ್ದರು ಸಮಂತಾ ಹಾಗೂ ನಾಗ ಚೈತನ್ಯ. ಆದರೆ ಅಚಾನಕ್ಕಾಗಿ ಈ ಇಬ್ಬರೂ ದೂರಾದರು. ಇಬ್ಬರೂ ಸಹ ವಿಚ್ಛೇದನ ಪಡೆದುಕೊಂಡರು. ಆದರೆ ವಿಚ್ಚೇದನಕ್ಕೆ ಸ್ಪಷ್ಟ ಕಾರಣವನ್ನು ಇಬ್ಬರೂ ಕೊಡಲಿಲ್ಲ. ಇದೀಗ ವಿಚ್ಛೇದನವಾಗಿ ಮೂರು ವರ್ಷಗಳ ಬಳಿಕ ವಿಚ್ಛೇದನಕ್ಕೆ ಕಾರಣ ಹೊರಬಿದ್ದಿದೆ.

ತೆಲಂಗಾಣ ರಾಜಕೀಯದಲ್ಲಿ ಭಾರಿ ಅಲೆಗಳನ್ನು ಎಬ್ಬಿಸಿರುವ ಫೋನ್ ಟ್ಯಾಪಿಂಗ್ನಿಂದಲೇ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಫೋನ್ ಟ್ಯಾಪಿಂಗ್ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ತೆಲುಗು ಚಿತ್ರರಂಗದ ತಾರಾ ಜೋಡಿಯೊಂದರ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣವಾಗಿದೆ ಎಂಬ ಅಂಶ ಹರಿದಾಡುತ್ತಲೇ ಇತ್ತು. ಆದರೆ ಆ ತಾರಾ ಜೋಡಿ ಯಾರೆಂಬುದು ಬೆಳಕಿಗೆ ಬಂದಿರಲಿಲ್ಲ. ಆ ತಾರಾ ಜೋಡಿ ಸಮಂತಾ ಮತ್ತು ನಾಗ ಚೈತನ್ಯ ಅವರೇ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

ತೆಲುಗಿನ ಕೆಲ ಮಾಧ್ಯಮಗಳು ಯೂಟ್ಯೂಬ್ ಚಾನೆಲ್ಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯರ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣ ಎಂಬ ಸುದ್ದಿಯನ್ನು ಬಿತ್ತರಿಸಿವೆ. ಸಮಂತಾ ಅವರೇ ನಾಗ ಚೈತನ್ಯರ ಫೋನ್ ಟ್ಯಾಪಿಂಗ್ ಮಾಡಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಗ ಚೈತನ್ಯರ ವರ್ತನೆ ಮೇಲೆ ಸಮಂತಾಗೆ ಅನುಮಾನವಿದ್ದ ಕಾರಣದಿಂದ ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿದ್ದ ವ್ಯಕ್ತಿಯೊಬ್ಬನ ಸಹಾಯ ಪಡೆದು ಸಮಂತಾ, ನಾಗ ಚೈತನ್ಯರ ಫೋನ್ ಟ್ಯಾಪ್ ಮಾಡಿಸಿದ್ದರು ಎನ್ನಲಾಗುತ್ತಿದೆ.

ಫೋನ್ ಟ್ಯಾಪಿಂಗ್ ಪ್ರಕರಣ ತೆಲಂಗಾಣ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಪೊಲೀಸ್ ಇಲಾಖೆಯ ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳನ್ನು ಬಂಧಿಸಲಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥನ ವಿರುದ್ಧ ಲುಕ್ ಔಟ್ ನೊಟೀಸ್ ಸಹ ಜಾರಿಯಾಗಿದೆ. ಹಲವು ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟ-ನಟಿಯರ ಫೋನ್ಗಳನ್ನು ಟ್ಯಾಪ್ ಮಾಡಿ ಅವರುಗಳನ್ನು ಬ್ಲಾಕ್ ಮೇಲ್ ಮಾಡಿ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಲಾಗಿತ್ತಂತೆ. ಹಲವು ರಾಜಕಾರಣಿಗಳ ಫೋನ್ ಸಹ ಟ್ಯಾಪ್ ಮಾಡಲಾಗಿದ್ದು, ತೆಲಂಗಾಣದ ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿಯ ಫೋನ್ ಸಹ ಟ್ಯಾಪ್ ಮಾಡಲಾಗಿತ್ತು

ಹಿಂದೂಸ್ತಾನ್ ಸಮಾಚಾರ್


 rajesh pande