ಆಟಿಕೆ ತಯಾರಿಕೆ ಉದ್ಯಮದಲ್ಲಿ ಭಾರತ ಗಮನಾರ್ಹ ಸಾಧನೆ
ನವದೆಹಲಿ, 28 ಏಪ್ರಿಲ್ (ಹಿ.ಸ): ಆ್ಯಂಕರ್: ಕಳೆದ ಕೆಲ ವರ್ಷಗಳ ಹಿಂದಿನವರೆಗೂ ಭಾರತದಲ್ಲಿ ಸಿಗುತ್ತಿದ್ದ ಬಹುತೇಕ ಆಟಿಕ
India Stepping Up To Become Toy Manufacturing Hub Of The World


ನವದೆಹಲಿ, 28 ಏಪ್ರಿಲ್ (ಹಿ.ಸ): ಆ್ಯಂಕರ್: ಕಳೆದ ಕೆಲ ವರ್ಷಗಳ ಹಿಂದಿನವರೆಗೂ ಭಾರತದಲ್ಲಿ ಸಿಗುತ್ತಿದ್ದ ಬಹುತೇಕ ಆಟಿಕೆಗಳು ಅಥವಾ ಬೊಂಬೆಗಳು ಚೀನಾದಿಂದ ಆಮದು ಮಾಡಿಕೊಂಡವಾಗಿದ್ದವು. ಇತ್ತೀಚೆಗೆ ಆಟಿಕೆ ತಯಾರಿಕೆ ಉದ್ಯಮದಲ್ಲಿ ಭಾರತ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಚೀನಾದಿಂದ ಆಮದು ಮಾಡಿಕೊಳ್ಳಲಾಗುವ ಆಟಿಕೆಗಳ ಪ್ರಮಾಣ ಶೇ. 70ರಷ್ಟು ಕಡಿಮೆ ಆಗಿದೆ ಎಂದು ಒಪಿ ಇಂಡಿಯಾ ವೆಬ್ ಸೈಟ್ ನ ವರದಿಯೊಂದು ಹೇಳಿದೆ. ಭಾರತದಲ್ಲಿ ಟಾಯ್ ಕ್ಲಸ್ಟರ್ಗಳ ನಿರ್ಮಾಣದಿಂದ ಹಿಡಿದು, ಆಮದು ಸುಂಕ ಇತ್ಯಾದಿ ಕ್ರಮಗಳವರೆಗೆ ಕೇಂದ್ರ ಸರ್ಕಾರದ ವಿವಿಧ ನೀತಿಗಳು ಭಾರತದಲ್ಲಿ ಆಟಿಕೆ ಉದ್ಯಮ ಹುಲುಸಾಗಿ ಬೆಳೆಯಲು ಕಾರಣವಾಗಿವೆ. ಭಾರತದಲ್ಲಿ ಆಟಿಕೆಗಳಿಗೆ ಇರುವ ಆಂತರಿಕ ಬೇಡಿಕೆಯನ್ನು ಪೂರೈಸುವುದರ ಜೊತೆಗೆ ಈಗ ವಿದೇಶಗಳಿಗೆ ರಫ್ತು ಮಾಡುವ ಹಂತಕ್ಕೂ ಈ ಉದ್ಯಮ ಸಜ್ಜಾಗಿದೆ. ಈಗಾಗಲೇ ಅಲ್ಪ ಪ್ರಮಾಣದಲ್ಲಿ ಮಧ್ಯಪ್ರಾಚ್ಯ ಹಾಗೂ ಆಫ್ರಿಕನ್ ದೇಶಗಳಿಗೆ ಆಟಿಕೆಗಳನ್ನು ಭಾರತ ರಫ್ತು ಮಾಡುತ್ತಿರುವುದು ಗೊತ್ತಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande