'ಕಲ್ಕಿ 2898 ಎಡಿ' ಜೂನ್ 27 ರಂದು ಸಿನಿಮಾ ಬಿಡುಗಡೆ
ಮುಂಬೈ, 28 ಏಪ್ರಿಲ್ (ಹಿ.ಸ): ಆ್ಯಂಕರ್:ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಮೇ 9ರಂದು ರಿಲೀಸ್ ಆಗಲಿದೆ ಎಂ
98 AD Movie New Release Date P


ಮುಂಬೈ, 28 ಏಪ್ರಿಲ್ (ಹಿ.ಸ): ಆ್ಯಂಕರ್:ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಮೇ 9ರಂದು ರಿಲೀಸ್ ಆಗಲಿದೆ ಎಂದು ತಂಡ ಈ ಮೊದಲು ಹೇಳಿಕೊಂಡಿತ್ತು. ಆದರೆ, ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಭಾಗಿ ಆಗಿಲ್ಲ. ಇದಕ್ಕೆ ಕಾರಣ ಆಗಿದ್ದು ಲೋಕಸಭೆ ಹಾಗೂ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ. ಇದರ ಅಬ್ಬರದ ಮಧ್ಯೆ ಸಿನಿಮಾ ಬಿಡುಗಡೆ ಮಾಡಿದರೆ ಕೈ ಸುಟ್ಟಿಕೊಳ್ಳಬೇಕು ಎಂಬುದು ತಂಡಕ್ಕೆ ಗೊತ್ತಾಗಿದೆ. ಈ ಕಾರಣಕ್ಕೆ ಹೊಸ ರಿಲೀಸ್ ದಿನಾಂಕವನ್ನು ತಂಡ ತಿಳಿಸಿದೆ. ಈ ಬಗ್ಗೆ ಘೋಷಣೆ ಮಾಡಲಾಗಿದೆ.

‘ಕಲ್ಕಿ 2898 ಎಡಿ’ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ ಎನ್ನುವ ಬಗ್ಗೆ ಮೊದಲಿನಿಂದಲೂ ಸುದ್ದಿ ಹರಿದಾಡುತ್ತಲೇ ಇತ್ತು. ಆದರೆ, ಇಷ್ಟು ದಿನಗಳ ಕಾಲ ತಂಡ ಈ ಬಗ್ಗೆ ಮೌನ ವಹಿಸಿತ್ತು. ಈಗ ಈ ಬಗ್ಗೆ ಘೋಷಣೆ ಆಗಿದೆ. ಜೂನ್ 27 ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಬಗ್ಗೆ ತಂಡ ಮಾಹಿತಿ ಹಂಚಿಕೊಂಡಿದೆ.

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗ ಇದೆ. ಹಿಂದಿಯ ದೀಪಿಕಾ ಪಡುಕೋಣೆ, ದಿಶಾ ಪಟಾಣಿ, ಅಮಿತಾಭ್ ಬಚ್ಚನ್, ತಮಿಳಿನ ಕಮಲ್ ಹಾಸನ್ ನಟಿಸಿದ್ದಾರೆ. ಈ ಚಿತ್ರಕ್ಕೆ ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಜೆಟ್ 500-600 ಕೋಟಿ ರೂಪಾಯಿ ಇದೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿ ಹೊರ ಹಾಕಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande