ಐಎಲ್ಪಿ ಸಂಸ್ಥೆಯಿ0ದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಿಟ್ ವಿತರಣೆ
ಕೋಲಾರ, ೨೮ ಮಾರ್ಚ್ (ಹಿ.ಸ) : ಆ್ಯಂಕರ್ : ವಿಜ್ಞಾನ ಕಿಟ್ ವಿಶೇಷವಾಗಿ ೫ ರಿಂದ ೧೦ ನೇ ತರಗತಿ ಮಕ್ಕಳಿಗಾಗಿ ಪ್ರತ್ಯೇಕವಾ
ಕೋಲಾರದ ಶ್ರೀ ರಮಣ ಮಹರ್ಷಿ ಶಾಲೆಯಲ್ಲಿ ಐ.ಎಲ್.ಪಿ. ಸಂಸ್ಥೆಯಿAದ ವಿಜ್ಞಾನ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.


ಕೋಲಾರ, ೨೮ ಮಾರ್ಚ್ (ಹಿ.ಸ) :

ಆ್ಯಂಕರ್ : ವಿಜ್ಞಾನ ಕಿಟ್ ವಿಶೇಷವಾಗಿ ೫ ರಿಂದ ೧೦ ನೇ ತರಗತಿ ಮಕ್ಕಳಿಗಾಗಿ ಪ್ರತ್ಯೇಕವಾಗಿ ರಚಿಸಲಾಗಿದೆ. ಕಿಟ್ನ ಉಪಯೋಗಗಳನ್ನು ಸದುಪಯೋಪಡಿಸಿಕೊಳ್ಳುವಂತೆ ಐ.ಎಲ್.ಪಿ. ಸಂಸ್ಥೆಯ ಸಂಯೋಜಕರಾದ ಸಿದ್ದಯ್ಯ ವಿದ್ಯಾರ್ಥಿಗಳಿಗೆ ತಿಳಿಸಿದರು.

ಇಂಡಿಯಾ ಲಿಟಿರಸಿ ಪ್ರಾಜೆಕ್ಟ್ (ಐ.ಎಲ್.ಪಿ) ಸಂಸ್ಥೆ ವತಿಯಿಂದ ಶ್ರೀ ರಮಣ ಮಹರ್ಷಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ವಿಜ್ಞಾನ ಕಿಟ್ ಹಾಗೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.

ಕ.ಸಾಪ ತಾಲ್ಲೂಕು ಗೌರವಾಧ್ಯಕ್ಷ ರಾದ ಟಿ. ಸುಬ್ಬರಾಮಯ್ಯ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಮಾತನಾಡಿ ಈ ಶಾಲೆಯಲ್ಲಿ ಮಕ್ಕಳಲ್ಲಿರುವ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಮೆಚ್ಚುವಂತದ್ದು, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಈ ಶಾಲೆಯ ವಿಜ್ಞಾನ ಶಿಕ್ಷಕರು ಹಾಗೂ ಸ್ನೇಹಿತರಾದ ಬಿ. ಶಿವಕುಮಾರ್ ಅವರ ಪರಿಶ್ರಮ ಶಾಲೆಯಲ್ಲಿ ಹೆಚ್ಚಿದೆ. ಅದೇ ರೀತಿ ಎಲ್ಲ ಕಾರ್ಯಗಳಿಗೂ ಶಾಲೆಯ ಎಲ್ಲ ಶಿಕ್ಷಕರ ಪ್ರೋತ್ಸಹವು ಉತ್ತಮವಾಗಿದೆ ಎಂದರು.

ಶಾಲೆಯಲ್ಲಿ ಗ್ರಂಥಾಲಯ ಹಾಗೂ ಪ್ರಯೋಗಾಲಯ ವಿದ್ಯಾರ್ಥಿಗಳ ಬದುಕಿನ ಎರಡು ಕಣ್ಣುಗಳಿದ್ದಂತೆ. ಲ್ಯಾಬ್ ಹಾಗೂ ಲ್ಯಾಬೊರೇಟರಿ ಸರಿಯಾಗಿ ಬಳಸಿಕೊಳ್ಳದಿದ್ದರೆ ಜ್ಞಾನದ ಅಂದತ್ವ ನಮ್ಮನ್ನು ಕಾಡುತ್ತದೆ. ೧೯೭೦-೮೦ರ ದಶಕದಲ್ಲಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕುರಿತು ಆಸಕ್ತಿ ಮೂಡಿಸುವ ಕೆಲಸ ಮಾಡಿದ್ದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಯಿತು. ಹಾಗೆಯೇ ಪ್ರಸಕ್ತ ಕಾಲಘಟ್ಟದಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಮೂಲಕ ವಿಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ಹೆಚ್ಚು ಆಸಕ್ತಿ ಹುಟ್ಟಿ ಮತ್ತಷ್ಟು ಸಾಧನೆ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಐ.ಎಲ್.ಪಿ. ಸಂಸ್ಥೆಯ ರಾಜಕುಮಾರ್ ಮಾತನಾಡಿ ಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವ ಕೆಲಸ ಮಾಡಿದರೆ ಅವರಿಂದ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ಸಿಗಲಿದೆ. ಶಾಲಾ ಕಾಲೇಜುಗಳಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.

ವಿಜ್ಞಾನ ಶಿಕ್ಷಕ ಹಾಗೂ ಕವಿ ಸಂಘಟಕ ಬಿ. ಶಿವಕುಮಾರ್ ಮಾತನಾಡಿ ನಾವು ಮನವಿ ಮಾಡಿದ ಕೂಡಲೇ ಐ. ಎಲ್.ಪಿ. ಸಂಸ್ಥೆ ಸ್ಪಂದಿಸಿದೆ. ಮುಂದಿನ ಸಾಲಿನ ಶಿಕ್ಷಣಕ್ಕೆ ಬಹಳ ಅನುಕೂಲವಾಗಿದೆ. ಶಾಲೆಯ ಪರವಾಗಿ ಐ.ಎಲ್.ಪಿ. ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದರು.

ಸುಪ್ರೀಂ ಸೇವಾ ಸಂಸ್ಥೆಯ ಸುಪ್ರೀಂ ಶಾಲೆಗೆ ಚಾರ್ಟ್ಸ್ ಹಾಗೂ ಕಲಿಕಾ ಸಾಮಾಗ್ರಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಎಂ.ಪ್ರಕಾಶ್, ಸಹ ಶಿಕ್ಷಕರಾದ ಶಂಕರನಾಗ್, ವನಿತಾ, ರೇಖಾ ಮಣಿ ಇತರರು ಭಾಗವಹಿಸಿದ್ದರು.

ಚಿತ್ರ : ಕೋಲಾರದ ಶ್ರೀ ರಮಣ ಮಹರ್ಷಿ ಶಾಲೆಯಲ್ಲಿ ಐ.ಎಲ್.ಪಿ. ಸಂಸ್ಥೆಯಿAದ ವಿಜ್ಞಾನ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.


 rajesh pande