ಚೆನ್ನೈ ಸೂಪರ್ ಕಿಂಗ್ಸ್ – ಗುಜರಾತ್ ಟೈಟನ್ಸ್ ಮುಖಾಮುಖಿ
ಚೆನ್ನೈ, 26 ಮಾರ್ಚ್ (ಹಿ.ಸ): ಆ್ಯಂಕರ್: ಮತ್ತೊಂದು ಹೈವೋಲ್ಟೇಜ್ ಥ್ರಿಲ್ಲರ್ ಐಪಿಎಲ್ ಪಂದ್ಯಗೆ ವೇದಿಕೆ ಸಜ್ಜಾಗಿದೆ. ಮ
ಚೆನ್ನೈ


ಚೆನ್ನೈ, 26 ಮಾರ್ಚ್ (ಹಿ.ಸ): ಆ್ಯಂಕರ್:

ಮತ್ತೊಂದು ಹೈವೋಲ್ಟೇಜ್ ಥ್ರಿಲ್ಲರ್ ಐಪಿಎಲ್ ಪಂದ್ಯಗೆ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದಿರೋ ಚೆನ್ನೈ ಹಾಗೂ ಗುಜರಾತ್, ಗೆಲುವಿನ ನಾಗಲೋಟ ಮುಂದುವರಿಸುವ ತವಕದಲ್ಲಿವೆ. ಆದ್ರೆ, ಈ ಪಂದ್ಯದ ಗೆಲುವು ಸೋಲಿನ ಲೆಕ್ಕಾಚಾರಕ್ಕಿಂತ, ನಾಯಕರ ಮುಖಾಮುಖಿಯೇ ಹೆಚ್ಚು ಕುತೂಹಲ ಕೆರಳಿಸಿದೆ.

ಐಪಿಎಲ್ ಟೂರ್ನಿಯ ಇಂದಿನ ಮೆಗಾ ಫೈಟ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ – ಗುಜರಾತ್ ಟೈಟನ್ಸ್ ಮುಖಾಮುಖಿಯಾಗ್ತಿವೆ. ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರೋ ಉಭಯ ತಂಡಗಳು ಚೆಪಾಕ್ ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿವೆ. ಹಾಲಿ ಚಾಂಪಿಯನ್ಸ್ ಹಾಗೂ ರನ್ನರ್ ಅಪ್ಗಳ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ.ಒಂದೆಡೆ ಹಾಲಿ ಚಾಂಪಿಯನ್ಸ್ ಹಾಗೂ ರನ್ನರ್ಅಪ್ ನಡುವಿನ ಕದನ ಕುತೂಹಲವಾದ್ರೆ, ಇನ್ನೊಂದೆಡೆ ಯಂಗ್ ಕ್ಯಾಪ್ಟನ್ಸ್ ಮುಖಾಮುಖಿ ಹೇಗಿರುತ್ತೆ ಎಂಬ ಪ್ರಶ್ನೆ ಕ್ರಿಕೆಟ್ ವಲಯದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ನೂತನ ನಾಯಕ ಋತುರಾಜ್ ಗಾಯಕ್ವಾಡ್ ಆ್ಯಂಡ್ ಗುಜರಾತ್ ಟೈಟನ್ಸ್ ನಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ಮುಖಾಮುಖಿಯಲ್ಲಿ ಗೆಲ್ಲೋದ್ಯಾರು ಅನ್ನೋದೆ ಹಾಟ್ಟಾಪಿಕ್.!

ಇಂದು ಚೆನ್ನೈನ ಚಿದಂಬರಂನಲ್ಲಿ ನಡೆಯೋದು ನಾಯಕರ ಕಾಳಗ. ಹೌದು..! ಮೊದಲ ಪಂದ್ಯದಲ್ಲೇ ನಾಯಕರಾಗಿ ಗೆದ್ದವರ ಕಾಳಗ. ಈ ಗೆದ್ದವರ ಕಾಳಗದಲ್ಲಿ ಇಂದು ಯಾರ್ ಗೆಲ್ತಾರೆ ಅನ್ನೋದು ಕ್ಯುರಿಯಾಸಿಟಿ ಹುಟ್ಟಿಸಿದೆ. ಹೀಗಾಗಿಯೇ ಇಂದಿನ ಫೈಟ್ ಚೆನ್ನೈ ವರ್ಸಸ್ ಗುಜರಾತ್ ಎಂಬುವುದಕ್ಕಿಂತ ಹೆಚ್ಚಾಗಿ ಇಂಡಿಯನ್ ಫ್ಯೂಚರ್ ಕ್ಯಾಪ್ಟನ್ಗಳ ಫೈಟ್ ಆಗಿ ಬಿಂಬಿತವಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande