ಐಪಿಎಲ್ ಟಿ೨೦ ಕ್ರಿಕೆಟ್, ಲಖನೌ ಸೂಪರ್ ಜಯಂಟ್ಸ್-ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ
ಚೆನ್ನೈ, 23 ಏಪ್ರಿಲ್ (ಹಿ.ಸ):ಆ್ಯಂಕರ್:ಜೈಪುರ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಟಿ
ಪುು


ಚೆನ್ನೈ, 23 ಏಪ್ರಿಲ್ (ಹಿ.ಸ):ಆ್ಯಂಕರ್:ಜೈಪುರ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಟಿ೨೦ ಕ್ರಿಕೆಟ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ೯ ವಿಕೆಟ್ ಗಳಿಂದ ಮುಂಬಯಿ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ೭ನೇ ಜಯ ದಾಖಲಿಸಿದ ರಾಜಸ್ಥಾನ ಒಟ್ಟು ೧೪ ಅಂಕಗಳೊಂದಿಗೆ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹಗೊಂಡಿದೆ.

೧೮೦ ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಅಜೇಯ ೧೦೪ ರನ್ ಗಳ ಮಿಂಚಿನ ಆಟದ ನೆರವಿನಿಂದ ೮ ಎಸೆತಗಳು ಬಾಕಿ ಇರುವಂತೆಯೇ ೧ ವಿಕೆಟ್ ನಷ್ಟಕ್ಕೆ ೧೮೩ ರನ್ ಗಳಿಸಿ ಜಯ ಗಳಿಸಿದೆ.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬಯಿ, ತಿಲಕ್ ವರ್ಮ ಮತ್ತು ನೆಹಾಲ್ ವಧೇರಾ ಅವರ ಉತ್ತಮ ಆಟದಿಂದಾಗಿ ೯ ವಿಕೆಟ್ ನಷ್ಟಕ್ಕೆ ೧೭೯ ರನ್ ಕಲೆಹಾಕಿತು.

ಚೆನ್ನೈನಲ್ಲಿ ಇಂದು ರಿವರ್ಸ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande