ಇಂದಿನಿಂದ ಐಪಿಎಲ್ ಪಂದ್ಯಗಳು ,ಆರ್ ಸಿ ಬಿ-ಸಿ ಎಸ್ ಕೆಯ ಉದ್ಘಾಟನಾ ಪಂದ್ಯ
ಚೆನ್ನೈ, 22 ಮಾರ್ಚ್ (ಹಿ.ಸ):ಆ್ಯಂಕರ್: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್- 17ರ ವೇದಿಕೆ ಆದ್ದೂರಿಯಾಗಿ ಸಿದ್ದವಾಗಿದ್ದ
ಆರ್​ಸಿಬಿ-ಸಿಎಸ್​ಕೆಯ ಉದ್ಘಾಟನಾ ಪಂದ್ಯ


ಚೆನ್ನೈ, 22 ಮಾರ್ಚ್ (ಹಿ.ಸ):ಆ್ಯಂಕರ್:

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್- 17ರ ವೇದಿಕೆ ಆದ್ದೂರಿಯಾಗಿ ಸಿದ್ದವಾಗಿದ್ದು ಅದ್ಧೂರಿ ಸಮಾರಂಭದ ಮೂಲಕ ಇಂದು ಸಂಜೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಅಖಾಡಕ್ಕೆ ಇಳಿಯಲಿದೆ. ಒಟ್ಟು 10 ತಂಡಗಳಿಂದ ರೋಚಕವಾದ ಸಿಕ್ಸರ್ಗಳು, ಬೌಂಡರಿ, ವಿಕೆಟ್ ಗಳ ಬೇಟೆ, ರನ್ ಗಳ ಸುರಿಮಳೆ ಸೇರಿದಂತೆ ಪಂದ್ಯಗಳಲ್ಲಿ ಕೆಲವೊಂದು ಸನ್ನಿವೇಶಗಳನ್ನು ಐಪಿಎಲ್ ಅಭಿಮಾನಿಗಳು ಆನಂದಿಸಲಿದ್ದಾರೆ .

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಸಂಜೆ ಅದ್ಧೂರಿ ಕಾರ್ಯಕ್ರಮದ ಬಳಿಕ ಮೊದಲ ಪಂದ್ಯ 8 ಗಂಟೆಗೆ ಆರಂಭವಾಗಲಿದೆ. ಆರ್ಸಿಬಿ ಪರ ಫಾಫ್ ಡುಪ್ಲೆಸ್ಸಿ ನಾಯಕತ್ವ ವಹಿಸಿದ್ರೆ, ಅತ್ತ ಧೊನಿ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದರಿಂದ ಚೆನ್ನೈ ಸಾರಥ್ಯವನ್ನು ಋತುರಾಜ್ ಗಾಯಕ್ವಾಡ್ ವಹಿಸಲಿದ್ದಾರೆ. ಮೊದಲೇ ಬೆಂಗಳೂರು ಮತ್ತು ಚೆನ್ನೈ ಪಂದ್ಯವೆಂದರೆ ಐಪಿಎಲ್ ಫ್ಯಾನ್ಸ್ಗೆ ಎಲ್ಲಿಲ್ಲದ ಕುತೂಹಲ. ಕಪ್ ಗೆದ್ದಿಲ್ಲವೆಂದರೂ ಪರವಾಗಿಲ್ಲ, ಚೆನ್ನೈಯನ್ನು ಆರಂಭಿಕ ಪಂದ್ಯದಲ್ಲೇ ಸೋಲಿಸಿದರೆ ಅದೇ ನಮಗೆ ದೊಡ್ಡ ಗೆಲುವು ಎನ್ನುವುದು ಆರ್ಸಿಬಿ ಫ್ಯಾನ್ಸ್ಗಳ ಮನದಾಳ ಮಾತಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande