ರಾಯಚೂರು : ನರೇಗಾ ಯೋಜನೆಯಡಿ ಬೂದು ನೀರು ಶುದ್ಧೀಕರಣಕ್ಕೆ ಒತ್ತು
ರಾಯಚೂರು, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೂದು ನೀರು ನಿರ್ವಹಣೆ ಮಾಡಲು ರಾಯಚೂರು ಜಿಲ್ಲೆಯಲ್ಲಿ 15 ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಮನೆಗಳಲ್ಲಿ ಪಾತ್ರೆ ಹಾಗೂ ಬಟ್ಟೆ ತೊಳೆದ ನೀರು, ಬಚ್ಚಲು ನೀರು ಸೇರಿದಂತೆ ಗೃಹ ಬಳಕೆ ಬೂದು ನ
ರಾಯಚೂರು : ನರೇಗಾ ಯೋಜನೆಯಡಿ ಬೂದು ನೀರು ಶುದ್ಧೀಕರಣಕ್ಕೆ ಒತ್ತು


ರಾಯಚೂರು : ನರೇಗಾ ಯೋಜನೆಯಡಿ ಬೂದು ನೀರು ಶುದ್ಧೀಕರಣಕ್ಕೆ ಒತ್ತು


ರಾಯಚೂರು : ನರೇಗಾ ಯೋಜನೆಯಡಿ ಬೂದು ನೀರು ಶುದ್ಧೀಕರಣಕ್ಕೆ ಒತ್ತು


ರಾಯಚೂರು, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೂದು ನೀರು ನಿರ್ವಹಣೆ ಮಾಡಲು ರಾಯಚೂರು ಜಿಲ್ಲೆಯಲ್ಲಿ 15 ಘಟಕಗಳನ್ನು ನಿರ್ಮಿಸಲಾಗುತ್ತಿದೆ.

ಮನೆಗಳಲ್ಲಿ ಪಾತ್ರೆ ಹಾಗೂ ಬಟ್ಟೆ ತೊಳೆದ ನೀರು, ಬಚ್ಚಲು ನೀರು ಸೇರಿದಂತೆ ಗೃಹ ಬಳಕೆ ಬೂದು ನೀರು ಹಳ್ಳಕೊಳ್ಳ ಸೇರಿ ಜಲಮೂಲಗಳು ಮಾಲಿನ್ಯಕ್ಕೊಳಗಾಗುತ್ತಿದ್ದು, ಈ ರೀತಿಯ ಜಲ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಬೂದು ನೀರಿನ ಶುದ್ದೀಕರಣ ಘಟಕ ನಿರ್ಮಿಸಲಾಗುತ್ತಿದೆ.

ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆ ಅಧೀನದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಕ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಇದರ ಹೊರತಾಗಿ ಇದೀಗ ನರೇಗಾ ಮೂಲಕ ವಿಶೇಷ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುತ್ತಿದೆ.

ಪ್ರತಿ ತಾಲೂಕಿಗೆ ಕನಿಷ್ಠ ಎರಡ್ಮೂರು ಘಟಕಗಳನ್ನು ನಿರ್ಮಿಸಲು ಗುರಿ ನಿಗದಿಪಡಿಸಲಾಗಿದ್ದು, ಅಧಿಕಾರಿಗಳು ಸಮೀಕ್ಷೆ ನಡೆಸಿ ಜಿಲ್ಲಾ ಪಂಚಾಯಿತಿಗಳಿಗೆ ವರದಿ ಸಲ್ಲಿಸಿದ್ದಾರೆ. ಮಾರ್ಗಸೂಚಿಯನ್ವಯ ರಾಜ್ಯಾದ್ಯಂತ 474 ಗ್ರಾಮ ಪಂಚಾಯಿತಿಗಳಲ್ಲಿ ಎರಡು ಹಂತದಲ್ಲಿ ಘಟಕಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ಪೈಕಿ ರಾಯಚೂರು ಜಿಲ್ಲೆಯ ಗ್ರಾಮ ಪಂಚಾಯತಿಗಳು ಘಟಕ ನಿರ್ಮಾಣಕ್ಕೆ ಆಯ್ಕೆಯಾಗಿವೆ. ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಒಟ್ಟು 15 ಗ್ರಾಮ ಪಂಚಾಯತಿಗಳಲ್ಲಿ ಘಟಕಗಳಿಗೆ ಸಂಬಂಧಿಸಿದಂತೆ 17.20 ಕೋಟಿ ರೂ. ಮೊತ್ತದ ಅನುದಾನದಡಿ ಒಟ್ಟು 1196 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಯಾವ ಯಾವ ಗ್ರಾಮ ಪಂಚಾಯತಿಗಳು: ದೇವದುರ್ಗ ತಾಲೂಕಿನ ಅಮರಾಪೂರು ಗ್ರಾಮ ಪಂಚಾಯತಿಯ ಮುಕ್ಕನಾಳ, ಶಾವಂತಗೇರಾ ಗ್ರಾಮ ಪಂಚಾಯತಿಯ ಹಿರೇರಾಯಕುಂಪೆ, ಲಿಂಗಸೂಗೂರು ತಾಲೂಕಿನ ಅನ್ವರಿ, ಗೌಡೂರು, ಮಾನ್ವಿ ತಾಲೂಕಿನ ಜಾನೇಕಲ್, ಪೋತ್ನಾಳ ಗ್ರಾಮ ಪಂಚಾಯತಿಯ ಖರಾಬದ್ದಿನ್ನಿ, ಮಸ್ಕಿ ತಾಲೂಕಿನ ಬಪ್ಪೂರು ಗ್ರಾಮ ಪಂಚಾಯತಿಯ ಹಂಪನಾಳ, ಮೆದಿಕಿನಾಳ ಗ್ರಾಮ ಪಂಚಾಯತಿಯ ನಾಗರಬೆಂಚಿ, ಸಂತೆಕಲ್ಲೂರು, ರಾಯಚೂರು ತಾಲೂಕಿನ ಪೂರತಿಪ್ಲಿ ಗ್ರಾಮ ಪಂಚಾಯತಿಯ ಆಲ್ಕೂರು, ಚಂದ್ರಬಂಡಾ ಗ್ರಾಮ ಪಂಚಾಯತಿಯ ಕಟ್ಲೇಟೂಕೂರು, ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮ ಪಂಚಾಯತಿಯ ಬಸ್ಸಾಪೂರು, ಗುಂಜಳ್ಳಿ ಗ್ರಾಮ ಪಂಚಾಯತಿಯ ಹೊಸಳ್ಳಿ, ಸಿರವಾರ ತಾಲೂಕಿನ ಹೀರಾ ಚಾಗಭಾವಿ ಗ್ರಾಮ ಪಂಚಾಯತಿಗಳು ಬೂದು ನೀರು ನಿರ್ವಹಣೆ ಘಟಕ ನಿರ್ಮಾಣಕ್ಕೆ ಆಯ್ಕೆಯಾಗಿವೆ.

ಬೂದು ನೀರು ನಿರ್ವಹಣೆ ಏಕೆ.? ಒಬ್ಬ ವ್ಯಕ್ತಿಗೆ ಪ್ರತಿದಿನವೂ ಬಳಕೆಗಾಗಿ ಸರಾಸರಿ 60 ಲೀ. ನೀರು ಬೇಕಾಗುತ್ತದೆ. ನಾಲ್ಕೈದು ಸದಸ್ಯರಿರುವ ಕುಟುಂಬಕ್ಕೆ ದಿನ ನಿತ್ಯದ ಬಳಕೆಗಾಗಿ ಸರಿ ಸುಮಾರು 250-300 ಲೀಟರ್ ನೀರು ಬಳಕೆಯಾಗುತ್ತದೆ. ಶೌಚಾಲಯದಲ್ಲಿ ಬಳಸಿದ ನೀರನ್ನು ಕಪ್ಪು ನೀರು ಹಾಗೂ ಇನ್ನುಳಿದ ಗೃಹಬಳಕೆಯಿಂದ ಉತ್ಪತ್ತಿಯಾದ ನೀರನ್ನು ಬೂದು ನೀರು ಎಂದು ವಿಂಗಡಿಸಲಾಗುತ್ತದೆ.

ಯೋಜನೆಯ ಉದ್ದೇಶ?: ಒಂದು ಚಿಕ್ಕ ಕುಟುಂಬದಲ್ಲಿ 60-70 ಲೀ. ಬೂದು ನೀರು ಉತ್ಪಾದನೆಯಾಗುತ್ತದೆ. ಇದನ್ನು ಮನೆಯ ಬಚ್ಚಲಿನಿಂದ ಚರಂಡಿಗಳ ಮೂಲಕ ಹಳ್ಳ, ಕರೆ, ನದಿಗಳು ಸೇರಿದಂತೆ ಇತರ ಜಲಮೂಲಗಳಿಗೆ ಸೇರುವ ಮುನ್ನವೇ ಸಂಸ್ಕರಣೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಯಾವುದಕ್ಕೆ ಪೂರಕ: ತಗ್ಗು ಪ್ರದೇಶದಲ್ಲಿ ಬೂದು ನೀರು ನಿಂತು ಕೊಳಚೆ ಸೃಷ್ಟಿಯಾಗುವುದನ್ನು ತಪ್ಪಿಸುವುದು, ಇದರಿಂದ ಉಂಟಾಗುವ ರೋಗ ತಡೆಗಟ್ಟುವುದು ಹಾಗೂ ವೈಜ್ಞಾನಿಕವಾಗಿ ನೀರು ಇಂಗಿಸಿ ಅಂತರ್ಜಲಮಟ್ಟ ಹೆಚ್ಚಿಸಲು ಈ ಯೋಜನೆ ಪೂರಕವಾಗಿದೆ.

ಕಾಮಗಾರಿಗಳು ಏನು?: ಚರಂಡಿ, ಸಣ್ಣ ನೀರಾವರಿ ಪದ್ದತಿ, ಸೆಪ್ಟಿಕ್ ಟ್ಯಾಂಕ್, ವೆಟ್ ಲ್ಯಾಂಡ್, ವೈಯಕ್ತಿಕ ಬಚ್ಚಲು ಇಂಗು ಗುಂಡಿ, ಸಮುದಾಯ ಬಚ್ಚಲು ಇಂಗು ಗುಂಡಿ, ಇನ್‍ಲೈನ್ ಟ್ರಿಟ್‍ಮೆಂಟ್, ಕಿಚ್ಚನ್ ಗಾರ್ಡನ್ ಕಾಮಗಾರಿಗಳು ಯೋಜನೆಯಡಿ ನಿರ್ಮಾಣ ಮಾಡಬಹುದಾಗಿದೆ.

ಜಿಪಂ ಸಿಇಓ ಪ್ರತಿಕ್ರಿಯೆ: ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬೂದು ನೀರು ಉತ್ಪಾದನೆಯಾಗುವ ಮನೆಗಳಿಂದ ಜಲಮೂಲ ಸೇರುವವರೆಗೆ (ಆರಂಭದಿಂದ ಅಂತ್ಯ) ಸಿಸಿ ಚರಂಡಿ, ಸೆಪ್ಟಿಕ್ ಟ್ಯಾಂಕ್, ಬಚ್ಚಲು ಗುಂಡಿ, ಸಮುದಾಯ ಇಂಗು ಗುಂಡಿ ಸೇರಿದಂತೆ ಇತರ ಘಟಕ ನಿರ್ಮಿಸಲಾಗುತ್ತಿದೆ. ದ್ರವ ತ್ಯಾಜ್ಯವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಮಾದರಿಯಲ್ಲಿ ಸಂಸ್ಕರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಪ್ರತಿಕ್ರಿಯಿಸಿದ್ದಾರೆ.

598 ಕಾಮಗಾರಿಗಳು ಪ್ರಗತಿ ಹಂತದಲ್ಲಿ: ಈಗಾಗಲೇ ಜಿಲ್ಲಾ ಪಂಚಾಯತ್ ವತಿಯಿಂದ ವೈಯಕ್ತಿಕ ಇಂಗು ಗುಂಡಿ 944 ಪೈಕಿ 346 ಕಾಮಗಾರಿಗಳನ್ನು ಮುಕ್ತಾಯಗೊಳಿಸಲಾಗಿದೆ. ಇನ್ನೂಳಿದ 598 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಇನ್ನೂ ಸಮುದಾಯ ಇಂಗು ಗುಂಡಿ 3ರಲ್ಲಿ 2 ಕಾಮಗಾರಿ ಪ್ರಗತಿ ಹಂತದಲ್ಲಿವೆ ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಶರಣಬಸವರಾಜ ಕೆಸರಟ್ಟಿ ಪ್ರತಿಕ್ರಿಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande