ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲು, ಬಿಡುಗಡೆ
ಮುಂಬೈ, 03 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಹಾರಾಷ್ಟ್ರದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಬುಧವಾರಕ್ಕೆ ಮುಂದೂಡಿಕೆಯಾಗಿದೆ. ಕಾರಣ ಹಂಗಾಮಿ ಮುಖ್ಯಮಂತ್ರಿಯಾಗಿರುವ ಶಿವಸೇನಾ(ಶಿಂಧೆ ಬಣ) ಮುಖ್ಯಸ್ಥ ಏಕನಾಥ್​ ಶಿಂಧೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ತಪಾಸಣೆಯ ಬಳಿಕ ಕೆಲವೇ ಗಂಟೆಗಳಲ್ಲಿ ಆಸ್ಪತ
ಬೆಂಗಳೂರು, 3 ಡಿಸೆಂಬರ್ (ಹಿ.ಸ.) :ಆ್ಯಂಕರ್ :


ಮುಂಬೈ, 03 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಹಾರಾಷ್ಟ್ರದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಬುಧವಾರಕ್ಕೆ ಮುಂದೂಡಿಕೆಯಾಗಿದೆ. ಕಾರಣ ಹಂಗಾಮಿ ಮುಖ್ಯಮಂತ್ರಿಯಾಗಿರುವ ಶಿವಸೇನಾ(ಶಿಂಧೆ ಬಣ) ಮುಖ್ಯಸ್ಥ ಏಕನಾಥ್​ ಶಿಂಧೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ತಪಾಸಣೆಯ ಬಳಿಕ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಅವರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಜ್ವರವಿತ್ತು, ಹಾಗಾಗಿ ಅವರು ತಮ್ಮ ಹಳ್ಳಿಗೆ ತೆರಳಿದ್ದರು. ಅದಾದ ಬಳಿಕ ಮುಂಬೈಗೆ ಆಗಮಿಸಿದಾಗಿನಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು ಆಸ್ಪತ್ರೆಗೆ ದಾಖಲಾಗಿ ತಪಾಸಣೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆ​ ಆದ ಅವರು ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದ್ದಾರೆ.

ಡೆಂಗ್ಯೂ, ಮಲೇರಿಯಾ ಪರೀಕ್ಷೆ ಮಾಡಲಾಗಿದೆ, ಆದರೆ ವರದಿ ನಕಾರಾತ್ಮಕವಾಗಿದೆ. ಏಕನಾಥ್ ಶಿಂಧೆ ಜತೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಕೂಡ ಇದ್ದಾರೆ. ನಿರಂತರ ಜ್ವರ ಮತ್ತು ಗಂಟಲು ಸೋಂಕಿನಿಂದ ಸಿಎಂ ಕಂಗಾಲಾಗಿದ್ದಾರೆ. ಮೂಲಗಳ ಪ್ರಕಾರ ಏಕನಾಥ್ ಶಿಂಧೆ ಅವರ ರಕ್ತದಲ್ಲಿ ಪ್ಲೇಟ್​ಲೆಟ್​ಗಳು ಕಡಿಮೆಯಾಗಿವೆ. ಗಂಟಲಿನ ಸೋಂಕು ಹಾಗೂ ನಿರಂತರವಾಗಿ ಆ್ಯಂಟಿಬಯೋಟಿಕ್ ಸೇವನೆಯಿಂದಾಗಿ ದೇಹ ಮತ್ತಷ್ಟು ದುರ್ಬಲವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಮುಂಬೈನ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ ಶಾಸಕರ ಸಭೆ ನಡೆದಿತ್ತು. ಸಂಜೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಮಾಡಲಾಗಿತ್ತು. ಆದರೆ ಈಗ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲಾದ ಕಾರಣ ಸಭೆಯನ್ನು ಮುಂದೂಡಲಾಗಿದೆ. ಆದ್ದರಿಂದ ಇಂದು ಹೊಸ ಮುಖ್ಯಮಂತ್ರಿ ಘೋಷಣೆ ಆಗುವುದಿಲ್ಲ ಎಂದು ಹೇಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande