ನವದೆಹಲಿ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂಸತ್ ಅಧಿವೇಶನದ ಆರನೇ ದಿನವಾದ ಇಂದು ಲೋಕ ಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು.
ಪ್ರಶ್ನೋತ್ತರ ಕಲಾಪದ ನಡುವೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ವ್ಯಾಪಾರ ಗುಂಪಿನ ವಿರುದ್ಧದ ಲಂಚ ಆರೋಪ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರತಿಪಕ್ಷಗಳ ಸದಸ್ಯರು ಚರ್ಚೆಗೆ ಆಗ್ರಹಿಸಿದರು.
ಈ ವೇಳೆ, ಎಲ್ಲಾ ಚರ್ಚೆಗಳನ್ನು ಸಮಸ್ಯೆಗಳನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುವಂತೆ ಓಂ ಬಿರ್ಲಾ ಸೂಚಿಸಿದರು. ಅದಕ್ಕೊಪ್ಪದ ಪ್ರತಿ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
ರಾಜ್ಯ ಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ಪ್ರೋ.ರಾಮ್‌ಗೋಪಾಲ್ ಯಾದವ್, ಸಂಭಾಲ್ ಹಿಂಸಾಚಾರ ಪ್ರಸ್ತಾಪಿಸಿದರು. ನಂತರ ಆ ವಿಷಯ ಚರ್ಚೆಗೆ ತೆಗೆದುಕೊಳ್ಳದೇ ಹಿನ್ನೆಲೆ ಟಿಎಂಸಿ ಹಾಗೂ ಸಮಾಜವಾದಿ ಪಕ್ಷಗಳ ಸದಸ್ಯರು ಸದನದಿಂದ ಹೊರ ನಡೆದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್