ನವದೆಹಲಿ, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ೮೮ ಖನಿಜ ಬ್ಲಾಕ್‌ಗಳನ್ನು ಯಶಸ್ವಿಯಾಗಿ ಹರಾಜು ಮಾಡಿದೆ. ಇದರಲ್ಲಿ ೨೪ ನಿರ್ಣಾಯಕ ಖನಿಜ ಬ್ಲಾಕ್‌ಗಳು ಒಳಗೊಂಡಿವೆ.
೬೦೯ ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ೧೨೦ ಖನಿಜ ಪರಿಶೋಧನೆ ಮತ್ತು ಸಂಗ್ರಹಣೆ ಯೋಜನೆಗಳನ್ನು ರಾಷ್ಟ್ರೀಯ ಖನಿಜ ಪರಿಶೋಧನೆ ಟ್ರಸ್ಟ್ ಅನುಮೋದಿಸಿದೆ ಎಂದು ಕೇಂದ್ರ ಗಣಿ ಸಚಿವಾಲಯ ತಿಳಿಸಿದೆ.
ಇತ್ತೀಚೆಗೆ ಗಣಿ ಸಚಿವಾಲಯವು ಕಡಲಾಚೆಯ ಖನಿಜ ಪರಿಶೋಧನೆಯನ್ನು ಉತ್ತೇಜಿಸಲು ವೆಬಿನಾರ್ ಅನ್ನು ಆಯೋಜಿಸಿತ್ತು. ೧೩ ಕಡಲಾಚೆಯ ಬ್ಲಾಕ್‌ಗಳನ್ನು ಇ-ಹರಾಜಿಗಾಗಿ ಇಡಲಾಗಿತ್ತು. ಇವುಗಳಲ್ಲಿ ಕೇರಳ, ಗುಜರಾತ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿಯ ಖನಿಜ ಬ್ಲಾಕ್‌ಗಳು ಸೇರಿವೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್