ಬೆಂಗಳೂರು, 27 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಈರುಳ್ಳಿ ಹೆಚ್ಚುವಾಗ ಕಣ್ಣಿನಲ್ಲಿ ನೀರು ಬರುವುದು ಬಿಟ್ಟರೆ ಇದರಿಂದ ಆರೋಗ್ಯಕ್ಕೆ ಹಲವು ಆರೋಗ್ಯ ಪ್ರಯೋಜನಗಳು ಇವೆ. ಬೇರೆ ಯಾವುದೇ ತೊಂದರೆ ಇಲ್ಲ.
ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಈರುಳ್ಳಿ ಬಹಳ ಮುಖ್ಯವಾದ ಪದಾರ್ಥವಾಗಿದೆ. ಹೀಗಾಗಿ ʻಈರುಳ್ಳಿ ಅಡುಗೆ ಮನೆಯ ರಾಜ ಎಂದೇ ಕರೆಯಲಾಗುತ್ತದೆ. ಈರುಳ್ಳಿ ಕೇವಲ ರುಚಿಗೆ ಮಾತ್ರವಲ್ಲದೇ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.ಪ್ರತಿದಿನ ಹಸಿ ಈರುಳ್ಳಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ .
ಈರುಳ್ಳಿ ಅನೇಕ ವಿಧದ ಜೀವಸತ್ವಗಳ ಮೂಲವಾಗಿದೆ. ಇದರಲ್ಲಿ ಕಂಡುಬರುವ ಆ್ಯಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿಡುವುದಲ್ಲದೆ ಅನೇಕ ರೀತಿಯ ಕಾಯಿಲೆಗಳನ್ನು ದೂರವಿಡುತ್ತವೆ.
ಒಂದು ಮಧ್ಯಮ ಗಾತ್ರದ ಈರುಳ್ಳಿ (110 ಗ್ರಾಂ) 44 ಕ್ಯಾಲೋರಿಗಳು, 1.2 ಗ್ರಾಂ ಪ್ರೋಟೀನ್, 10.3 ಗ್ರಾಂ ಕಾರ್ಬೋಹೈಡ್ರೇಟ್ ಗಳು ಮತ್ತು 0.1 ಗ್ರಾಂ ಕೊಬ್ಬನ್ನು ಒದಗಿಸುತ್ತದೆ. ಈರುಳ್ಳಿ ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಸಿಯಮ್, ಫೋಲೇಟ್ ಮತ್ತು ಮ್ಯಾಂಗನೀಸ್‌ನ ಉತ್ತಮ ಜೀವಸತ್ವಗಳ ಮೂಲವಾಗಿದೆ.
ಈರುಳ್ಳಿ ಕ್ರೋಮಿಯಂ ಹೊಂದಿದ್ದು, ಮಧುಮೇಹ ರೋಗಿಗಳಿಗೆ ಈರುಳ್ಳಿ ತುಂಬಾ ಪ್ರಯೋಜನಕಾರಿ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಪ್ರತಿದಿನ ಈರುಳ್ಳಿ ಸೇವಿಸುವುದರಿಂದ ಮಧುಮೇಹ ಟೈಪ್-2 ರೋಗಿಗಳಿಗೆ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವರದಿಗಳ ಪ್ರಕಾರ, ಸಲ್ಫರ್ ಮತ್ತು ಕ್ವೆರ್ಸೆಟಿನ್, ಈರುಳ್ಳಿಯಲ್ಲಿರುವ ಎರಡು ಪದಾರ್ಥಗಳು ಮೂಳೆಯ ಆರೋಗ್ಯವನ್ನು ಬೆಂಬಲಿಸುತ್ತವೆ. ಇದು ಆಸ್ಟಿಯೊಪೊರೋಸಿಸ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಈರುಳ್ಳಿಯಲ್ಲಿರುವ ಸಲ್ಫರ್ ಹೊಂದಿರುವ ರಾಸಾಯನಿಕಗಳು ಮತ್ತು ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಕೋಶಗಳ ರಚನೆಯನ್ನು ತಡೆಯುತ್ತದೆ.
ಕಬ್ಬಿಣ, ಪೊಟಾಶಿಯಂ, ನಾರು ಮತ್ತಿತರ ಸೂಕ್ಷ್ಮ ಪೋಷಕಾಂಶಗಳು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತವೆ.ಇದರಲ್ಲಿರುವ ವಿಟಮಿನ್ ಸತ್ವಗಳಿಂದಾಗಿ ಚರ್ಮ, ಕೂದಲುಗಳ ಆರೋಗ್ಯ ಸುಧಾರಿಸುತ್ತದೆ.ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕರಿಸುತ್ತದೆ .
ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್