ಅರ್ಥಶಾಸ್ತ್ರದ ಪ್ರಾಧ್ಯಾಪಕನಿಂದ ಪ್ರಧಾನಿಯ ಹುದ್ದೆ ವರೆಗೆ ಡಾ. ಮನಮೋಹನ್ ಸಿಂಗ್ 
ನವದೆಹಲಿ, 27 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೇಶದ ಆರ್ಥಿಕ ಸುಧಾರಣೆಗಳ ಪಿತಾಮಹ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಕಳೆದ ಗುರುವಾರ ರಾತ್ರಿ ನಿಧನರಾಗಿದ್ದಾರೆ.ಭಾರತದ 13ನೇ ಪ್ರಧಾನಿಯಾಗಿ 2004ರಿಂದ 2014ರವರೆಗೆ ದೇಶವನ್ನು ಮುನ್ನಡೆಸಿದ್ದರು. ಇದಕ್ಕೂ ಮೊದಲು, ಡಾ. ಮನಮೋಹನ್ ಸಿಂಗ್
ನವದೆಹಲಿ, 27 ಡಿಸೆಂಬರ್ (ಹಿ.ಸ.) :ಆ್ಯಂಕರ್ :


ನವದೆಹಲಿ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ಆರ್ಥಿಕ ಸುಧಾರಣೆಗಳ ಪಿತಾಮಹ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಕಳೆದ ಗುರುವಾರ ರಾತ್ರಿ ನಿಧನರಾಗಿದ್ದಾರೆ.ಭಾರತದ 13ನೇ ಪ್ರಧಾನಿಯಾಗಿ 2004ರಿಂದ 2014ರವರೆಗೆ ದೇಶವನ್ನು ಮುನ್ನಡೆಸಿದ್ದರು. ಇದಕ್ಕೂ ಮೊದಲು, ಡಾ. ಮನಮೋಹನ್ ಸಿಂಗ್ ಅವರು ಮುಖ್ಯ ಆರ್ಥಿಕ ಸಲಹೆಗಾರ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಂತಹ ಅನೇಕ ಪ್ರತಿಷ್ಠಿತ ಹುದ್ದೆಗಳ ನೇತೃತ್ವವನ್ನು ವಹಿಸಿದ್ದರು. ಅವರ ನಿಧನಕ್ಕೆ ದೇಶವೇ ಕಂಬನಿ ಮಿಡಿಯುತ್ತಿದೆ.

ಡಾ. ಮನಮೋಹನ್ ಸಿಂಗ್ ಅವರು ಭಾರತದ ಪ್ರಸಿದ್ಧ ಅರ್ಥಶಾಸ್ತ್ರಜ್ಞರು, ಶಿಕ್ಷಕರು ಮತ್ತು ರಾಜಕಾರಣಿಗಳಾಗಿದ್ದರು. ಅವರು ೨೦೦೪ ರಿಂದ ೨೦೧೪ ರವರೆಗೆ ಭಾರತದ ೧೩ನೇ ಪ್ರಧಾನಮಂತ್ರಿ ಆಗಿ ಸೇವೆ ಸಲ್ಲಿಸಿ, ದೇಶದ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಕಲ್ಯಾಣದ ಮಾರ್ಗವನ್ನು ಬೆಳಗಿಸಿದರು.

ಅವರ ಶಿಸ್ತಿನ ನಾಯಕತ್ವ ಮತ್ತು ಸುಧಾರಣಾ ನೀತಿಗಳು ದೇಶದ ಆರ್ಥಿಕ ಪ್ರಗತಿಗೆ ಕಾರಣವಾದವು.

೧೯೩೨ರ ಸೆಪ್ಟೆಂಬರ್ ೨೬ರಂದು ಈಗಿನ ಪಾಕಿಸ್ತಾನದಲ್ಲಿರುವ ಪಂಜಾಬ್‌ನ ಗಹ್ ಎಂಬ ಊರಲ್ಲಿ ಜನಿಸಿದ ಅವರು, ಪಂಜಾಬ್ ವಿಶ್ವವಿದ್ಯಾಲಯ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು.

ತಮ್ಮ ವೃತ್ತಿಜೀವನವನ್ನು ಅರ್ಥಶಾಸ್ತ್ರಜ್ಞರಾಗಿ ಆರಂಭಿಸಿದ ಅವರು ಮುಂದೆ ಭಾರತದ ಪ್ರಧಾನ ಆರ್ಥಿಕ ಸಲಹೆಗಾರ ಹಾಗೂ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದರು.

೧೯೯೧ರಲ್ಲಿ ಭಾರತ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾಗ, ಹಣಕಾಸು ಸಚಿವರಾಗಿದ್ದ ಅವರು ಕೈಗೊಂಡ ಆರ್ಥಿಕ ನೀತಿಗಳಿಗಾಗಿ ದೇಶ ಅವರನ್ನು ಎಂದಿಗೂ ಸ್ಮರಿಸುತ್ತದೆ. ೨೦೦೪ರಲ್ಲಿ ಭಾರತದ ೧೩ನೇ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಡಾ. ಸಿಂಗ್, ಹತ್ತು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ-ಮನ್ರೇಗಾ, ಮಾಹಿತಿ ಹಕ್ಕು ಕಾಯಿದೆ ಮತ್ತು ಭಾರತ-ಅಮೆರಿಕಾ ಅಣು ಒಪ್ಪಂದ ಸೇರಿದಂತೆ ಇತರ ಕ್ರಮಗಳಿಂದಾಗಿ ಹಲವಾರು ರಾಷ್ಟ್ರಗಳೊಂದಿಗೆ ಸಂಬಂಧಗಳನ್ನು ಬಲಪಡಿಸಿ, ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು.

೩೩ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಈ ವರ್ಷ ಏಪ್ರಿಲ್‌ನಲ್ಲಿ ರಾಜ್ಯಸಭೆಯಿಂದ ಅವರು ನಿವೃತ್ತರಾದರು.

ದೇಶಕ್ಕೆ ಅವರು ನೀಡಿದಂತಹ ಅಪಾರ ಕೊಡುಗೆಗಳಿಗೆ ಕೇಂದ್ರ ಸರ್ಕಾರ ಅವರಿಗೆ ೧೯೮೭ರಲ್ಲಿ ಪದ್ಮ ವಿಭೂಷಣ ಪುರಸ್ಕಾರ ನೀಡಿ ಗೌರವಿಸಿದೆ. ದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕಾರಣ ಅವರು ವಿಶ್ವದ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ಗಳನ್ನು ಪಡೆದಿದ್ದಾರೆ.

ಶಾಂತ, ವಿದ್ವತ್‌ಪೂರ್ಣ ಹಾಗೂ ನಾಯಕತ್ವದ ಪ್ರತಿರೂಪವಾಗಿದ್ದ ಅವರು ಆರ್ಥಿಕ ಸುಧಾರಣೆ ಮತ್ತು ಅಭಿವೃದ್ಧಿಯ ದಾರಿಯಲ್ಲಿ ಭಾರತವನ್ನು ಮುನ್ನಡೆಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande