ಅನಧಿಕೃತವಾಗಿ ಕಾಲುವೆ ನೀರನ್ನು ಬಳಸುವ ರೈತರಿಗೆ ಎಚ್ಚರಿಕೆ
ರಾಯಚೂರು, 26 ಡಿಸೆಂಬರ್ (ಹಿ.ಸ.) ಆ್ಯಂಕರ್: ತುಂಗಭದ್ರಾ ಎಡದಂಡೆ ಕಾಲುವೆಯು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ 2,44,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯನ್ನು ಒದಗಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಲುವೆಯ ಎಡಭಾಗದಲ್ಲಿ ರೈತರು ಅನಧಿಕೃತವಾಗಿ ಹೊಂಡಗಳನ್ನು (ವಕ್ರಾಣಿ) ಮತ್ತು ವಿತರಣಾ ಕಾ
ಅನಧಿಕೃತವಾಗಿ ಕಾಲುವೆ ನೀರನ್ನು ಬಳಸುವ ರೈತರಿಗೆ ಎಚ್ಚರಿಕೆ


ರಾಯಚೂರು, 26 ಡಿಸೆಂಬರ್ (ಹಿ.ಸ.)

ಆ್ಯಂಕರ್: ತುಂಗಭದ್ರಾ ಎಡದಂಡೆ ಕಾಲುವೆಯು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ 2,44,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯನ್ನು ಒದಗಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಲುವೆಯ ಎಡಭಾಗದಲ್ಲಿ ರೈತರು ಅನಧಿಕೃತವಾಗಿ ಹೊಂಡಗಳನ್ನು (ವಕ್ರಾಣಿ) ಮತ್ತು ವಿತರಣಾ ಕಾಲುವೆಯ ಪಕ್ಕದಲ್ಲಿ ಕೆರೆಗಳನ್ನು ನಿರ್ಮಿಸಿ, ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುತ್ತಿದ್ದಾರೆ. ಇದು ಗೇಜ್‍ಗಳನ್ನು ನಿರ್ವಹಿಸಲು ಮತ್ತು ನೀರಿನ ಸಮರ್ಪಿತ ವಿತರಣೆಗೆ ತೊಂದರೆ ಉಂಟುಮಾಡುತ್ತಿದೆ.

ತುಂಗಭದ್ರಾ ಜಲಾಶಯದಿಂದ ರಾಯಚೂರಿನವರೆಗೆ ವಿಸ್ತಾರವಾದ 226.91 ಕಿ.ಮೀ ಉದ್ದದ ಈ ಕಾಲುವೆಯು ವಡ್ಡರಹಟ್ಟಿ, ಸಿಂಧನೂರು, ಸಿರವಾರ ಮತ್ತು ಯರಮರಸ್ ವಿಭಾಗಗಳಿಂದ ನಿರ್ವಹಿಸಲ್ಪಡುತ್ತದೆ. 21 ನವೆಂಬರ್ 2024 ರಂದು ವಿಕಾಸ ಸೌಧ ಕೊಠಡಿ ಸಂಖ್ಯೆ 419ರಲ್ಲಿ ನಡೆದ ತುಂಗಭದ್ರಾ ಯೋಜನೆಯ 122ನೇ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ, ಮುಂಗಾರು ಹಂಗಾಮಿನಲ್ಲಿ ಬಳಕೆಯಾದ ನೀರಿನ ಪ್ರಮಾಣ ಮತ್ತು ಹಿಂಗಾರು ಹಂಗಾಮಿಗೆ ಲಭ್ಯವಿರುವ ನೀರನ್ನು ಕಾಲುವೆಗಳಲ್ಲಿ ಹರಿಸಲು ನಿರ್ಧಾರ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಅಧಿಕೃತ ಬೆಳೆಗಳನ್ನು ಮಾತ್ರ ಬೆಳೆಯುವಂತೆ ರೈತರಿಗೆ ಕೋರಿಕೆ ಸಲ್ಲಿಸಲಾಗಿದ್ದು.

ಮಾನವಿ, ಸಿರವಾರ, ಕವಿತಾಳ ಮತ್ತು ಯರಮರಸ್ ಮುಂತಾದ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಮುಷ್ಕರ ಹಾಗೂ ರಸ್ತೆ ತಡೆಗಳನ್ನು ಹಮ್ಮಿಕೊಂಡು ನಿಗದಿತ ಪ್ರಮಾಣದ ನೀರನ್ನು ಹರಿಸಬೇಕೆಂದು ಹಕ್ಕೊತ್ತಾಯ ಮಾಡುತ್ತಿದ್ದಾರೆ. ಆದರೆ, ಈ ಅನಧಿಕೃತ ನೀರಿನ ಬಳಕೆಯನ್ನು ತಡೆಯದಿದ್ದಲ್ಲಿ ಕೆಳಗಿನ ರೈತರಿಗೆ ನಿಗದಿತ ಪ್ರಮಾಣದ ನೀರನ್ನು ಹರಿಸಲು ಈ ಇಲಾಖೆಗೆ ಸಾಧ್ಯವಾಗುವುದಿಲ್ಲ.

ತುಂಗಭದ್ರಾ ಎಡದಂಡೆ ಕಾಲುವೆಯ ಎಡಭಾಗದಲ್ಲಿ ಅನಧಿಕೃತವಾಗಿ ನೀರನ್ನು ಬಳಸುತ್ತಿರುವ ರೈತರು ಇನ್ನು ಮುಂದೆ ಈ ರೀತಿ ಅನಧಿಕೃತ ನೀರಿನ ಬಳಕೆಯನ್ನು ನಿಲ್ಲಿಸಬೇಕೆಂದು ಇಲ್ಲದವಾದಲ್ಲಿ ಅಂತಹವರ ವಿರುದ್ಧ ನೀರಾವರಿ ತಿದ್ದುಪಡಿ ಕಾಯ್ದೆಯ ಪ್ರಕಾರ 2 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 2ಲಕ್ಷ ರೂಪಾಯಿ ಜುಲ್ಮಾನೆಯನ್ನು ವಿಧಿಸಬಹುದು ಎಂದು ಯರಮರಸ್ ತುಂಗಭದ್ರಾ ಕಾಲುವೆ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande