ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷವು ಶ್ರೀ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧಿವೇಶನದ ಅಧ್ಯಕ್ಷರಾಗಿ ಒಂದು ನೂರು ವರ್ಷ ಆದ ಹಿನ್ನೆಲೆಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಲಾಗಿದೆ. ದೇಶದಲ್ಲಿ ಗಾಂಧಿ ತತ್ವ ಸಿದ್ದಾಂತಗಳಿಗೆ ಆದರ್ಶ ಗಳಿಗೆ ಎಳ್ಳು ನೀರು ಬಿಟ್ಟು ಕೋಮುವಾದ ದ್ವೇಷ ಬಿತ್ತುತ್ತಿರುವ ಮತೀಯ ಶಕ್ತಿಗಳ ವಿರುದ್ಧ ದೇಶದಲ್ಲಿ
ಗಾಂಧೀವಾದ ತತ್ವಗಳ ಬಿತ್ತಲು ಗಾಂಧಿ ಭಾರತ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಚಾರದಾರೆ ಇಲ್ಲದ ಎಳಸು ಮನಸ್ಸಿನ ಕರ್ನಾಟಕದ ಬಾಲಭವನದ ಬಿಜೆಪಿ ನಾಯಕ ಕಂ ಬಿಜೆಪಿ ಅಧ್ಯಕ್ಷ ಶ್ರೀ ವಿಜೇಂದ್ರಣ್ಣ ಗಾಂಧಿ ಭಾರತ ಕಾರ್ಯಕ್ರಮ ವಿರುದ್ಧ ಬೆಂಗಳೂರು ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ!
ಕಾಂಗ್ರೆಸ್ ವಿರೋಧ ಮಾಡುವ ಕಾರಣಕ್ಕಾದರೂ ಗಾಂಧಿ ಹೋರಾಟ ಅನುಸರಿಸುವ ಬಿಜೆಪಿಗೆ ಅಭಿನಂದನೆಗಳು! ಈ ಧರಣಿ ಸತ್ಯಾಗ್ರಹದಲ್ಲಿ ಬಿಜೆಪಿ ನಾಯಕರು ನಾತುರಾಮ್ ಗೋಡ್ಸೆ ಫೋಟೋ ಕೊರಳಿಗೆ ನೇತು ಹಾಕಿಕೊಂಡರೆ ಕನಿಷ್ಠ ಮಹಾತ್ಮಾ ಗಾಂಧೀಜಿ ಆತ್ಮಕ್ಕೆ ಶಾಂತಿ ದೊರೆಯುತ್ತದೆ!
ತಮ್ಮ ಸುದ್ದಿ ಘೋಷ್ಟಿಯಲ್ಲಿ ಬಿಜೆಪಿ ಅಧ್ಯಕ್ಷರು ಎರಡು ವಿಚಾರ/ಹೆಸರು ಪ್ರಸ್ತಾಪ ಮಾಡಿದ್ದಾರೆ.
ಒಂದು ಶ್ರೀ ಅಂಬೇಡ್ಕರ್, ಇನ್ನೊಂದು ಶ್ರೀ ಶಾಮ್ ಪ್ರಸಾದ್ ಮುಖರ್ಜಿ. ಪಕ್ಷ ರಾಜಕಾರಣ ಬದಿಗಿಟ್ಟು ಅಂಬೇಡ್ಕರ್ ಅವರನ್ನು ಕೇಂದ್ರ ಕಾನೂನು ಸಚಿವರು ಮತ್ತು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರು ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಆಶಯಗಳ ಸಂವಿಧಾನ ಮೂಲಕ ಜಾರಿ ಮಾಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಆದರೆ ಹಿಂದೂ ಧರ್ಮದಲ್ಲಿ ಸಾಯಲು ಬಯಸದೆ ಅಂಬೇಡ್ಕರ್ ಬೇರೆ ಧರ್ಮ ಸೇರಲು ಮನುವಾದಿಗಳು ಅರ್ತಾತ್ ಬಿಜೆಪಿಗರು ಕಾರಣ ಅಲ್ಲವೇ?
ಈ ಕುರಿತು ವಿಜೇಂದ್ರ ಪೂರ್ವಿಕರು ಪ್ರಾಯಶ್ಚಿತ ಯಾವಾಗ ಮಾಡಿಕೊಂಡರು?
ಸಂವಿಧಾನದ ಕಲಂ 370 ರ ಕುರಿತು ಜನಸಂಘದ ಸ್ಥಾಪಕ ಶಾಮ್ ಪ್ರಸಾದ್ ಮುಖರ್ಜಿ ಹೆಸರನ್ನು ಬಿಜೆಪಿ ಯತೇಚವಾಗಿ ಬಳಸುತ್ತದೆ. ಜಮ್ಮು ಕಾಶ್ಮೀರಗೆ ಕಲಂ 370 ವಿರೋಧ ಮಾಡಿದ್ದ ಅವರು, ನೆಹರು ಅವರ ಅಂದಿನ ತೀರ್ಮಾನ ಸರಿ ಮತ್ತು ಅನಿವಾರ್ಯ ಎಂದು ಲೋಕಸಭೆ ಅಧಿವೇಶನದಲ್ಲಿ ಮಾತನಾಡಿರುವುದು ಸುಳ್ಳೇ?
ಸತ್ಯವನ್ನು ತಿರುಚುವ ಬಿಜೆಪಿ ಲೋಕಸಭೆ ನಡವಳಿಕೆಯ ಅವರ ಭಾಷಣ ಓದಲಿ ಅಥವಾ ಬಹಿರಂಗ ಪಡಿಸಲಿ.
ರಾಜ್ಯ ಬಿಜೆಪಿ ಗುಂಪುಗಾರಿಕೆಗೆ ಉತ್ತರ ನೀಡಲು ಸಾಧ್ಯವಾಗದೆ ತತ್ತರಿಸಿರುವ ವಿಜೇಂದ್ರ, ಗಾಂಧಿ ಭಾರತ ಐತಿಹಾಸಿಕ ಕಾರ್ಯಕ್ರಮ ವಿರೋದಿಸುವ ಮೂಲಕ ಅವರ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.
ರಾಜಕಾರಣದಲ್ಲಿ ಗಟ್ಟಿ ನಿಲುವು ಮತ್ತು ಹೋರಾಟ ಗೊತ್ತಿಲ್ಲದೇ ಅಧಿಕಾರ ಪಡೆದಿರುವ ವಿಜೇಂದ್ರ, ತಮಗೆ ಶಕ್ತಿ ಇದ್ದರೆ ನಾಳಿನ ಹೋರಾಟಕ್ಕೆ ಅವರ ಪಕ್ಷದ ಎಲ್ಲಾ ಶಾಸಕರು ಒಟ್ಟಾಗಿ ಪಾಲ್ಗೊಳ್ಳವಂತೆ ಮಾಡಿದರೆ ಅದೇ ಅವರ ಅತಿ ದೊಡ್ಡ ಸಾಧನೆ ಆಗುತ್ತದೆ!
ಬಾಲಭವನದ ಈ ಬಿಜೆಪಿ ಅಧ್ಯಕ್ಷರ ನೋಡಿ ಜಗನ್ನಾಥ ಭವನದ ರಾಜ್ಯ ಬಿಜೆಪಿ ನಾಯಕರು ಬೀದಿ ಬೀದಿಯಲ್ಲಿ ನಗುತ್ತಿದ್ದಾರೆ. ವಿಜೇಂದ್ರ ಅಧ್ಯಕ್ಷ ಸ್ಥಾನದ ರಾಜೀನಾಮೆ ನಿರೀಕ್ಷೆಯಲ್ಲಿ ಇರುವ ರಾಜ್ಯ ಬಿಜೆಪಿ ಜಗನ್ನಾಥ ಭವನದ ನಾಯಕರು, ಇವರ ಹೋರಾಟಗಳು ನಕಲಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಗಾಂಧಿ ಭಾರತ ಕಾರ್ಯಕ್ರಮ ವಿರುದ್ಧ ಹೋರಾಟ ಮಾಡುವ ಮೊದಲು ವಿಜೇಂದ್ರ ಮತ್ತು ಅವರ ಬಿಜೆಪಿ ಬಾಲಭವನದ ಪಟಾಲಂ ಪ್ರಾಯಶ್ಚಿತ ಮಾಡಿಕೊಳ್ಳಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಹಾರೈಸುತ್ತದೆ.
-
ರಮೇಶ್ ಬಾಬು,
ಅಧ್ಯಕ್ಷರು, ಕೆಪಿಸಿಸಿ ಮಾಧ್ಯಮ ವಿಭಾಗ
26-12-24
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ