ಕನಕಗಿರಿ, 26 ಡಿಸೆಂಬರ್ (ಹಿ.ಸ.)
ಆ್ಯಂಕರ್: ಆ.1 ರಂದು ಸುಪ್ರಿಂ ಕೋರ್ಟ್ ಒಳ ಮೀಸಲಾತಿ ಜಾರಿ ಮಾಡಲು ಆಯಾ ರಾಜ್ಯಗಳಿಗೆ ಅಧಿಕಾರವಿದೆ ಎಂದು ತಿರ್ಪು ನೀಡಿದ್ದರೂ ಸಹ, ಕರ್ನಾಟಕ ಸರಕಾರ ಎಸ್ಸಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ವಿಳಂಬ ನೀತಿ ತೋರುತ್ತಿದೆ ಎಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ನರಸಪ್ಪ ಅವರು ಹೇಳಿದ್ದಾರೆ.
ಮಾದಿಗೆ ದಂಡೋರ, ಮಾದಿಗ ಮೀಸಲಾತಿ ಹೋರಾಟ ಕೊಪ್ಪಳ ಜಿಲ್ಲಾ ಸಮಿತಿ, ಕನಕಗಿರಿ ವಿಧಾನಸಭಾ ಮಾದಿಗರ ಜಾಗೃತಿಯಿಂದ ವೇದಿಕೆಯು ಪ್ರತಿಭಟನೆಯ ಮೂಲಕ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರಿಗ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧ್ಯಕ್ಷ ಸುಭಾಸ ಕಂದಕೂರು ಅವರು ಮಾತನಾಡಿ, ನಲವತ್ತು ವರ್ಷದ ಹೋರಾಟಕ್ಕೆ ಫಲ ಸಿಕ್ಕಿಲ್ಲ ಪ್ರಿಂ ಕೋರ್ಟ್ ನ ಆದೇಶ ವಿದ್ದರೂ ಸರ್ಕಾರ ಹಿಂದೇಟು ಹಾಕುತ್ತಿದೆ. ಚುನಾವಣೆಯಲ್ಲಿ ಮಾತ್ರ ನಮ್ಮನ್ನು ಉಪಯೋಗ ಮಾಡಿಕೊಳ್ಳುತ್ತಾರೆ, ಮಾದಿಗ ಸಮಾಜವನ್ನು ಕಡೆಗಣಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ಇಟಗಿಯ ಮಾತಂಗ ಮಹರ್ಷಿ ಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪರಶುರಾಮಪ್ಪ, ಪಟ್ಟಣ ಪಂಚಾಯತ್ ಸದಸ್ಯ ಹನುಮಂತಪ್ಪ ಬಸರಿಗಿಡದ, ಎಚ್.ಎನ್. ಬಡಿಗೇರ, ನರಸಪ್ಪ, ಮೌನೇಶ ದಢೇಸೂಗೂರು, ಗಂಗಣ್ಣ ಸಿದ್ದಾಪುರ, ಮಂಜುನಾಥ ಕೊಂಡಪಲ್ಲಿ, ಹನುಮಂತಪ್ಪ ಡಗ್ಗಿ, ಮೂರ್ತಿ ಸಂಗಾಪೂರ, ಮರಿಯಪ್ಪ ಲಕ್ಕುಂಪುರ, ಇಂಗಳದಾಳ ರಾಮಣ್ಣ, ನಿಂಗಪ್ಪಪೂಜಾರ, ವೆಂಕಟೇಶ ನೀರ್ಲೂಟಿ, ರಮೇಶ ಅಂಗಡಿ, ಮಂಜುನಾಥ, ತಾಲ್ಲೂಕು ಅಧ್ಯಕ್ಷರಾದ ಮಹಾದೇವ ಕಾಟಾಪುರ, ದುರುಗೇಶ ಕಂದಕೂರು, ಶಿವಣ್ಣ ಈಳಿಗನೂರು, ಇತರರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್