ಇಸ್ಲಾಮಾಬಾದ್, 26 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನ್ ದ ಅಡಿಯಾಲಾದ ರಾವಲ್ಪಿಂಡಿ ಕೇಂದ್ರ ಕಾರಾಗೃಹದಲ್ಲಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷದ ಸ್ಥಾಪಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ)ಪಕ್ಷದ ರಾಯಭಾರಿಗಳು ಭೇಟಿ ಮಾಡುವ ನಿರೀಕ್ಷೆಯಿದೆ.
ಪಿಟಿಐ ಸಂಸ್ಥಾಪಕ ಮತ್ತು ದೇಶದ ಪದಚ್ಯುತ ಪ್ರಧಾನಿ ಖಾನ್ ಅವರು ದೀರ್ಘಕಾಲದವರೆಗೆ ರಾವಲ್ಪಿಂಡಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಬಿಕ್ಕಟ್ಟನ್ನು ಕೊನೆಗೊಳಿಸುವ ಕುರಿತು ಪಾಕಿಸ್ತಾನ ಸರ್ಕಾರವು ಕಳೆದ ಸೋಮವಾರ ತಮ್ಮ ರಾಯಭಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಘರ್ಷವನ್ನು ಕೊನೆಗೊಳಿಸಲು, ಮೊದಲು ನ್ಯಾಯಾಂಗ ಆಯೋಗದ ರಚನೆಯನ್ನು ಘೋಷಿಸಬೇಕು ಜೊತೆಗೆ ಪಿಟಿಐ ಪಕ್ಷದ ನಾಯಕರು ಮತ್ತು ಬೆಂಬಲಿಗರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎರಡೂ ಪ್ರಮುಖ ಬೇಡಿಕೆಗಳು ಅಂಗೀಕಾರವಾದರೆ ತಮ್ಮ ನಾಗರಿಕ ಅಸಹಕಾರ ಚಳವಳಿಯನ್ನು ಹಿಂಪಡೆಯುವುದಾಗಿ ಹೇಳಿದರು.
ಇಮ್ರಾನ್ ಖಾನ್ ಅವರ ಸೂಚನೆಯ ಮೇರೆಗೆ, ಅವರ ರಾಯಭಾರಿಗಳು ಇತ್ತೀಚೆಗೆ ಹಲವಾರು ವಿಷಯಗಳ ಬಗ್ಗೆ ಪಾಕಿಸ್ತಾನ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್