ನವದೆಹಲಿ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಿರಿಯಾ-ಇಸ್ರೇಲ್ ಗಡಿಯಲ್ಲಿ ಶಾಂತಿಪಾಲನಾ ಪಡೆಯ ನೇತೃತ್ವ ವಹಿಸಿದ್ದ ಬ್ರಿಗೇಡಿಯರ್ ಅಮಿತಾಭ್ ಝಾ ಅವರ ನಾಯಕತ್ವ ಮತ್ತು ಬದ್ಧತೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಗೌರವ ನಮನ ಸಲ್ಲಿಸಿದ್ದಾರೆ.
ಭಾರತದ ಬ್ರಿಗೇಡಿಯರ್ ಜನರಲ್ ಅಮಿತಾಭ್ ಝಾ ಅವರ ನಿಧನದಿಂದ ಗುಟೆರೆಸ್ ದುಃಖಿತರಾಗಿರುವುದಾಗಿ ಪ್ರಧಾನ ಕಾರ್ಯದರ್ಶಿಯವರ ವಕ್ತಾರ ಸ್ಟೆಫನಿ ಟ್ರಂಪ್‌ಬಾಲಿ ಹೇಳಿದ್ದಾರೆ. ಗೋಲನ್ ಹೈಟ್ಸ್‌ನಲ್ಲಿ ವಿಶ್ವಸಂಸ್ಥೆಯ ಡಿಸ್‌ಎಂಗೇಜ್‌ಮೆಂಟ್ ಅಬ್ಸರ್ವರ್ ಫೋರ್ಸ್‌ನ - ಯುಎನ್‌ಡಿಒಎಫ್ ಡೆಪ್ಯುಟಿ ಫೋರ್ಸ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬ್ರಿಗೇಡಿಯರ್ ಅಮಿತಾಭ್ ಝಾ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಅವರು ಇತ್ತೀಚೆಗೆ ಸಿರಿಯಾದಲ್ಲಿ ಬಷರ್ ಅಲ್-ಅಸ್ಸಾದ್ ಸರ್ಕಾರದ ಪತನದ ನಂತರದ ಗಂಭೀರ ಸಂದರ್ಭದಲ್ಲಿ ಯುಎನ್‌ಡಿಒಎಫ್ ನ ಕಾರ್ಯನಿರ್ವಾಹಕ ಫೋರ್ಸ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್