ಪುಟಿದೆದ್ದ ಷೇರು ಸೂಚ್ಯಂಕಗಳು
ಮುಂಬೈ, 23 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮುಂಬೈ ಷೇರು ಮಾರುಕಟ್ಟೆಯಲ್ಲಿ ಷೇರು ಸಂವೇದಿ ಸೂಚ್ಯಂಕ-ಸೆನ್ಸೆಕ್ಸ್ ೪೯೮ ಅಂಕಗಳು ಏರಿಕೆಯಾಗಿದ್ದು, ದಿನದ ಅಂತ್ಯಕ್ಕೆ ೭೮ ಸಾವಿರದ ೫೪೦ ಅಂಕಗಳು ದಾಖಲಾಗಿದೆ. ಇದೇ ವೇಳೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ೧೬೬ ಅಂಕಗಳು ಏರಿಕೆ ಕಂಡಿದ್ದು, ದಿನದ ಅಂತ್ಯಕ್ಕೆ ೨೩,
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ಬಹುತೇಕ ಎಲ್ಲಾ ಸೂಚ್ಯಂಕಗಳು ಲಾಭದೊಂದಿಗೆ ಕೊನೆಗೊಂಡವು. ಪಿಎಸ್​ಯು ಬ್ಯಾಂಕ್, ಫಾರ್ಮಾ, ಎಫ್ಎಂಸಿಜಿ, ರಿಯಾಲ್ಟಿ, ಆಟೋ, ಐಟಿ ಮತ್ತು ಮಾಧ್ಯಮ ಕಂಪನಿಗಳ ಷೇರುಗಳು ಲಾಭ ಗಳಿಸಿದವು.


ಮುಂಬೈ, 23 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮುಂಬೈ ಷೇರು ಮಾರುಕಟ್ಟೆಯಲ್ಲಿ ಷೇರು ಸಂವೇದಿ ಸೂಚ್ಯಂಕ-ಸೆನ್ಸೆಕ್ಸ್ ೪೯೮ ಅಂಕಗಳು ಏರಿಕೆಯಾಗಿದ್ದು, ದಿನದ ಅಂತ್ಯಕ್ಕೆ ೭೮ ಸಾವಿರದ ೫೪೦ ಅಂಕಗಳು ದಾಖಲಾಗಿದೆ. ಇದೇ ವೇಳೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ೧೬೬ ಅಂಕಗಳು ಏರಿಕೆ ಕಂಡಿದ್ದು, ದಿನದ ಅಂತ್ಯಕ್ಕೆ ೨೩, ೭೫೩ ಅಂಕಗಳು ದಾಖಲಾಗಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಬಹುತೇಕ ಎಲ್ಲಾ ಸೂಚ್ಯಂಕಗಳು ಲಾಭದೊಂದಿಗೆ ಕೊನೆಗೊಂಡವು. ಪಿಎಸ್​ಯು ಬ್ಯಾಂಕ್, ಫಾರ್ಮಾ, ಎಫ್ಎಂಸಿಜಿ, ರಿಯಾಲ್ಟಿ, ಆಟೋ, ಐಟಿ ಮತ್ತು ಮಾಧ್ಯಮ ಕಂಪನಿಗಳ ಷೇರುಗಳು ಲಾಭ ಗಳಿಸಿದವು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ೮೪ ರೂಪಾಯಿ ೧೧ ಪೈಸೆಯಷ್ಟಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande