ಸಂಜೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ 
ಮಂಡ್ಯ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಕ್ಕರೆನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಮೂರನೇ ದಿನ ಇಂದು ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬೀಳಲಿದ್ದು, ಇಂದು ನಾನಾ ಗೋಷ್ಠಿಗಳು, ಕವಿಗೋಷ್ಠಿ, ಅಧ್ಯಕ್ಷರೊಂದಿಗೆ ಸಂವಾದ ಸಹಿತ ನಾನಾ ಕಾರ್ಯಕ್ರಮಗಳು ಆರ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತೆರೆ


ಮಂಡ್ಯ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಕ್ಕರೆನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಮೂರನೇ ದಿನ ಇಂದು ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬೀಳಲಿದ್ದು, ಇಂದು ನಾನಾ ಗೋಷ್ಠಿಗಳು, ಕವಿಗೋಷ್ಠಿ, ಅಧ್ಯಕ್ಷರೊಂದಿಗೆ ಸಂವಾದ ಸಹಿತ ನಾನಾ ಕಾರ್ಯಕ್ರಮಗಳು ಆರಂಭಗೊಂಡಿವೆ.

ಎರಡು ದಿನದಿಂದ ಸಾಕಷ್ಟು ಚರ್ಚೆಗಳು, ವಿಚಾರ ಮಂಥನ ನಡೆದಿವೆ. ಮೂರನೇ ದಿನ ಮೂರು ವೇದಿಕೆಗಳಲ್ಲೂ ಚಟುವಟಿಕೆಗಳಿವೆ. ಅಲ್ಲದೇ ಹಲವಾರು ವಿಷಯಗಳ ಕುರಿತು ಕರ್ನಾಟಕದ ಮಾತ್ರವಲ್ಲದೇ ಹೊರ ದೇಶಗಳಿಂದಲೂ ಬಂದಿರುವ ಕನ್ನಡ ತಜ್ಞರು ವಿಚಾರವನ್ನು ಮಂಡಿಸಲಿದ್ದಾರೆ.

ಸಂಜೆ 4ಕ್ಕೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿದ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಹೆಚ್.​ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ.ಗೊ.ರು.ಚನ್ನಬಸಪ್ಪ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ ಉಪಸ್ಥಿತರಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande