ನಾಳೆ ವಿಶ್ವದಲ್ಲೆಡೆ ಉಪೇಂದ್ರ 'ಯುಐ' ಚಿತ್ರ ಪ್ರದರ್ಶನ
ಬೆಂಗಳೂರು, 19 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ, ಉಪೇಂದ್ರ ಅವರೇ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ 'ಯುಐ' ಚಿತ್ರ ತೆರೆಕಾಣಲು ಸಿದ್ದವಾಗಿದ್ದು, ನಾಳೆ ಡಿ.20ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. 'ಯುಐ' ಚಲನಚಿತ್ರ ಕ
ವಿಶ್ವದಾದ್ಯಂತ


ಬೆಂಗಳೂರು, 19 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ, ಉಪೇಂದ್ರ ಅವರೇ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ 'ಯುಐ' ಚಿತ್ರ ತೆರೆಕಾಣಲು ಸಿದ್ದವಾಗಿದ್ದು, ನಾಳೆ ಡಿ.20ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

'ಯುಐ' ಚಲನಚಿತ್ರ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಲನಚಿತ್ರವು ವಿಶ್ವದಾದ್ಯಂತ ತೆರೆ ಕಾಣಲಿದೆ.ಅದರಲ್ಲೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಚಿತ್ರಮಂದಿರಗಳಲ್ಲಿ ಟಿಕೆಟ್ ಗಳು ಭಾರಿ ಮೊತ್ತದಲ್ಲಿ ಖರೀದಿಯಾಗಿದೆ ಎಂದು ಹೇಳಲಾಗಿದೆ.

‘ಯುಐ’ ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಸಾಧು ಕೋಕಿಲ, ಮುರಳಿ ಶರ್ಮಾ, ಸನ್ನಿ ಲಿಯೋನ್, ಇಂದ್ರಜಿತ್ ಲಂಕೇಶ್, ಓಂ ಪ್ರಕಾಶ್ ರಾವ್, ಗುರುಪ್ರಸಾದ್ ತಾರಾಗಣದಲ್ಲಿದ್ದಾರೆ. ಕರ್ನಾಟಕದ ಬೆಂಗಳೂರಿನ

ಊರ್ವಶಿ, ವೀರೇಶ್, ಸಿದ್ದೇಶ್ವರ, ನವರಂಗ್, ಭಾರತಿ ಚಿತ್ರಮಂದಿರಗಳಲ್ಲಿ ನಾಳೆ ಬೆಳಗ್ಗೆ 6.30ಕ್ಕೆ ಪ್ರದರ್ಶನ ಇರಲಿದೆ.

ಪೇಯ್ಡ್ ಪ್ರೀಮಿಯರ್ ಪ್ರದರ್ಶನ ಹಾಗೂ ಮಧ್ಯರಾತ್ರಿ ಪ್ರದರ್ಶನಗಳಿಗೆ ‘ಯುಐ’ ಚಿತ್ರತಂಡ ಕಡಿವಾಣ ಹಾಕಿದೆ. 6.30ರ ಬಳಿಕವೇ ಚಲನಚಿತ್ರ ಪ್ರದರ್ಶನ ಆರಂಭವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande