ಕೌಲಾಲಂಪುರ್, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮಲೇಷ್ಯಾದ ಕೌಲಾಲಂಪುರದಲ್ಲಿ ನಾಳೆ ನಡೆಯಲಿರುವ ೧೯ ವರ್ಷದೊಳಗಿನವರ ಮಹಿಳಾ ಟಿ-೨೦ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ ೭ ಗಂಟೆಗೆ ನಡೆಯಲಿದೆ. ನಿನ್ನೆ ನಡೆದ ಸೂಪರ್-೪ ಪಂದ್ಯದಲ್ಲಿ ಭಾರತ, ೪ ವಿಕೆಟ್‌ಗಳಿಂದ ಶ್ರೀಲಂಕಾವನ್ನು ಮಣಿಸಿ, ಫೈನಲ್ ಪ್ರವೇಶಿಸಿದರೆ, ಬಾಂಗ್ಲಾದೇಶ ತಂಡ, ನೇಪಾಳ ತಂಡವನ್ನು ಮಣಿಸಿ, ಫೈನಲ್‌ಗೆ ಲಗ್ಗೆ ಇಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್