ನವದೆಹಲಿ, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಇತ್ತೀಚಿಗೆ ಚೆಸ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಡಿ.ಗುಕೇಶ್ ಮುಂಬರುವ ಫಿಡೆ ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ. ಆ ಸ್ಪರ್ಧೆಯಲ್ಲಿ ಅರ್ಜುನ್ ಎರಿಗೈಸಿ ಮತ್ತು ಆರ್. ಪ್ರಗ್ನಾನಂದ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ವಿಶ್ವದ ನಂ. ೧ ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್ ಹಾಗೂ ಸೂಪರ್-ಗ್ರ್ಯಾಂಡ್ ಮಾಸ್ಟರ್‌ಗಳಾದ ಫ್ಯಾಬಿಯಾನೊ ಕರುವಾನಾ, ಇಯಾನ್ ನೆಪೊಮ್ನಿಯಾಚ್ಚಿ ಮತ್ತು ಹಿಕಾರು ನಕಮುರಾ ಭಾಗವಹಿಸಲಿದ್ದಾರೆ. ಫಿಡೆ ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚಾಂಪಿಯನ್‌ಶಿಪ್‌ಗಳು ಡಿಸೆಂಬರ್ ೨೬ ರಿಂದ ೩೧ ರ ವರೆಗೆ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್