ಸಿರುಗುಪ್ಪ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಿರುಗುಪ್ಪ ನಗರದಲ್ಲಿ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಿಂಧನೂರು ತಾಲೂಕಿನ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರು ಸಿಂಧನೂರಿನ ನಟರಾಜ ಕಾಲೊನಿ ನಿವಾಸಿ ಮಹಮ್ಮದ್ ಗೌಸ್ (23) ಮತ್ತು ದೇವದುರ್ಗ ತಾಲೂಕು ಹೇರೂರಿನ ಗ್ರಾಮ ನಿವಾಸಿ ಹನುಮಂತ (38) ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಸಿರುಗುಪ್ಪದ 2 ಮನೆಗಳ್ಳತನ ಪ್ರಕರಣಗಳಲ್ಲಿ ಕಳುವಾಗಿದ್ದ 185 ಗ್ರಾಂ ಬಗಾರದ ಆಭರಣಗಳು (ಅಂದಾಜು ಮೊತ್ತ ರೂ,12,95 ಲಕ್ಷ ರೂ) ಹಾಗು ಒಂದು ಮೋಟಾರ್ ಸೈಕಲ್‍ನ್ನು ವಶಕ್ಕೆ ಪಡೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್