ಕೊಪ್ಪಳ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಶಾಂತೇಶಕುಮಾರ ಚಲುವಾದಿ ಕುಕನೂರ ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಫೋಕ್ಸೊ) ಕೊಪ್ಪಳ ಇವರು ಆರೋಪಿಗೆ ಶಿಕ್ಷೆ ವಿಧಿಸಿರುತ್ತಾರೆ.
ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ಕಕ್ಕಿಹಳ್ಳಿ ಗ್ರಾಮದ ಕಲ್ಲುಕ್ವಾರಿ ಹತ್ತಿರ ಆರೋಪಿತನು ಪಾರಿವಾಳ ಹಾರಿಸಲು ಬಂದು ಬಾಧಿತಳನ್ನು ಮಾತನಾಡಿಸಿ ಅವಳಿಗೆ ಮದುವೆಯಾಗುತ್ತೇನೆಂದು ನಂಬಿಸಿ 2022 ರ ಜೂನ್ 24 ರಂದು ತನ್ನ ಮೋಟಾರ ಸೈಕಲ್ ಮೇಲೆ ಬಾಧಿತಳ ಮನೆ ಹತ್ತಿರ ಬಂದು ಬಾಧಿತಳಿಗೆ ಅಪಹರಿಸಿಕೊಂಡು ಗಂಗಾವತಿಗೆ ಬಂದು ಗೌಸಿಯಾ ಬೇಗಂ ಎನ್ನುವವರ ಮನೆ ಬಾಡಿಗೆ ಪಡೆದು ಅಲ್ಲಿ ಅಕ್ರಮ ಬಂಧನದಲ್ಲಿರಿಸಿ ರಾತ್ರಿ ಸಮಯದಲ್ಲಿ ಬಲವಂತವಾಗಿ ಅತ್ಯಾಚಾರ ಮಾಡಿರುತ್ತಾನೆ.
ತದನಂತರದಲ್ಲಿ ಕೂಡ ಅತ್ಯಚಾರ ಮಾಡಿ 2022 ರ ಜುಲೈನಲ್ಲಿ 08 ರಂದು ಬೆಂಗಳೂರಿಗೆ ಹೋಗಿ ಅಲ್ಲಿನ ಅಡಿಗೇರ ಹಳ್ಳಿಯ ಲೇಔಟ್ ನಲ್ಲಿ ತಾವು ಗಂಡ ಹೆಂಡತಿ ಎಂದು ಸುಳ್ಳು ಹೇಳಿ ಬಾಡಿಗೆ ರೂಮ ಪಡೆದು 79 ದಿನಗಳವೆರೆಗೆ ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕುಕನೂರ .ಪೊಲೀಸ್, ಠಾಣೆಯ ಪಿ.ಎಸ್.ಐ ಡಾಕೇಶ ಇವರು ದೂರು ಸ್ವೀಕರಿಸಿದ್ದು ಪ್ರಕರಣದ ತನಿಖೆಯನ್ನು ವೀರಾರೆಡ್ಡಿ ಸಿಪಿಐ ಯಲಬುರ್ಗಾ ಇವರು ನಿರ್ವಹಿಸಿದ್ದು ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಭಿತಾಗಿದ್ದರಿಂದ ಆರೋಪಿತನ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು ಸ್ಪೇ.ಎಸ್ಸಿ[ಫೋಕ್ಸೊ] ಸಂ : 67/2022 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ಮಾನ್ಯ ನ್ಯಾಯಾಲಯ ಆರೋಪಿ ಶಾಂತೇಶಕುಮಾರ ಚಲುವಾದಿ ಕುಕನೂರ ಇತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 31,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಕುಮಾರ ಡಿ.ಕೆ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು (ಫೋಕ್ಸೊ) ಕೊಪ್ಪಳ ಇವರು 2024ರ ಡಿಸೆಂಬರ್ 07 ರಂದು ತೀರ್ಪು ಹೊರಡಿಸಿರುತ್ತಾರೆ.
ಸರ್ಕಾರದ ಪರವಾಗಿ ಗೌರಮ್ಮ ದೇಸಾಯಿ ವಿಶೇಷ ಸರ್ಕಾರಿ ಅಭಿಯೋಜಕರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಕುಕನೂರ ಪೊಲೀಸ್ ಠಾಣೆಯ ಸಿಬ್ಬಂದಿ ಅರ್ಜುನ ಇವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಸಕಾಲಕ್ಕೆ ಹಾಜರಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ತಿಳಿಸಿದೆ.
,
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್