ಜೈಸಲ್ಮೇರ್, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ರಾಜಸ್ಥಾನದ ಜೈಸಲ್ಮೇರಿನಲ್ಲಿ ಇಂದು ಜಿಎಸ್‌ಟಿ ಕೌನ್ಸಿಲ್‌ನ 55ನೇ ಸಭೆ ನಡೆಯಲಿದೆ.
ಬೆಳಗ್ಗೆ 11 ರಿಂದ ಮಧ್ಯಾಹ್ನ 1:45 ರವರೆಗೆ ಹೋಟೆಲ್ ಮ್ಯಾರಿಯಟ್ನಲ್ಲಿ ನಡೆಯಲಿರುವ 55 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ದೇಶದ ಹಲವು ರಾಜ್ಯಗಳ ಉಪಮುಖ್ಯಮಂತ್ರಿಗಳು ಮತ್ತು ರಾಜ್ಯಗಳ ಇತರ ಪ್ರಮುಖ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪರೋಕ್ಷ ತೆರಿಗೆಗಳ ಮೇಲಿನ ಶ್ರೇಷ್ಟ ಸಂಸ್ಥೆ, ಜೀವನ ಮತ್ತು ಆರೋಗ್ಯ ವಿಮೆ, ವಿಲಾಸ ವಸ್ತುಗಳು ಮತ್ತು ವಿಮಾನ ಇಂಧನ ಸೇರಿದಂತೆ ನಾನಾ ವರ್ಗಗಳಲ್ಲಿ ಪ್ರಮುಖ ದರ ಬದಲಾವಣೆಗಳನ್ನು ಚರ್ಚಿಸುವ ನಿರೀಕ್ಷೆಯಲ್ಲಿದೆ. ಇದಲ್ಲದೇ, ವರದಿಗಳ ಪ್ರಕಾರ ಹೆಚ್ಚುವರಿಯಾಗಿ, ಸ್ವಿಗ್ಗಿ ಮತ್ತು ಜೊಮಾಟೊದಂತಹ ಆಹಾರ ವಿತರಣಾ ವೇದಿಕೆಗಳ ಮೇಲೆ ವಿಧಿಸಲಾದ ಜಿಎಸ್‌ಟಿ ದರಗಳನ್ನು ಕೌನ್ಸಿಲ್ ನಿರ್ಧರಿಸುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್