ನವದೆಹಲಿ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತದಲ್ಲಿ ಬೇವಿನ ಮರಕ್ಕೆ ಬಹಳ ಪ್ರಾಮುಖ್ಯತೆ ಇದೆ.ಬೇವಿನ ಎಲೆಗಳನ್ನು ಅಗಿಯಲು ಕಹಿಯಾಗಿದ್ದರೂ, ಅವು ನಮ್ಮ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಬೇವಿನ ಸೊಪ್ಪಿನಲ್ಲಿ ಒಂದಲ್ಲ ಹಲವಾರು ಔಷಧೀಯ ಗುಣಗಳಿವೆ.
ಬೇವಿನ ಸೊಪ್ಪಿನ ಬಳಕೆ ಹಲವು ವರ್ಷಗಳ ಹಿಂದಿನಿಂದಲೂ ತಲೆಮಾರಿನಿಂದ ತಲೆಮಾರಿಗೆ ನಡೆದುಕೊಂಡು ಬಂದಿದೆ. ಬೇವಿನ ಎಲೆಗಳು ಮತ್ತು ಬೀಜಗಳನ್ನು ಆಯುರ್ವೇದ ಔಷಧದಲ್ಲಿ ಬಳಸಲಾಗುತ್ತದೆ. ಬೇವಿನಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದರಲ್ಲಿ ಸುಮಾರು 130 ಜೈವಿಕ ಸಕ್ರಿಯ ವಸ್ತುಗಳಿದ್ದು ಅದು ನಮ್ಮ ದೇಹದ ಚರ್ಮ, ಕೂದಲು, ರಕ್ತ ಮೊದಲಾದ ಭಾಗಗಳಿಗೆ ಅತ್ಯುತ್ತಮವಾಗಿದೆ.
ಬೇವಿನಲ್ಲಿ ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಹಾನಿಕಾರಕ ವಸ್ತುಗಳ ವಿರುದ್ಧ ಹೋರಾಡುತ್ತವೆ. ಇದರಲ್ಲಿ ನಿಂಬಿನ್, ನಿಂಬಿಡಿನ್, ಲಿಮೋನಾಯ್ಡ್ಸ್ ನಂತಹ ರಾಸಾಯನಿಕಗಳಿವೆ. ಬೇವಿನ ಎಲೆ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳೊಂದಿಗೆ ಆರೋಗ್ಯವನ್ನು ಸುಧಾರಿಸುವುದು. ಬೇವಿನಲ್ಲಿರುವ ವಿಟಮಿನ್ ಇ ಜೀವಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ಇವುಗಳಲ್ಲಿರುವ ಒಮೆಗಾ-6 ಕೊಬ್ಬಿನಾಮ್ಲಗಳು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ.
ಬೇವಿನ ಮರದ ತೊಗಟೆ, ಎಲೆ, ಬೀಜ ಎಲ್ಲವೂ ಔಷಧಿಯಂತೆ ಕೆಲಸ ಮಾಡುತ್ತದೆ. ಬೇವಿನ ರೆಂಬೆಗಳು ಬಾಯಿಯ ಆರೋಗ್ಯಕ್ಕೆ ಒಳ್ಳೆಯದು, ಎಲೆಗಳು ಇಡೀ ದೇಹಕ್ಕೆ ಪ್ರಯೋಜನವನ್ನು ನೀಡುತ್ತವೆ ಮತ್ತು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುವ ಬೀಜಗಳಿಂದ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತದೆ.
ಬೇವಿನ ಎಲೆಗಳು ಅನೇಕ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ನಮ್ಮ ದೇಹವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ನೆಗಡಿ, ಕೆಮ್ಮು ಮೊದಲಾದ ಕಾಯಿಲೆಗಳನ್ನು ಗುಣಪಡಿಸಲು ಬಳಸುತ್ತಾರೆ
ಕಹಿ ಬೇವಿನ ಸೇವನೆಯಿಂದ ರಕ್ತದೊತ್ತಡದ ಸಮಸ್ಯೆ ದೂರ ಮಾಡಬಹುದು ಮತ್ತು ದೇಹದಲ್ಲಿ ರಕ್ತ ಸಂಚಾರವನ್ನು ಕಾಪಾಡುತ್ತದೆ.ಇದು ಕುಳಿಗಳು ಮತ್ತು ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಬೇವು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಈ ಪ್ರಯೋಜನಗಳು ಸಂಧಿವಾತ ಮತ್ತು ಇತರ ಸಮಸ್ಯೆಗಳನ್ನು ತಡೆಯುತ್ತದೆ. ಮಧುಮೇಹ ಇರುವವರು ಬೇವಿನ ಪುಡಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು.
ಆಯಾಸ, ಕೆಮ್ಮು, ಜ್ವರ, ಹಸಿವಾಗದಿರುವುದು, ಸೋಂಕು ಮುಂತಾದ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ, ಕೆಮ್ಮು, ವಾಂತಿ, ಚರ್ಮ ರೋಗ ಮುಂತಾದ ಸಮಸ್ಯೆಗಳಿಗೆ ಬೇವು ರಾಮಬಾಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್