ಬೆಂಗಳೂರು, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರತಿ ಅಡುಗೆ ಮನೆಯಲ್ಲಿ ಇದ್ದೆ ಇರುವ ತರಕಾರಿ ಎಂದರೆ ಅದುವೇ ಟೊಮೆಟೊ. ಏಕೆಂದರೆ ಇದಿಲ್ಲದಿದ್ದರೆ ಅಡುಗೆ ಬೇಯುವುದಿಲ್ಲ, ಒಗ್ಗರಣೆ ಆಗುವುದಿಲ್ಲ ಒಟ್ಟಿನಲ್ಲಿ ಸಾಂಬಾರ ತಯಾರಾಗುವುದಿಲ್ಲ. ಟೊಮೆಟೊ ತರಕಾರಿಗೆ ತನ್ನದೇ ಆದ ವಿಶೇಷತೆ ಇದೆ.
ಟೊಮೆಟೊಗಳು, ತಮ್ಮ ಸುಂದರ ಬಣ್ಣ ಮತ್ತು ಉತ್ತಮ ಸುವಾಸನೆಯೊಂದಿಗೆ, ಪ್ರಪಂಚದಾದ್ಯಂತ ಪಾಕಶಾಲೆಯಲ್ಲಿ ಬಹಳ ಹಿಂದಿನಿಂದಲೂ ಪ್ರಧಾನವಾಗಿವೆ.
ಟೊಮೆಟೊಗಳು ವಿಟಮಿನ್ ಎ, ಸಿ ಮತ್ತು ಕೆ, ಹಾಗೆಯೇ ಪೊಟ್ಯಾಸಿಯಮ್ ಮತ್ತು ಫೋಲೇಟ್‌ನ ಉತ್ತಮ ಮೂಲವಾಗಿದೆ. ಈ ಪೋಷಕಾಂಶಗಳು ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುತ್ತವೆ, ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತವೆ.
ಹಾಗಾಗಿ ಪ್ರತಿ ದಿನ ನಿಮ್ಮ ಅಡುಗೆ ಪದಾರ್ಥಗಳಲ್ಲಿ ಟೊಮೆಟೋ ಬಳಕೆ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ. ಇದರಿಂದ ಯಾವ ಅಡ್ಡಪರಿಣಾಮವಿಲ್ಲ ಎಂಬುದು ಸಂಶೋಧಕರ ಮಾತು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯದೆ ಮಾಗಿದ ಟೊಮೆಟೊವನ್ನು ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಟೊಮೆಟೊ ತಿನ್ನುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮವಾಗುತ್ತದೆ. ಸಂಧಿವಾತದಿಂದ ತೊಂದರೆ ಇರುವವರು ಟೊಮೆಟೊವನ್ನು ಸೇವಿಸಬೇಕು. ಗರ್ಭಿಣಿಯಾಗಿದ್ದರೆ ಟೊಮೆಟೊ ಸೇವಿಸಬೇಕು. ಈ ಕಾರಣದಿಂದಾಗಿ ದೇಹವು ವಿಟಮಿನ್ ಸಿ ಅನ್ನು ಪಡೆಯುತ್ತದೆ ಮತ್ತು ಇದು ಗರ್ಭಾವಸ್ಥೆಯಲ್ಲಿ ದೇಹಕ್ಕೆ ತುಂಬಾ ಲಾಭಕಾರಿಯಾಗಿದೆ.
ಹೊಟ್ಟೆ ಹುಳುಗಳ ಸಮಸ್ಯೆ ಇದ್ದರೆ ಖಾಲಿ ಹೊಟ್ಟೆಯಲ್ಲಿ ಟೊಮೆಟೊವನ್ನು ಕರಿಮೆಣಸಿನೊಂದಿಗೆ ಬೆರೆಸಿ ತಿನ್ನುವುದು ಒಳ್ಳೆಯದು. ಮಧುಮೇಹದಲ್ಲಿ ಟೊಮ್ಯಾಟೊ ತಿನ್ನುವುದು ಪ್ರಯೋಜನಕಾರಿಯಾಗಿದೆ ಮತ್ತು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.
ಟೊಮೆಟೊ ತಿನ್ನುವುದರಿಂದ ತ್ವಚೆ ಆರೋಗ್ಯ ಸುಧಾರಿಸುತ್ತದೆ. ಇದು ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ತಡೆಯುತ್ತದೆ. ಟೊಮೆಟೊ ಸೇವನೆಯಿಂದ ಚರ್ಮದ ಪದರಗಳಿಂದ ಹೆಚ್ಚುವರಿ ಎಣ್ಣೆ ಅಂಶ ಬಿಡುಗಡೆಯಾಗುವುದು ಕಡಿಮೆಯಾಗುತ್ತದೆ. ಇದು ಚರ್ಮದ ರಂಧ್ರವನ್ನು ಬಿಗಿಗೊಳಿಸುತ್ತದೆ. ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಬಿಸಿಲಿನ ಅಪಾಯಗಳಿಂದ ಚರ್ಮವನ್ನು ರಕ್ಷಿಸುತ್ತದೆ, ಜೊತೆಗೆ ಚರ್ಮದ ಹೊಳಪನ್ನೂ ಹೆಚ್ಚಿಸುತ್ತದೆ.
ಇಷ್ಟೇ ಅಲ್ಲದೆ ನಿಮ್ಮ ದೇಹದಲ್ಲಿ ಕಂಡು ಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳಿಗೆ ರಾಮಬಾಣವಾಗಿ ಟೊಮೆಟೋ ಕೆಲಸ ಮಾಡುತ್ತದೆ. ಅತ್ಯುತ್ತಮವಾದ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ನಿಮ್ಮ ದೇಹದಲ್ಲಿ ಹೆಚ್ಚು ಮಾಡಿ ಹೃದಯದ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ.
ಒಟ್ಟಾರೆಯಾಗಿ, ಹಸಿ ಟೊಮೆಟೊಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಟೊಮೆಟೊ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿರುವುದು ನಿಜ. ಆದರೆ ಕೆಲವರಿಗೆ ಟೊಮೆಟೊ ಅಲರ್ಜಿ ಕೂಡ ಉಂಟು ಮಾಡಬಹುದು. ಹಾಗಾಗಿ ತಜ್ಞರ ಸಲಹೆ ಪಡೆಯುವುದು ಉತ್ತಮ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್