ವಿಶೇಷ ವೇಗದೂತ ರೈಲು ಸಂಚಾರ ರದ್ದು
ಹುಬ್ಬಳ್ಳಿ, 10 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬೆಳಗಾವಿ ಮತ್ತು ಮಣುಗೂರು ನಿಲ್ದಾಣಗಳ ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 07335/07336) ರೈಲು ಸೇವೆ ಕಾರ್ಯಾಚರಣೆಯನ್ನು ತಾಂತ್ರಿಕ ಕಾರಣಗಳಿಂದಾಗಿ ರದ್ದುಪಡಿಸಲಾಗುತ್ತಿದೆ ಎಂದು ನೈಋತ್ಯ ರೇಲ್ವೆ ವಲಯದ ಸಾ
ವಿಶೇಷ ವೇಗದೂತ ರೈಲು ಸಂಚಾರ ರದ್ದು


ಹುಬ್ಬಳ್ಳಿ, 10 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬೆಳಗಾವಿ ಮತ್ತು ಮಣುಗೂರು ನಿಲ್ದಾಣಗಳ ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 07335/07336) ರೈಲು ಸೇವೆ ಕಾರ್ಯಾಚರಣೆಯನ್ನು ತಾಂತ್ರಿಕ ಕಾರಣಗಳಿಂದಾಗಿ ರದ್ದುಪಡಿಸಲಾಗುತ್ತಿದೆ ಎಂದು ನೈಋತ್ಯ ರೇಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1. ಡಿಸೆಂಬರ್ 18, 2024 ರಿಂದ ಮುಂದಿನ ಆದೇಶದವರೆಗೆ ಬೆಳಗಾವಿಯಿಂದ ಮಣುಗೂರು ನಿಲ್ದಾಣದವರೆಗೆ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ (07335) ರೈಲು ಸಂಚಾರ ರದ್ದುಪಡಿಸಲಾಗಿದೆ.

2. ಡಿಸೆಂಬರ್ 19, 2024 ರಿಂದ ಮುಂದಿನ ಆದೇಶದವರೆಗೆ ಮಣುಗೂರುದಿಂದ ಬೆಳಗಾವಿ ತನಕ ಸಂಚರಿಸುವ ವಿಶೇಷ ಎಕ್ಸ್ ಪ್ರೆಸ್ (07336) ರೈಲು ಸಂಚಾರ ರದ್ದುಪಡಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande