ನವದೆಹಲಿ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಲೋಕಸೇವಾ ಆಯೋಗ-೨೦೨೪ನೇ ಸಾಲಿನ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಈಗ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಇತರ ಕೇಂದ್ರ ಸೇವೆಗಳಿಗೆ ಆಯ್ಕೆ ಮಾಡಲು ವ್ಯಕ್ತಿತ್ವ ಪರೀಕ್ಷೆ ಸಂದರ್ಶನಕ್ಕೆ ಹಾಜರಾಗಬೇಕಿದೆ. ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ಸಂದರ್ಶನದ ದಿನಾಂಕಗಳನ್ನು ಶೀಘ್ರ ತಿಳಿಸಲಾಗುವುದು. ಮುಖ್ಯ ಫಲಿತಾಂಶಗಳನ್ನು ಯುಪಿಎಸ್ ಸಿ ಯ ಅಧಿಕೃತ ವೆಬ್ ಸೈಟ್ ನಿಂದ ಪಡೆಯಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್