ನವದೆಹಲಿ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮುಂದಿನ ಮೂರು ವರ್ಷಗಳಲ್ಲಿ 2 ಲಕ್ಷ ಬಿಮಾ ಸಖಿಗಳು ಅಥವಾ ಮಹಿಳಾ ವಿಮಾ ಏಜೆಂಟರನ್ನು ನೇಮಿಸಲು ಸರ್ಕಾರ ಯೋಜಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಸಮಾರಂಭದಲ್ಲಿ ಮಹತ್ವಾಕಾಂಕ್ಷೆಯ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ವತಿಯಿಂದ ಈಗಾಗಲೇ ಹಲವು ಜನೋಪಯೋಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈಗ ಎಲ್‌ಐಸಿ ವಿಮಾ ಸಖಿ ಯೋಜನೆಗೆ ಜಾರಿಗೆ ಬಂದಿದೆ. ಮಹಿಳಾ ಸ್ವಾವಲಂಬನೆ ಅದರಲ್ಲೂ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರಕಾರ ಎಲ್‌ಐಸಿ ವಿಮಾ ಸಖಿ ಯೋಜನೆ ಜಾರಿಗೆ ತಂದಿದೆ.
ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ 2 ಲಕ್ಷ ವಿಮಾ ಸಖಿಯರನ್ನು ನೇಮಿಸುವ ಉದ್ದೇಶವನ್ನು ಸರಕಾರ ಹೊಂದಿದೆ.ಈ ಯೋಜನೆ ಮೂಲಕ ಮಹಿಳೆಯರ ನೇತೃತ್ವದಲ್ಲಿ ವಿಮಾ ವಲಯವು ವಿಸ್ತರಣೆಯಾಗಲಿದೆ. ಎಲ್‌ಐಸಿ ಏಜೆಂಟರು ತಿಂಗಳಿಗೆ ಸರಾಸರಿ 15 ಸಾವಿರ ರೂವರೆಗೂ ಸಂಪಾದಿಸಬಹುದು ಈ ವರ್ಷ 25 ಸಾವಿರ ಬಿಮಾ ಸಖಿಯರನ್ನು ನೇಮಿಸಲಾಗುವುದು ಎಂದು ಹೇಳಿದರು. ಪ್ರತಿ ಮಹಿಳಾ ವಿಮಾ ಏಜೆಂಟ್ ಸ್ವಯಂಸೇವಕರಿಗೆ ಮೊದಲ ವರ್ಷದಲ್ಲಿ ತಿಂಗಳಿಗೆ 7,000 ರೂ., ಎರಡನೇ ವರ್ಷದಲ್ಲಿ ತಿಂಗಳಿಗೆ 6,000 ರೂ., ಮತ್ತು ಮೂರನೇ ವರ್ಷದಲ್ಲಿ ತಿಂಗಳಿಗೆ 5,000ರೂ. ವೇತನ ಭತ್ಯೆಯನ್ನು ನೀಡಲಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್