ಇಕ್ಸಾನ್, 07 ನವೆಂಬರ್(ಹಿ.ಸ.) :
ಆ್ಯಂಕರ್ : ಕೊರಿಯಾ ಗಣರಾಜ್ಯದ ಇಕ್ಸಾನ್ ನಗರದಲ್ಲಿ ನಡೆದ ಕೊರಿಯಾ ಮಾಸ್ಟರ್ಸ್ 2024 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಸ್ಪರ್ಧೆಯ ಭಾರತದ ಕಿರಣ್ ಜಾರ್ಜ್ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಭಾರತದ ಕಿರಣ್ ಜಾರ್ಜ್ ರವರು ಇಂದು ಬೆಳಿಗ್ಗೆ ಪುರುಷರ ಸಿಂಗಲ್ಸ್ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ತೈವಾನ್‌ನ ಚಿ ಯು-ಜೆನ್ ಅವರನ್ನು ಎದುರಿಸಲಿದ್ದಾರೆ.
ರಿಪಬ್ಲಿಕ್ ಆಫ್ ಕೊರಿಯಾದ ಇಕ್ಸಾನ್ ನಗರದಲ್ಲಿ ನಡೆಯುವ ಈ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ ೧೦.೩೦ಕ್ಕೆ ಆರಂಭವಾಗಲಿದೆ. ನಿನ್ನೆ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕಿರಣ್ ಜಾರ್ಜ್, ವಿಯೆಟ್ನಾಂನ ಗುಯೆನ್ ಹೈ ಆಂಗ್ ಅವರನ್ನು ೧೫-೨೧, ೨೧-೧೨, ೨೧-೧೫ ರಿಂದ ಸೋಲಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್