ಡಾರ್ಟ್ಮಂಡ್-ಫ್ರೀಬರ್ಗ್ ಪುಟ್ಬಾಲ್ ಪಂದ್ಯ ಡ್ರಾ
ಫ್ರೀಬರ್ಗ್, 15 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬುಂಡೆಸ್ಲಿಗಾದಲ್ಲಿ ನಡೆದ ಪುಟ್ಬಾಲ್ ಪಂದ್ಯದಲ್ಲಿ ಬೊರುಸ್ಸಿಯಾ ಡಾರ್ಟ್ಮಂಡ್ ಹತ್ತು ಆಟಗಾರರೊಂದಿಗೆ ಆಡಬೇಕಾದ ಪರಿಸ್ಥಿತಿಗೆ ಸಿಲುಕಿದ ಪರಿಣಾಮ ಫ್ರೀಬರ್ಗ್ ವಿರುದ್ಧ 1–1 ಡ್ರಾಕ್ಕೆ ತೃಪ್ತಿಪಡಬೇಕಾಯಿತು. ದ್ವಿತೀಯಾರ್ಧದ ಆರಂಭದಲ್ಲಿ ಜೋಬ್ ಬೆಲ್ಲಿಂಗ್
Football


ಫ್ರೀಬರ್ಗ್, 15 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬುಂಡೆಸ್ಲಿಗಾದಲ್ಲಿ ನಡೆದ ಪುಟ್ಬಾಲ್ ಪಂದ್ಯದಲ್ಲಿ ಬೊರುಸ್ಸಿಯಾ ಡಾರ್ಟ್ಮಂಡ್ ಹತ್ತು ಆಟಗಾರರೊಂದಿಗೆ ಆಡಬೇಕಾದ ಪರಿಸ್ಥಿತಿಗೆ ಸಿಲುಕಿದ ಪರಿಣಾಮ ಫ್ರೀಬರ್ಗ್ ವಿರುದ್ಧ 1–1 ಡ್ರಾಕ್ಕೆ ತೃಪ್ತಿಪಡಬೇಕಾಯಿತು. ದ್ವಿತೀಯಾರ್ಧದ ಆರಂಭದಲ್ಲಿ ಜೋಬ್ ಬೆಲ್ಲಿಂಗ್‌ಹ್ಯಾಮ್ ಕೆಂಪು ಕಾರ್ಡ್ ಪಡೆದಿದ್ದು ಪಂದ್ಯದಲ್ಲಿ ತಿರುವು ತರಿತು. ಈ ಡ್ರಾದೊಂದಿಗೆ ಡಾರ್ಟ್ಮಂಡ್ ಎರಡನೇ ಸ್ಥಾನಕ್ಕೇರಲು ದೊರಕಿದ್ದ ಅವಕಾಶವನ್ನು ಕಳೆದುಕೊಂಡಿತು.

ಮೊದಲಾರ್ಧದಲ್ಲಿ ಡಾರ್ಟ್ಮಂಡ್ ಮೇಲುಗೈ ಸಾಧಿಸಿ 31ನೇ ನಿಮಿಷದಲ್ಲಿ ರಾಮಿ ಬೆನ್ಸೆಬೈನಿ ಗೋಲು ಮೂಲಕ 1–0 ಮುನ್ನಡೆ ಪಡೆದಿತು. ಆದರೆ 53ನೇ ನಿಮಿಷದಲ್ಲಿ ಬೆಲ್ಲಿಂಗ್‌ಹ್ಯಾಮ್ ಹೊರನಡೆದ ನಂತರ ಸಂಖ್ಯಾಬಲ ಪಡೆದ ಫ್ರೀಬರ್ಗ್ ಒತ್ತಡ ಹೆಚ್ಚಿಸಿತು. 75ನೇ ನಿಮಿಷದಲ್ಲಿ ಲ್ಯೂಕಸ್ ಹೋಲರ್ ಅದ್ಭುತ ವಾಲಿ ಮೂಲಕ ಸಮಬಲದ ಗೋಲು ದಾಖಲಿಸಿದರು.

ಕೊನೆಯ ಕ್ಷಣಗಳಲ್ಲಿ ಫ್ರೀಬರ್ಗ್ ಮತ್ತೊಂದು ಗೋಲು ಗಳಿಸಿದರೂ ಅದನ್ನು ಆಫ್‌ಸೈಡ್ ಎಂದು ತೀರ್ಪುಗಾರರು ನಿರಾಕರಿಸಿದರು. ಈ ಫಲಿತಾಂಶದೊಂದಿಗೆ ಡಾರ್ಟ್ಮಂಡ್ 29 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, ಆರ್‌ಬಿ ಲೀಪ್‌ಜಿಗ್‌ಗೂ ಸಮಾನ ಅಂಕಗಳಿವೆ. 37 ಅಂಕಗಳೊಂದಿಗೆ ಬೇಯರ್ನ್ ಮ್ಯೂನಿಚ್ ಅಗ್ರಸ್ಥಾನದಲ್ಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande