ಇಂದು ನಟ ಕಮಲ್‌ ಹಾಸನ್‌ ಜನ್ಮದಿನ 
ಚೆನ್ನೈ, 07 ನವೆಂಬರ್(ಹಿ.ಸ.) : ಆ್ಯಂಕರ್ : ನಟ, ರಾಜಕಾರಣಿ ಹೀಗೆ ಬಹುಮುಖ ಪ್ರತಿಭೆಯಾಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಕಮಲ್ ಹಾಸನ್ ಅವರಿಗೆ ಇಂದು (ನವೆಂಬರ್ 7) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರಿಗೆ ಅಭಿಮಾನಿಗಳು, ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದ
ಾಿಾಾ


ಚೆನ್ನೈ, 07 ನವೆಂಬರ್(ಹಿ.ಸ.) :

ಆ್ಯಂಕರ್ : ನಟ, ರಾಜಕಾರಣಿ ಹೀಗೆ ಬಹುಮುಖ ಪ್ರತಿಭೆಯಾಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಕಮಲ್ ಹಾಸನ್ ಅವರಿಗೆ ಇಂದು (ನವೆಂಬರ್ 7) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರಿಗೆ ಅಭಿಮಾನಿಗಳು, ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ

ಕಮಲ್ ಹಾಸನ್ 7 ನವೆಂಬರ್ 1954 ರಂದು, ತಮಿಳು ಅಯ್ಯಂಗಾರ್ ಬ್ರಾಹ್ಮಣ ಕುಟುಂಬದಲ್ಲಿ, ವಕೀಲರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀನಿವಾಸನ್, ಮತ್ತು ಗೃಹಿಣಿಯಾಗಿದ್ದ ರಾಜಲಕ್ಷ್ಮಿ ಅವರಿಗೆ ಜನಿಸಿದರು. ಹಾಸನ್ ಅವರನ್ನು ಆರಂಭದಲ್ಲಿ ಪಾರ್ಥಸಾರಥಿ ಎಂದು ಹೆಸರಿಸಲಾಯಿತು. ನಂತರ ಅವರ ತಂದೆ ತಮ್ಮ ಹೆಸರನ್ನು ಕಮಲ್ ಹಾಸನ್ ಎಂದು ಬದಲಾಯಿಸಿದರು.

ನಟ, ನಿರ್ದೇಶಕ, ಚಿತ್ರಕಥೆಗಾರ, ನೃತ್ಯ ಸಂಯೋಜಕ, ನಿರ್ಮಾಪಕ, ಹಿನ್ನೆಲೆ ಗಾಯಕ ಮತ್ತು ಗೀತರಚನೆಕಾರ, ವಿವಿಧ ಚಲನಚಿತ್ರಗಳಲ್ಲಿ ಅಭಿಮಾನಿಗಳು ಸದಾ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ಇವರು ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ 2898 ಎಡಿಯ ಯಾಸ್ಕಿನ್‌ ಅವತಾರದಿಂದ ಚಾಚಿ 420ಯವರೆಗೆ ಒಂದಕ್ಕಿಂತ ಒಂದು ಭಿನ್ನ ಅವತಾರಗಳಲ್ಲಿ ಕಾಣಿಸಿದ್ದಾರೆ.

ಅವರಿಗೆ ಕನ್ನಡ, ತೆಲುಗು, ಹಿಂದಿ ಮೊದಲಾದ ಭಾಷೆಗಳು ಮಾತನಾಡಲು ಬರುತ್ತವೆ. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಅವರಿಗೆ ಇಲ್ಲಿಯೂ ದೊಡ್ಡ ಅಭಿಮಾನಿ ಬಳಗ ಇದೆ.ಕಮಲ್ ಹಾಸನ್ ಅವರ ಆಸ್ತಿ 584 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಕಳೆದ ಕೆಲ ವರ್ಷಗಳಿಂದ ಅವರ ಆಸ್ತಿಯಲ್ಲಿ ಏರಿಕೆ ಕಾಣುತ್ತಲೇ ಇದೆ. ಕಮಲ್ ಹಾಸನ್ ಅವರು ಹಲವು ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಅವರು ಹಲವು ದುಬಾರಿ ವಸ್ತುಗಳನ್ನು ಹೊಂದಿದ್ದಾರೆ.

ಅವರು ಚೆನ್ನೈನಲ್ಲಿ ಮನೆ ಹೊಂದಿದ್ದಾರೆ. ಅವರು ಚೆನ್ನೈನಲ್ಲಿ ಹೊಂದಿರುವ ಆಸ್ತಿಗಳಲ್ಲಿ ಒಟ್ಟೂ ಬೆಲೆ 92.5 ಕೋಟಿ ರೂಪಾಯಿ ಆಗಿದೆ. ಅವರು ಆಗಾಗ ಲಂಡನ್​ಗೆ ತೆರಳುತ್ತಾರೆ. ಅಲ್ಲಿಯೂ ಅವರು ಮನೆ ಹೊಂದಿದ್ದಾರೆ.

ಕಮಲ್ ಹಾಸನ್ ಬಳಿ ದುಬಾರಿ ಕಾರುಗಳು ಇವೆ. ಬಿಎಂಡಬ್ಲ್ಯೂ 730 ಎಲ್​ಟಿ ಮತ್ತು ಲೆಕ್ಸಸ್​ ಎಲ್​ಎಕ್ಸ್ 570 ಕಾರುಗಳು ಅವರ ಬಳಿ ಇವೆ. ಅವರ ಬಳಿ ಹಡಗು ಕೂಡ ಇದೆ. ಹಾಗಂತ ಇದು ಸಾಮಾನ್ಯ ಹಡಗು ಅಲ್ಲ. ಇದು ಐಷಾರಾಮಿ ಹಡಗು ಆಗಿದೆ. ಆಗಾಗ ಇದರಲ್ಲಿ ಅವರು ಪ್ರಯಾಣ ಬೆಳೆಸುತ್ತಾರೆ.

ಕಮಲ್‌ ಹಾಸನ್‌ ಆಹಾರದ ವಿಷಯದಲ್ಲೂ ಕಟ್ಟುನಿಟ್ಟು ಮತ್ತು ಅಚ್ಚುಕಟ್ಟಾಗಿ ಇರುತ್ತಾರೆ. ಇವರು ಸಮತೋಲಿತ ಆಹಾರ ಸೇವಿಸುತ್ತಾರಂತೆ. ಅಂದರೆ, ಪ್ರೊಟೀನ್‌, ಫೈಬರ್‌, ಹೆಲ್ದಿ ಫ್ಯಾಟ್ಸ್‌ ಒಳಗೊಂಡ ಆಹಾರ ಸೇವಿಸುತ್ತಾರೆ. ಇದದೇ ಸಮಯದಲ್ಲಿ ಸಂಸ್ಕರಿತ ಆಹಾರಗಳು, ಸಕ್ಕರೆ, ಮದ್ಯಪಾನ ಸೇವನೆ ಮಡುವುದಿಲ್ಲ. ಇದರೊಂದಿಗೆ ತಾಜಾ ಹಣ್ಣುಗಳು, ತರಕಾರಿಗಳಿಗೆ ಆದ್ಯತೆ ನೀಡುತ್ತಾರೆ. ರಾತ್ರಿ ಮಿತವಾಗಿ ಊಟ ಮಾಡುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande